ಟಿ.ಆರ್.ಎಸ್.ಆರ್ ಶಾಲೆವತಿಯಿಂದ ಪಟ್ಟಣದ ವಾಸವಿ ಶಾಲಾ ಆವರಣದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ "ಎ" ವಿಭಾಗದ ಕ್ರೀಡಾಕೂಟ ಶನಿವಾರ ಮುಕ್ತಾಯಗೊಂಡಿತು.
ಹುಳಿಯಾರಿನ ವಾಸವಿ ಶಾಲಾ ಆವರಣದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸೀಗೇಬಾಗಿ ಹಾಗೂ ಬಸವೇಶ್ವರ ಶಾಲೆಯ ಬಾಲಕಿಯರು ಕಬ್ಬಡಿ ಫೈನಲ್ ಪಂದ್ಯದಲ್ಲಿ ಸೆಣಸಿದರು. |
ಹುಳಿಯಾರು ವಾಸವಿ ಶಾಲಾವರಣದಲ್ಲಿ ನಡೆದ ಕಬಡ್ಡಿ ಫೈನಲ್ ನಲ್ಲಿ ಜಯಗಳಿಸಿದ ಹುಳಿಯಾರು-ಕೆಂಕೆರೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೆಣಸಿದ್ದು ಹೀಗೆ....... |
ಕ್ರೀಡಾಕೂಟದ ಗುಂಪು ಆಟಗಳಾದ ಗಂಡುಮಕ್ಕಳ ವಿಭಾಗದಲ್ಲಿ ವಾಲಿಬಾಲ್ ನಲ್ಲಿ ಹುಳಿಯಾರು-ಕೆಂಕೆರೆ ಪ್ರೌಢಶಾಲೆ ಪ್ರಥಮ, ಜ್ಞಾನಜ್ಯೋತಿ ದ್ವಿತೀಯ ಸ್ಥಾನಗಳಿಸಿದರೆ, ಖೋಖೋದಲ್ಲಿ ವಾಸವಿ ಆಂಗ್ಲಶಾಲೆ ಪ್ರಥಮ, ಹುಳಿಯಾರು-ಕೆಂಕೆರೆ ಪ್ರೌಢಶಾಲೆ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಯಳನಡು ಪ್ರಥಮ,ವಾಸವಿ ಆಂಗ್ಲ ಶಾಲೆ ದ್ವಿತೀಯ, ಕಬಡ್ಡಿಯಲ್ಲಿ ಹುಳಿಯಾರು-ಕೆಂಕೆರೆ ಪ್ರೌಢಶಾಲೆ ಪ್ರಥಮ,ಟಿ.ಆರ್.ಎಸ್.ಆರ್ ಶಾಲೆ ದ್ವಿತೀಯ, ಥ್ರೋಬಾಲ್ ನಲ್ಲಿ ವಾಸವಿ ಆಂಗ್ಲಶಾಲೆ ಪ್ರಥಮ, ಬಸವೇಶ್ವರ ದ್ವಿತೀಯ, ಷಟಲ್ ನಲ್ಲಿ ವಾಸವಿ ಆಂಗ್ಲಶಾಲೆ ಪ್ರಥಮ,ಹುಳಿಯಾರು-ಕೆಂಕೆರೆ ಪ್ರೌಢಶಾಲೆ ದ್ವಿತೀಯ,
ಹೆಣ್ಣುಮಕ್ಕಳ ವಿಭಾಗದಲ್ಲಿ ವಾಲಿಬಾಲ್ ನಲ್ಲಿ ವಾಸವಿ ಆಂಗ್ಲಮಾಧ್ಯಮಶಾಲೆ ಪ್ರಥಮ, ತಮ್ಮಡಿಹಳ್ಳಿಶಾಲೆ ದ್ವಿತೀಯ ಸ್ಥಾನಗಳಿಸಿದರೆ, ಖೋಖೋದಲ್ಲಿ ಟಿಆರ್.ಎಸ್.ಆರ್ ಕನ್ನಡ ಮಾಧ್ಯಮ ಶಾಲೆ ಪ್ರಥಮ, ಕನಕದಾಸ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ವಾಸವಿ ಆಂಗ್ಲಮಾಧ್ಯಮ ಶಾಲೆ ಪ್ರಥಮ,ಯಳನಡು ದ್ವಿತೀಯ, ಕಬಡ್ಡಿಯಲ್ಲಿ ಸೀಗೆಬಾಗಿ ಶಾಲೆ ಪ್ರಥಮ, ಬಸವೇಶ್ವರ ಶಾಲೆ ದ್ವಿತೀಯ,ಥ್ರೋಬಾಲ್ ನಲ್ಲಿ ವಾಸವಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಸರ್ಕಾರಿ ಉರ್ದುಶಾಲೆ ದ್ವಿತೀಯ,ಷಟಲ್ ನಲ್ಲಿ ವಾಸವಿ ಆಂಗ್ಲಮಾಧ್ಯಮ ಶಾಲೆ ಪ್ರಥಮ, ಹುಳಿಯಾರು-ಕೆಂಕೆರೆ ಪ್ರೌಢಶಾಲೆ ದ್ವಿತೀಯ ಸ್ಥಾನಗಳಿಸಿದ್ದಾರೆ.
ಅಥ್ಲೆಟಿಕ್ಸ್ : ಹೆಣ್ಣುಮಕ್ಕಳ ವಿಭಾಗದಲ್ಲಿ 100ಮೀ, 200ಮೀ,800 ಮೀ, 1500ಮೀ ಓಟ , ರಿಲೇಓಟ,ಉದ್ದಜಿಗಿತ ದಲ್ಲಿ ಟಿಆರ್.ಎಸ್ ಆರ್ ಶಾಲೆಗೆ ಲಭಿಸಿದೆ. ಗಂಡುಮಕ್ಕಳ ವಿಭಾಗದಲ್ಲಿ 800 ಮೀ, 1500ಮೀ ಓಟ ವಾಸವಿ ಆಂಗ್ಲ ಮಾಧ್ಯಮ ಶಾಲೆಗೆ, ರಿಲೇಓಟ ,100ಮೀ ಯಳನಡುಶಾಲೆ, ಗುಂಡು ಎಸೆತದಲ್ಲಿ ಬಸವೇಶ್ವರ ಶಾಲೆ, 3000ಮೀ ಓಟದಲ್ಲಿ ಹುಳಿಯಾರು-ಕೆಂಕೆರೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ರೀಡಾಕೂಟವು ಶಾಂತರೀತಿಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶಕ್ಕೆ ಎಡೆಮಾಡಿಕೊಡದೆ ನಡೆದಿದ್ದು, ಹೋಬಳಿ ಎ ವಿಭಾಗದ ಎಲ್ಲಾ ಶಾಲೆಯ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.ಅಲ್ಲದೆ ದೈಹಿಕಶಿಕ್ಷಕರು,ಟೀಂ ಮ್ಯಾನೇಜರ್ ಸೇರಿದಂತೆ ಇತರ ಶಿಕ್ಷಕರು ಆಸಕ್ತಿಯುತವಾಗಿ ಆಟಗಳನ್ನು ಆಡಿಸಿದ್ದಾರೆ ಎಂದು ಕ್ರೀಡಾಕೂಟ ಆಯೋಜಿಸಿದ್ದ ಟಿ.ಆರ್.ಎಸ್.ಆರ್ ಶಾಲೆಯ ಮುಖ್ಯಶಿಕ್ಷಕ ಹೆಚ್.ವಿ.ರಮೇಶ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ