ಸಾರ್ವಜನಿಕ ಸ್ಥಳ ಮತ್ತು ದೇವಾಲಯಗಳೀಗೆ ಸಮೀಪದಲ್ಲಿದ್ದ ಹಾಗೂ ಅಕ್ಷೇಪಣಾರ್ಹ ಸ್ಥಳದಲ್ಲಿದ್ದ ಮದ್ಯದಂಗಡಿ ತೆರವಿನ ವಿವಾದ ತಾರಕಕ್ಕೇರಿದ್ದು ಅದರ ಮರು ಅಳತೆಕಾರ್ಯ ಬುಧವಾರ ಅಬಕಾರಿ ಡಿಸಿ ಮೋಹನ್ ಕುಮಾರ್ ಅವರ ಸಮಕ್ಷಮ ನಡೆಯಿತು.
ಅಕ್ಷೇಪಣಾರ್ಹ ಮದ್ಯದಂಗಡಿಯಿಂದ ಸಮೀಪದ ದೇವಾಲಯಗಳಿಗೆ ಇರುವ ದೂರವನ್ನು ಅಬಕಾರಿ ಡಿಸಿ ಖುದ್ದು ಅಳತೆ ಮಾಡಿಸುತ್ತಿರುವುದು. |
ಪಟ್ಟಣದ ಟೌನ್ ಕೊಅಪರೇಟಿವ್ ಸೊಸೈಟಿಯ ಕಟ್ಟದಲ್ಲಿ ಇರುವ ಎನ್.ಜಿ.ನಾಗರಾಜು ಅವರ ಶ್ರೀರಂಗನಾಥ ಮದ್ಯದಂಗಡಿಯು ಹುಳಿಯಾರಮ್ಮ, ಅನಂತಶಯನ ರಂಗನಾಥಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಸಾರ್ವಜನಿಕ ಆಸ್ಪತ್ರೆ ಹಾಗೂ ರಾಜ್ಯ ಹೆದ್ದಾರಿಗೆ ಸಮೀಪದಲಿದ್ದು , ಸಾರ್ವಜನಿಕರ, ಸಂಘ ಸಂಸ್ಥೆಯವರ , ದೇವಾಲಯ ಸಮಿತಿಯವರಿಂದ ಅಕ್ಷೇಪಣೆಗೆ ಒಳಗಾಗಿತ್ತು. ಬಾರನ್ನು ಸ್ಥಳಾಂತರಿಸುವಂತೆ ಅಬಕಾರಿ ಡಿಸಿ ಯಿಂದ ಹಿಡಿದು ಆಯುಕ್ತರು ಹಾಗೂ ಅಬಕಾರಿ ಸಚಿವರವರೆಗೂ ಎಡತಾಕಿ ದೂರು ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ತಿಂಗಳು ಅಬಕಾರಿ ಡಿಸಿಯವರೇ ಖುದ್ದು ಅಳತೆ ಮಾಡಲು ಬರಬೇಕಿತ್ತು ಆದರೆ ಅವರು ಗೈರಾಗಿದ್ದರಿಂದ ಅಳತೆ ನಡೆಯದೆ ಮುಂದೂಡಲಾಗಿತ್ತು. ಅಂದು ನಡೆಯಬೇಕಾಗಿದ್ದ ಅಳತೆಕಾರ್ಯ ಬುಧವಾರ ಡಿಸಿ ಅವರ ಉಪಸ್ಥಿತಿಯಲ್ಲಿ ಮತ್ತೆ ಮರುಅಳತೆ ನಡೆಯಿತು.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ನಡೆದ ಆಳತೆ ಕಾರ್ಯ ವೀಕ್ಷಿಸುತ್ತಿರುವ ಸಾರ್ವಜನಿಕರು. |
ಅಬಕಾರಿ ಉಪ ಆಯುಕ್ತರು , ಅಬಕಾರಿ ಉಪಅಧೀಕ್ಷಕರು,ಅಬಕಾರಿ ನಿರೀಕ್ಷಕರು ಸೇರಿದಂತೆ ಹತ್ತಾರು ಅಧಿಕಾರಿಗಳಿದ್ದ ತಂಡ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅಳತೆಕಾರ್ಯ ನಡೆಸಿದರು. ಮದ್ಯದಂಗಡಿಯಿಂದ ಗ್ರಾಮದೇವತೆ ಹುಳಿಯಾರಮ್ಮ ದೇವಸ್ಥಾನಕ್ಕೆ 46 ಮೀ , ಅನಂತಶಯನರಂಗನಾಥಸ್ವಾಮಿ ದೇವಸ್ಥಾನಕ್ಕೆ 96.3ಮೀ , ಬೀರಲಿಂಗೇಶ್ವರ ದೇವಸ್ಥಾನ, ಕೆಂಚಮ್ಮ ದೇವಸ್ಥಾನ, ಸಾರ್ವಜನಿಕ ಆಸ್ಪತ್ರೆ ಹಾಗೂ ರಾಜ್ಯ ಹೆದ್ದಾರಿಯವರೆಗೆ ಇರುವ ದೂರವನ್ನು ಆಳತೆ ಮಾಡಿ ಮಹಜರ್ ಮಾಡಲಾಯಿತು.
ಕಳೆದ ಬಾರಿ ಅಬಕಾರಿ ಇಲಾಖೆಯವರ ಮೇಲೆ ಸಾರ್ವಜನಿಕರು ರೊಚ್ಚಿಗೆದ್ದಿದ್ದರಿಂದ ಈಸಲ ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಪಿಎಸೈ ಘೋರ್ಪಡೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.
ಅದೇ ಸಮಯದಲ್ಲಿ ಸಾರ್ವಜನಿಕರಿಂದ ಬಾರ್ನ ವಿರುದ್ದ ಅನೇಕ ದೂರು ಕೇಳಿಬಂದರೂ ಸಹ ಯಾರ ಸಮಸ್ಯೆಯನ್ನು ಆಲಿಸದ ಉಪ ಆಯುಕ್ತರು ತಾವು Court ಆದೇಶದ ಪ್ರಕಾರ ಆಳತೆ ಕಾರ್ಯಕ್ಕೆ ಬಂದಿದ್ದು ಅದರಂತೆ ಅಳತೆಕಾರ್ಯ ನಡೆಸಿದ್ದು ನಿಮ್ಮ ಯಾವುದೇ ದೂರುಗಳಿಗೂ ಪ್ರತಿಕ್ರಿಯಿಸಲಾರೆ ಎಂದಿದ್ದು ನೆರದಿದ್ದವರ ಆಕ್ರೋಶಕ್ಕೆ ಕಾರಣವಾಯಿತು. ಸನ್ನದು ಸ್ಥಳವು ಅಬಕಾರಿ ಷರತ್ತು ಉಲ್ಲಂಘಿಸಿದ್ದು ತಾವೀಗಾಗಲೆ ಬಾರನ್ನು ಸ್ಥಳಾಂತರಿಸಲು ಆದೇಶಿಸಿದ್ದು ಮಾಲೀಕರು ಕೋಟರ್್ನ ಮೊರೆ ಹೋಗಿರುವುದರಿಂದ ಮುಂದಿನ ಪ್ರಕ್ರಿಯೆವರೆಗೆ ಕಾಯಬೇಕಿದೆ ಎಂದರು.
ಅಬಕಾರಿ ಡಿಸಿ ಮೋಹನ್ ಕುಮಾರ್ , ತಿಪಟೂರು ವಿಭಾಗದ ಉಪಧೀಕ್ಷಕ ತಿಪ್ಪೇಸ್ವಾಮಿ, ಚಿ.ನಾ.ಹಳ್ಳಿ ವಿಭಾಗದ ಅಬಕಾರಿನಿರೀಕ್ಷಕ ವಿಜಯ್ ಕುಮಾರ್ ಸೇರಿದಂತೆ ಸಹಕಾರ ಸಂಘದ ಪದಾಧಿಕಾರಿಗಳು,ದೇವಾಲಯ ಆಡಳಿತಮಂಡಳಿಯವರು, ಸಂಘಸಂಸ್ಥೆಗಳ ಪ್ರತಿನಿಧಿಗಳು,ಸಾರ್ವಜನಿಕರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ