ಮಾಜಿ ಮುಖ್ಯಮಂತ್ರಿ ಪರಿವರ್ತನೆಯ ಹರಿಕಾರ ದಿ.ದೇವರಾಜ್ ಅರಸ್ ಅವರ 99ನೇ ಜನ್ಮದಿನ ಈ ಬಾರಿ ಎಲ್ಲಾ ಶಾಲಾಕಾಲೇಜ್ ಗಳಲ್ಲಿ ಆಚರಿಸಲಾಗುತ್ತಿದೆ.ಶಾಲಾ ಹಬ್ಬಗಳ ಆಚರಣೆ ಪಟ್ಟಿಯಲ್ಲಿ ಇದೇ ಪ್ರಥಮ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ದೇವರಾಜ್ ಅರಸ್ ಅವರ ಜನ್ಮದಿನ ಆಚರಣೆ ಸೇರ್ಪಡೆಯಾಗಿದ್ದು ಮೊನ್ನೆಯಷ್ಟೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮುಗಿದಿದ್ದು ನಾಳಿನ ಅರಸ್ ಅವರ ಜನ್ಮದಿನ ಆಚರಣೆಗೆ ಶಾಲಾ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ನಿನ್ನೆಯಿಂದ ಅರಸ್ ಅವರ ಭಾವಚಿತ್ರಕ್ಕೆ ಬೇಡೆಕೆಯಿದ್ದು ಫೋಟೊ ಅಂಗಡಿಗಳ ಮುಂದೆ ಶಾಲಾಶಿಕ್ಷಕರೆ ತುಂಬಿದ್ದಾರೆ.
ಹುಳಿಯಾರಿನ ಸಿದ್ದರಾಮೇಶ್ವರ ಫ್ರೇಮ್ ವರ್ಕ್ಸ್ ನಲ್ಲಿ ಭರದಿಂದ ವ್ಯಾಪಾರವಾಗುತ್ತಿರುವ ದೇವರಾಜ್ ಅರಸ್ ಭಾವಚಿತ್ರ |
ಇದೇ ಮೊದಲ ಬಾರಿಯಾದ್ದರಿಂದ ಫೋಟೊ ಅಂಗಡಿಯಲ್ಲೂ ಭಾವಚಿತ್ರ ದೊರಕದೆ ಕಡೆಗೆ ಅಂತರ್ಜಾಲದಲ್ಲಿ ದೊರೆಕಿದ ಭಾವಚಿತ್ರವನ್ನು ಫೋಟೊ ಸ್ಟುಡಿಯೋದಲ್ಲಿ ಪ್ರಿಂಟ್ ಹಾಕಿಸುವ ಮೂಲಕ ಸಮಾಧಾನನದ ನಿಟ್ಟುಸಿರು ಬಿಡುತ್ತಿದ್ದಾರೆ.
ಇಲ್ಲಿನ ಸಿದ್ದರಾಮೇಶ್ವರ ಫ್ರೇಮ್ ವರ್ಕ್ಸ್ ನಲ್ಲಿ ರಾತ್ರಿಯವರೆಗೂ ಅರಸ್ ಅವರ ಭಾವಚಿತ್ರಕ್ಕೆ ಕಟ್ಟುಗ್ಲಾಸ್ ಹಾಕುವ ಕೆಲಸ ಬಿಡುವಿಲ್ಲದಂತೆ ಸಾಗಿದೆ.ಮುಂಜಾನೆಯಿಂದ ನೂರಕ್ಕೂ ಹೆಚ್ಚು ಫೋಟೊ ಮಾರಿರುವುದಾಗಿ ಹೇಳುತ್ತಾರೆ ಅಂಗಡಿ ಮಾಲೀಕ ನಾಗರಾಜು.ಮುಂಚಿತವಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿಯಿದಿದ್ದರೆ ತಮುಳುನಾಡಿನಿಂದ ಹೆಚ್ಚಿನ ಭಾವಚಿತ್ರ ತರಿಸಿಕೊಳ್ಳಬಹುದಿತ್ತು.ಆದರೂ ಸಹ ಇಲ್ಲೆ ಸ್ಟುಡಿಯೋದಲ್ಲೆ ಫೋಟೊ ಪ್ರಿಂಟ್ ಹಾಕಿಸಿ ಬೇಡಿಕೆ ಪೂರೈಸಿದ್ದೇನೆ ಎನ್ನುತ್ತಾರೆ.ಹಾಗಾಗಿ ಫೋಟೊಕ್ಕೆ ಸ್ವಲ್ಪ ಬೆಲೆ ದುಬಾರಿಯಾಗಿದೆ ಎನ್ನುತ್ತಾರೆ.ಒಟ್ಟಾರೆ ಹೆಚ್ಚೊಕಮ್ಮಿಯೋ ಫೋಟೊ ಸಿಕ್ಕಿದ ತೃಪ್ತಿಯಿಂದ ಶಿಕ್ಷಕರು ಸಹ ಈ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದೆ ಕೇಳಿದಷ್ಟು ದುಡ್ಡುಕೊಟ್ಟುಹೋಗುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ