ಗಗನಕ್ಕೇರಿರುವ ಹೂ,ಹಣ್ಣುಗಳ ಬೆಲೆಯ ನಡುವೆಯೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಪಟ್ಟಣದೆಲ್ಲೆಡೆ ಮಹಿಳೆಯರು ಶ್ರದ್ದಾಭಕ್ತಿ ,ಸಡಗರ ಸಂಭ್ರಮದಿಂದ ಆಚರಿಸಿದರು.
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗ್ರಾಮದೇವತೆ ದುರ್ಗಾಪರಮೇಶ್ವರಿಗೆ ವಿಶೇಷ ಅಲಂಕಾರ ಮಾಡಿರುವುದು. |
ಗುರುವಾರದಂದೇ ಹಬ್ಬಕ್ಕೆ ಬೇಕಾದ ಪರಿಕರಗಳಾದ ಹೂ,ಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರುಕಟ್ಟೆಯಿಂದ ತಂದು ಅಣಿಮಾಡಿಕೊಂಡಿದ್ದು,ಶುಕ್ರವಾರ ಮುಂಜಾನೆ ವ್ರತಮಾಡುವವರ ಮನೆಗಳಲ್ಲಿ ಲಕ್ಷ್ಮಿಕಳಶವನ್ನು ಪ್ರತಿಷ್ಠಾಪಿಸಿ ಸೀರೆ,ಬಾಳೆಕಂದು,ಕಬ್ಬಿನಜಲ್ಲೆ,ಹೂವಿನಿಂದ ಅಲಂಕರಿಸಿ ಪೂಜಿಸಿ .ಐಶ್ವರ್ಯ,ಆರೋಗ್ಯ, ಸಮಸ್ತ ಶುಭಫಲಗಳು ಕೈಗೂಡಲಿ ಎಂದು ಪ್ರಾರ್ಥಿಸಿದರು.ಒಬ್ಬಟ್ಟು,ಪಾಯಿಸ ಸೇರಿದಂತೆ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಿದರು.ಸುಮಂಗಲಿಯರು ಅಕ್ಕಪಕ್ಕದ ಮನೆಯರನ್ನು ಕರೆದು ಅರಿಶಿನ-ಕುಂಕುಮ ಬಾಗಿನ ಕೊಡುವ ಮೂಲಕ ಅವರಿಂದ ಆಶೀರ್ವಾದ ಪಡೆದು,ತಮ್ಮ ಮುತೈದೆತನ ಗಟ್ಟಿಯಾಗಿರಲೆಂದು ಬಿನ್ನವಿಸಿಕೊಂಡು ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಿದರು.
ಪಟ್ಟಣದ ಗ್ರಾಮದೇವತೆ ದುರ್ಗಮ್ಮ ದೇವಾಲಯ ಹಾಗೂ ಲಕ್ಷ್ಮಿದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾಕೈಂಕರ್ಯಗಳು ನೆರವೇರಿದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ