ಪಟ್ಟಣದ ಪ್ರತಿಯೊಂದು ಮದ್ಯದಂಗಡಿಯೂ ಸ್ಥಳೀಯ ಪಂಚಾಯ್ತಿಯಿಂದ ಲೈಸನ್ಸ್ ಪಡೆಯದೆ ವಹಿವಾಟು ನಡೆಸುತ್ತಿರುವುದು ಅಲ್ಲದೆ ಸುಳ್ಳು ದಾಖಲೆಗಳನ್ನು ನೀಡಿ ಸಿ.ಎಲ್ .9 ಲೈಸನ್ಸ್ ಪಡೆದಿರುವುದರ ಬಗ್ಗೆ ದಾಖಲೆಗಳನ್ನು ನೀಡಿದರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳದ ಅಬಕಾರಿ ಡಿಸಿ ವಿರುದ್ದ ಗ್ರಾ.ಪಂ.ಸದಸ್ಯೆ ಶ್ರೀಮತಿ ಗೀತಾ ಅಶೋಕ್ ಬಾಬು ಹರಿಹಾಯ್ದರು.
ಪಟ್ಟಣದ ಮದ್ಯದಂಗಡಿಯೊಂದರ ಅಳತೆಕಾರ್ಯಕ್ಕೆ ಬುಧವಾರ ಆಗಮಿಸಿದ್ದ ಅಬಕಾರಿ ಡಿಸಿ ಯವರೊಂದಿಗೆ ಸಮಸ್ಯೆ ಬಗ್ಗೆ ದಾಖಲೆಗಳೊಡನೆ ವಿವರಿಸಲು ಹೋದಾಗ ಅವರ ಮಾತಿಗೆ ಕಿವಿಗೊಡದೆ ಎಲ್ಲವೂ ಕಾನೂನಿನಡಿಯಲ್ಲೇ ಲೈಸೆನ್ಸ್ ನೀಡಿದ್ದು , ತಾವೀಗ ಕೋರ್ಟ್ ಅದೇಶದ ನಿಮಿತ್ತ ಇಲ್ಲಿಗೆ ಆಗಮಿಸಿದ್ದು ಬೇರೆ ವಿಚಾರಗಳಿಗೆ ಆಸ್ಪದವಿಲ್ಲ ಎಂದು ತಮ್ಮ ಕೆಲಸದಲ್ಲಿ ತೊಡಗಿಕೊಂಡರು.
ಡಿಸಿಯವರ ವರ್ತನೆಗೆ ತೀವ್ರ ಅಸಮಾಧಾನ ಹೊಂದಿದ ಸದಸ್ಯೆ ಸರ್ವೆಕಾರ್ಯ ಮುಗಿದ ನಂತರ ನಮ್ಮ ಸಮಸ್ಯೆ ಆಲಿಸಿ ಹಾಗೂ ತಪ್ಪೆಸಗಿರುವವರ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಪಟ್ಟಣದ ಜನಸಂಖ್ಯೆ ಹದಿನೈದು ಸಾವಿರವಿದ್ದು ಬಾರ್ ಅಂಡ್ ರೆಸ್ಟೋರೆಂಟ್ ಅನುಮತಿಪಡೆಯಲು ಇಪ್ಪತ್ತಮೂರು ಸಾವಿರ ಜನಸಂಖ್ಯೆ ಇರುವಂತೆ ಸುಳ್ಳು ದಾಖಲೆಗಳನ್ನು ನೀಡಿದ್ದು ಈ ಬಗ್ಗೆ ತನಿಖೆ ಮಾಡಿಸಿ ಎಂದರಲ್ಲದೆ ಜಿಲ್ಲಾಸ್ಥಳಗಳಲ್ಲಿ ಕುಳಿತು ಸ್ಥಳ ಪರಿಶೀಲನೆ ನಡೆಸದೆ ಯಾರದೋ ಪ್ರಭಾವಕ್ಕೆ ಒಳಗಾಗಿ ಲೈಸೆನ್ಸ್ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸದಸ್ಯೆಯ ಮಾತಿಗೆ ಗ್ರಾ.ಪಂ.ಸದಸ್ಯರಾದ ಗಂಗಾಧರ್, ಅನ್ಸರ್ ಅಲಿ ಸೇರಿದಂತೆ ನೆರದಿದ್ದ ಸಾರ್ವಜನಿಕರು ಧ್ವನಿಗೂಡಿಸಿದರೂ ಸಹ ಇದ್ಯಾವೂದಕ್ಕೂ ಕಿವಿಗೊಡದ ಡಿಸಿ ಇದ್ಯಾವೂದು ತಮಗೆ ಸಂಬಂಧವಿಲ್ಲದೆಂತೆ ವರ್ತಿಸಿದ್ದು ಎಲ್ಲರ ಆಕ್ಷೇಪಣೆಗೆ ಕಾರಣವಾಯಿತು. ಸಾರ್ವಜನಿಕರ ಸಮಸ್ಯೆ ಆಹವಾಲು ಆಲಿಸಲು ನಿರಾಕರಿಸಿದ ಡಿಸಿ ಪೊಲೀಸ್ ಬಂದೋಬಸ್ತ್ ನಲ್ಲಿ ಭರೆಂದು ಆಗಮಿಸಿ ಸರೆಂದು ತೆರಳಿದ್ದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ