ಹುಳಿಯಾರು ಪಟ್ಟಣದ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದು ಚಲಿಸಿ ಪೆಟ್ಟಿಗೆ ಅಂಗಡಿಯೊಳಕ್ಕೆ ನುಗ್ಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಹುಳಿಯಾರಿನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಎದುರಿನ ಪಎಟ್ಟಿಗೆ ಅಂಗಡಿಗೆ ನುಗ್ಗಿರುವ ಲಾರಿ. |
ಹಿರಿಯೂರು ಕಡೆಯಿಂದ ಬಂದ ಲಾರಿಯ ಚಾಲಕ ಟೀ ಕುಡಿಯುವ ಸಲುವಾಗಿ ರಸ್ತೆಯ ಬದಿಯಲ್ಲಿ ಲಾರಿ ನಿಲ್ಲಿಸಿ ಹೋದಾಗ ಈ ಘಟನೆ ಸಂಭವಿಸಿದೆ. ಹ್ಯಾಂಡ್ ಬ್ರೇಕ್ ಹಾಕದೆ ತೆರಳಿದ್ದೆ ಇದಕ್ಕೆ ಕಾರಣವಾಗಿದ್ದು ತಗ್ಗಿನಲ್ಲಿ ನಿಂತಿದ್ದ ಲಾರಿ ಮುಂದಕ್ಕೆ ಚಲಿಸಿದೆ ಕೂಡಲೇ ಗಮನಿಸಿದ ಚಾಲಕ ಲಾರಿಯನ್ನ ಹತ್ತಿ ನಿಯಂತ್ರಿಸುವಷ್ಟರಲ್ಲಿ ಲಾರಿ ಕಟಿಂಹ್ ಶಾಪ್ ನ ಉಜ್ಜಿಕೊಂಡು ಟೀ ಅಂಗಡಿಯ ಮುಂದಿನ ಚಪ್ಪರಕ್ಕೆ ತಾಕಿದೆ. ಅಷ್ಟರಲ್ಲಿ ಚಾಲಕ ನಿಯಂತ್ರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದ್ದು ಯಾರಿಗಾದರು ಪ್ರಾಣಹಾಣಿಯಾಗಿದ್ದರೆ ಗತಿಯೇನು ಎಂದ ಅಂಗಡಿ ಮಾಲೀಕರು ಇದರ ನಷ್ಟ ಭರಿಸಬೇಕೆಂದು ಲಾರಿಯನ್ನು ಠಾಣೆಯಲ್ಲಿಗೆ ತಂದು ನಿಲ್ಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ