ಈ ಬಾರಿ ಪಟ್ಟಣದೆಲ್ಲಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಂಡುಬಂತು ಶಾಲಾಮಕ್ಕಳಿಂದ ಹಿಡಿದು ಆಟೋಚಾಲಕರು , ಸಾರ್ವಜನಿಕರೂ ಸಹ ಹೆಚ್ಚಿನದಾಗಿ ಪಾಲ್ಗೊಂಡಿದ್ದರು.
ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ವಂದೇಮಾತರಂ ಆಟೋ ಸ್ಟಾಂಡ್ ನ ಚಾಲಕರು ಸಂಭ್ರಮದಿಂದ ಸ್ವಾತಂತ್ರೋತ್ಸವ ಆಚರಿಸಿದರು. |
ಪಟ್ಟಣದ ಗಾಂಧಿಭವದ ಆವರಣದಲ್ಲಿ ಬುಧವಾರ ಮಧ್ಯರಾತ್ರಿ ಡಾ|| ಯತೀಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯುವ ಮೂಲಕ ಚಾಲನೆ ಕಂಡು ಮುಂಜಾನೆ ಬೀದಿಬೀದಿಯಲ್ಲೂ ಆಚರಣೆ ಕಂಡುಬಂತು. ಬಸ್ ನಿಲ್ದಾಣದಲ್ಲಿ ವಂದೆಮಾತರಂ ಆಟೋ ಸ್ಟಾಂಡ್ , ಮ್ಯಾಕ್ಸಿಕ್ಯಾಬ್ ಚಾಲಕರ ಸಂಘ , ರಾಂಗೋಪಾಲ್ ಸರ್ಕಲ್ ನ ಹಾಗೂ ರಾಜ್ ಕುಮಾರ್ ರಸ್ತೆಯ ಆಟೋ ಸ್ಟಾಂಡ್, ವಿಜೃಂಭಣೆಯಿಂದ ಆಚರಿಸಿದರು . ಕರವೇಯಿಂದ ಕರವೇ ವೃತ್ತದಲ್ಲಿ, ಪೋಲಿಸ್ ಠಾಣೆಯಲ್ಲಿ , ಬೆಸ್ಕಾಂ,ಅಂಚೆಕಛೇರಿ, ಬ್ಯಾಂಕ್ , ಯೋಗಿನಾರಾಯಣ ಐಟಿಐ, ಆಂಜನೇಯಸ್ವಾಮಿ ದೇವಾಲಯ ಸರ್ಕಲ್ ನಲ್ಲಿ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅದ್ದೂರಿ ಆಚರಣೆ ನಡೆಯಿತು.
ಈ ಸಂದರ್ಭದಲ್ಲಿ ಕರವೇ ಘಟಕದಿಂದ ಜಿಲ್ಲಾಮಟ್ಟದ ಫಾಸ್ಟ್ ಸೈಕಲ್ ರೇಸ್ ನಡೆದರೆ ಕಾಮನಬಿಲ್ಲು ಫೌಂಡೇಶನ್ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು.ಬ್ರೆಡ್ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ