ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ತೋಟದಲ್ಲಿ ವ್ಯಕ್ತಿಯೊಬ್ಬ ಕರಡಿ ಬಾಯಿಗೆ ತುತ್ತಾದ ದುರ್ಘಟನೆ ಗುರುವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಜರುಗಿದೆ. ಅಲ್ಲದೆ ಇದಕ್ಕೂ ಮೊದಲು ಸಮೀಪದ ಬರದಲೇಪಾಳ್ಯದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಅವರನ್ನೂ ಸಹ ಗಾಯಗೊಳಿಸಿದೆ.
|
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿಗೆ ಬಲಿಯಾದ ಉಮಾಶಂಕರ್ |
|
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಡಿಎಫ್.ಓ ಅಮರ್ ನಾಥ್ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. |
ಹೊನ್ನಯ್ಯನಪಾಳ್ಯದ ಉಮಾಶಂಕರ್ (45) ಕರಡಿ ಕೈಗೆ ಸಿಕ್ಕಿ ಸಾವನಪ್ಪಿದ ವ್ಯಕ್ತಿ. ಈತ ಎಂದಿನಂತೆ ಮನೆಯ ಸಮೀಪದ ತೋಟಕ್ಕೆ ಹೋಗಿ ಕಡ್ಡಿ ಸಿಗಿಯುವಾಗ ಬರದಲೇ ಪಾಳ್ಯದ ಕಡೆಯಿಂದ ಬಂದ ಕರಡಿ ಇತನ ಮೇಲೆ ದಾಳಿ ಮಾಡಿದ್ದು, ಮುಖ,ಪಕ್ಕೆಲುಬು,ಎದೆ,ತಲೆಯ ಭಾಗವನ್ನು ಕಿತ್ತುಹಾಕಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ದಿನ ಬೆಳಿಗ್ಗೆ ಬರದಲೇ ಪಾಳ್ಯದ ನಿವೃತ್ತ ಶಿಕ್ಷಕ ಚನ್ನಪ್ಪ ಎಂಬುವರ ಮೇಲೆಯೂ ಸಹ ದಾಳಿ ಮಾಡಿ ಅವರ ತಲೆಯ ಭಾಗವನ್ನು ಪರಚಿ ಗಾಯಗೊಳಿಸಿದೆ ನಂತರ ಅಲ್ಲೇಯಿದ್ದ ರೈತರು ಕರಡಿ ಕೈಯಿಂದ ಅವರನ್ನು ಬಿಡಿಸಿ ಕರಡಿಯನ್ನು ಗುಡ್ಡದಕಡೆ ಅಟ್ಟಿದ್ದಾರೆ, ಗಾಬರಿಗೊಂಡಿದ್ದ ಕರಡಿ ಹೊನ್ನಯ್ಯನಪಾಳ್ಯದ ಮಾರ್ಗವಾಗಿ ಗುಡ್ಡದಕಡೆ ಹೋಗುವಾಗ ತೋಟದಲ್ಲಿದ್ದ ಉಮಾಶಂಕರ್ ಮೇಲೆ ದಾಳಿ ಮಾಡಿದೆ ನಂತರ ಪಕ್ಕದ ತೋಟದಲ್ಲಿದ್ದವರು ಆತನ ಚೀರಾಟವನ್ನು ಕೇಳಿ ಬಂದು ನೋಡುವುದರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು , ಅಲ್ಲದೆ ಕರಡಿ ಅಲ್ಲಿಂದ ಗುಡ್ಡದ ಕಡೆ ಓಡಿಹೋಗಿತು ಎಂದು ಸ್ಥಳೀಯರು ತಿಳಿಸುತ್ತಾರೆ. ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಕುಟುಂಬವರ್ಗದವರ ಆಕ್ರಂದನ ಮನಕಲಕುವಂತಿತ್ತು. ಶಾಸಕ ಸಿ.ಬಿ.ಸುರೇಶ್ ಬಾಬು ಮೃತ ಕುಟುಂಬದವರಿಗೆ ಎರಡು ಲಕ್ಷ್ಯದ ಚೆಕ್ ನೀಡಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಜಿಲ್ಲಾ ಉಪಅರಣ್ಯಾಧಿಕಾರಿ ಅಮರ್ ನಾಥ್, ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜ್, ತಾ.ಪಂ. ಉಪಾಧ್ಯಕ್ಷ ಆರ್.ಪಿ.ವಸಂತಯ್ಯ, ಕೆಂಕೆರೆ ಗ್ರಾ.ಪಂ.ಸದಸ್ಯ ಬಸವರಾಜು ಆಗಮಿಸಿದ್ದು , ಪಿಎಸೈ ಘೋರ್ಪಡೆ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ