ಇಲ್ಲಿನ ಗ್ರಾ.ಪಂ.ಯಲ್ಲಿ ಸಾರ್ವಜನಿಕರ ಒತ್ತಾಯದ ನಂತರ ಡಿ.ದೇವರಾಜು ಅರಸು ಜಯಂತಿಯನ್ನು ಮಧ್ಯಾಹ್ನದ ನಂತರ ಆಚರಿಸಲಾಯಿತು. ಡಿ.ದೇವರಾಜು ಅರಸು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಹೌದೋ ಅಲ್ಲವೋ ಎಂಬ ಗೊಂದಲದಲ್ಲಿದ್ದ ಗ್ರಾ.ಪಂ.ಯವರು ಆಚರಣೆಗೆ ಮುಂದಾಗಿರಲಿಲ್ಲ. ಆದರೆ ಕೆಲ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಅರಸು ಜಯಂತಿಯನ್ನು ಆಚರಿಸದಿರುವ ಬಗ್ಗೆ ಆಕ್ಷೇಪಿಸಿದ ನಂತರ ಅಧ್ಯಕ್ಷೆ ಕಾಳಮ್ಮನವರು ಇದ್ದ ಮೂವರು ಸಿಬ್ಬಂದಿಯವರೊಂದಿಗೆ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿದರು.
ಹುಳಿಯಾರು ಗ್ರಾ.ಪಂ.ಯಲ್ಲಿ ಆಚರಿಸಲಾದ ಅರಸು ಜಯಂತಿಯಲ್ಲಿ ಅಧ್ಯಕ್ಷೆ ಕಾಳಮ್ಮ ಹಾಗೂ ಸಿಬ್ಬಂದಿಯವರು. |
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಕಛೇರಿ ಕಾರ್ಯ ನಿಮಿತ್ತ ತಾವು ಕೋರ್ಟ್ ಗೆ ಹಾಜರಾಗಿದ್ದು ಸಿಬ್ಬಂದಿಗೆ ಆಚರಿಸುವಂತೆ ಸೂಚಿಸಿದ್ದೆ . ನನ್ನ ಗೈರು ಹಾಜರಿಯಲ್ಲಿ ಆಚರಣೆಗೆ ಮುಂದಾಗದಿರುವುದೆ ಸಮಸ್ಯೆಗೆ ಕಾರಣವಾಗಿದೆ ಎಂದರು. ಗ್ರಾ.ಪಂ.ಸದಸ್ಯ ಗಂಗಾಧರ್ ಮಾತನಾಡಿ ಎಲ್ಲಾ ನೇತಾರರ ಹಬ್ಬ ಹರಿದಿನಗಳನ್ನು ಆಚರಿಸುವಂತೆ ಸೂಚನೆ ನೀಡಲಾಗಿದ್ದರೂ ಈ ಬಗ್ಗೆ ಯಾರೊಬ್ಬರೂ ಗಮನ ಹರಿಸಿಲ್ಲ ಮುಂದಿನ ದಿನಗಳಲ್ಲಿ ಯಾವೊಂದು ಲೋಪವಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ