ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವದೊಂದು ತುರುವೇಕೆರೆಗೆ ಹೇಮಾವತಿ ನೀರು ಹರಿಸದಿದ್ದಲ್ಲಿ ನಾಲೆಯ ತೂಬು ಹೊಡೆದು ನೀರು ಹರಿಸುತ್ತೇನೆ ಎನ್ನುವಂತ ಆಕ್ರೋಶದ ಮಾತನಾಡಿರುವುದನ್ನು ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್ ಖಂಡಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಸ್ಮರಿಸುವ ಬದಲು ನೀರಿನ ವಿಚಾರ ಪ್ರಸ್ತಾಪಿಸಿ ರೈತರನ್ನು ಉದ್ರೇಕಿಸುವಂತ ಪ್ರಚೋದಾತ್ಮಕವಾಗಿ ಮಾತನಾಡಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರ ವರ್ತನೆ ಖಂಡನೀಯ. ಸ್ವಾತಂತ್ರ್ಯೋತ್ಸವ ಸಂದೇಶ ನೀಡುವ ಭರದಲ್ಲಿ ಕೇವಲ ನೀರಿನ ರಾಜಕೀಯ ವಿಷಯ ಪ್ರಸ್ತಾಪಿಸಿ ಜಿಲ್ಲಾ ಸಚಿವರ ವಿರುದ್ದ ಹರಿಹಾಯ್ದಿರುವುದು ಶಾಸಕರ ಸ್ಥಾನಕ್ಕೆ ತರವಲ್ಲ ಎಂದರು. ಜವಬ್ದಾರಿ ಸ್ಥಾನದಲ್ಲಿರುವ ನಾಯಕರ ಮಾತುಗಳು ಮತ್ತೊಬ್ಬರಿಗೆ ಮಾರ್ಗದರ್ಶಕವಾಗಿರಬೇಕೆ ಹೊರತು ಪ್ರಚೋದನಾತ್ಮಕವಾಗಿರಬಾರದು , ಹಬ್ಬ ಹರಿದಿನಗಳಲ್ಲಿ ಏನು ಮಾತನಾಡಬೇಕು ಎಂಬುದನ್ನು ಅರಿತು ಮಾತನಾಡಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ