ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವರೆಡ್ ಕ್ರಾಸ್, ರಾಷ್ತೀಯ ಸೇವಾಯೋಜನೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಕಾಲೇಜು ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಹುಳಿಯಾರು ಸರ್ಕಾರಿ ಆಸ್ಪತ್ರೆಯ ಡಾ|| ಚಂದನ ಅವರು ರಕ್ತದ ಮಹತ್ವ ಹಾಗೂ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿದರು.
ಭೂಮಿಯ ಮೇಲೆ ಅನೇಕ ವಸ್ತುಗಳನ್ನು ಕೃತಕವಾಗಿ ಉತ್ಪತ್ತಿ ಮಾಡಬಹುದು ಆದರೆ ಮಾನವರ ನರನಾಡಿಯಲ್ಲಿ ಸಂಚರಿಸುವಂತಹ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಅದು ಮಾನವರ ದೇಹದಲ್ಲೇ ಉತ್ಪತ್ತಿ ಸಾಧ್ಯ ಎಂದರು. ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ದೇಹದಲ್ಲಿನ ರಕ್ತವನ್ನು ಮತ್ತೊಬ್ಬರಿಗೆ ನೀಡುವುದರಿಂದ ರಕ್ತಕೊಟ್ಟವರ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನ ಎಂಬುದು ಮಾನವರ ಜೀವನದಲ್ಲಿ ಶ್ರೇಷ್ಠದಾನವಾಗಿದ್ದು, ಯಾರೊಬ್ಬರ ಆಮಿಷಕ್ಕೆ, ಒತ್ತಾಯದಿಂದ ರಕ್ತದಾನಕ್ಕೆ ಮುಂದಾಗದೆ ಸ್ವಯಂಪ್ರೇರಿತರಾಗಿ ರಕ್ತ ನೀಡುವುದು ಒಳಿತು ಎಂದರು. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ಇದರಿಂದ ದೇಹ ಚೈತನ್ಯಯುಕ್ತವಾಗುವುದಲ್ಲದೆ,ಸದೃಢವಾಗುತ್ತದೆ ಎಂದರು. ನಮ್ಮ ದೇಹದ ರಕ್ತದಲ್ಲಿ ಹಲವಾರು ವರ್ಗಗಳಿವೆ. ಅದನ್ನು ಪರೀಕ್ಷಿಸುವ ಮೂಲಕ ತಿಳಿದುಬರುತ್ತದೆ ಎಂದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನದ ಅರಿವು ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಿ.ದೇವಿರಮ್ಮ ಮಾತನಾಡಿದರು. |
ಪ್ರಾಂಶುಪಾಲರಾದ ಡಿ. ದೇವಿರಮ್ಮ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿ, ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸುವುದರಿಂದ ಅವರು ಆ ಬಗ್ಗೆ ತಿಳಿದುಕೊಳ್ಳುವುದಲ್ಲದೆ ಮತ್ತೊಬ್ಬರಿಗೆ ಮನವರಿಕೆ ಮಾಡಿಕೊಡುವಂತವರಾಗಿರುತ್ತಾರೆ ಎಂದರು. ರಕ್ತದಾನ ಎಂಬುದು ಶ್ರೇಷ್ಠದಾನವಾಗಿದ್ದು ಯುವಪೀಳಿಗೆ ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಉಪನ್ಯಾಸಕರಾದ ಶಂಕರಲಿಂಗಯ್ಯ, ಅಶೋಕ್, ಶ್ರೀನಿವಾಸ್, ಸಯ್ಯದ್ ಇಬ್ರಾಹಿಂ,ಹನುಮಂತಪ್ಪ, ಶಿವಯ್ಯ ಸೇರಿದಂತೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ