ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನ. 6ರಂದು ಶ್ರೀತೀರ್ಥಲಿಂಗೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರದ ಶ್ರೀತೀರ್ಥಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯದ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ ಮತ್ತು 108 ಕುಂಬಾಭಿಷೇಕ ಮಹೋತ್ಸವ ನ. 6ರಿಂದ 7 ರವರೆಗೆ ನಡೆಯಲಿದೆ.   6ರಂದು ಸಂಜೆ ಗೋಧೋಳಿ ಲಗ್ನದಲ್ಲಿ ಧ್ವಜಾರೋಹಣ, ಗಂಗಾ ಪೂಜೆ, 108 ಕುಂಭಾಪೂಜೆ, ಗಣಪತಿಪೂಜೆ, ರುದ್ರಪೂಜೆ ಕಾರ್ಯಕ್ರಮಗಳು ಶ್ರೀಕ್ಷೇತ್ರ ವಜ್ರದಿಂದ ಆರಂಭವಾಗಲಿದೆ.        7ರಂದು ಬೆಳಗಿನಜಾವ 4 ರಿಂದ 5 ಗಂಟೆಗೆ ಸಲ್ಲುವ ಬ್ರಾಹ್ಮಿ ಲಗ್ನದಲ್ಲಿ ಪೂಜಾ ಆಲಯ ಪ್ರವೇಶ, ಮಹಾಗಣಪತಿ ಪೂಜೆ, ಸ್ವಾಸ್ತು ಪೂಜೆ, ಮಂಡಲಕಳಸ ಸೇರಿದಂತೆ ನೂತನ ವಿಗ್ರಹಗಳಿಗೆ ಕ್ಷೀರದಿವಾಸ, ಜಲಧಿವಾಸ ಸೇರಿದಂತೆ ನಾನಾ ಪೂಜಾಧಿ ಕಾರ್ಯಗಳು ನಡೆಯಲಿವೆ.         ತಮ್ಮಡಿಹಳ್ಳಿಯ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರಸ್ವಾಮಿಜಿಯ ಅಮೃತ ಹಸ್ತದಿಂದ ವಿಗ್ರಹ ಪ್ರತಿಷ್ಠಪನೆ, ಪ್ರಾಣ ಪ್ರತಿಪ್ಠಾಪನೆ, ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ, ರುದ್ರಾಭಿಷೇಕ ನಡೆಯಲಿದೆ. 8ಗಂಟೆಗೆ ನವಗ್ರಹ ಮೃತ್ಯುಂಜಯ ಹೋಮ ರುದ್ರಹೋಮ ಪೂರ್ಣಾಹುತಿ ನಂತರ ಮಹಾಮಂಗಳಾರತಿ ನಡೆಯಲಿದೆ.        ಪೂಜಾ ಕಾರ್ಯಕ್ರಮದಲ್ಲಿ ಕೆರೆಗೋಡಿ ರಂಗಾಪುರದ ಗುರುಪರ ದೇಶಿಕೇಂದ್ರಸ್ವಾಮೀಜಿ, ತಮ್ಮಡಿಹಳ್ಳೀ ಡಾ.ಶ್ರೀ.ಅಭಿನವ ಮಲ್ಲಿಕಾರ್ಜುನಸ್ವಾಮೀಜಿ, ಗೋಡೆಕೆರೆಯ ಸಿದ್ದರಾಮೇಶ್ವರ ದೇಶೀಕೇಂದ್ರಸ್ವಾಮೀಜಿ ಹಾಗೂ ಮೃತ್

ಹುಳಿಯಾರುಗೆ ಪಟ್ಟಣ ಪಂಚಾಯ್ತಿ ಪ್ರಸ್ತಾಪ

ದಾಖಲೆ ಸಲ್ಲಿಸಲು ಪಂಚಾಯ್ತಿ ನಿರ್ಲಕ್ಷ್ಯ:ಪಟ್ಟಣ ಪಂಚಾಯ್ತಿ ಭಾಗ್ಯಕ್ಕೆ ಹಿನ್ನಡೆ ವರದಿ: ಡಿ.ಆರ್.ನರೇಂದ್ರಬಾಬು ಹುಳಿಯಾರು: ಬರೋಬ್ಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿಯೆಂಬ ಹೆಗ್ಗಳಿಕೆಯ ಹುಳಿಯಾರು ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತ ಪ್ರಸ್ತಾಪ ಸರ್ಕಾರದ ಮುಂದಿದ್ದು ,ಕಳೆದ ಮೂರ್ನಾಲು ವರ್ಷಗಳಿಂದ ಅಗತ್ಯ ದಾಖಲೆಗಳನ್ನು ಕೋರಿ ಪತ್ರ ವ್ಯವಹಾರ ನಡೆಯುತ್ತಿದ್ದರು ಸಹ ದಾಖಲೆಗಳನ್ನು ಕಳುಹಿಸುವಲ್ಲಿ ಪಂಚಾಯ್ತಿ ಅನಗತ್ಯ ವಿಳಂಬ ತೋರುತ್ತಿರುವ ಪರಿಣಾಮ ನೆನೆಗುದಿಗೆ ಬೀಳಲು ಕಾರಣವಾಗಿದೆ.                  ಪುರಸಭೆ ಅಧಿನಿಯಮದ ಪ್ರಕಾರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾ.ಪಂ. ಜನಸಂಖ್ಯೆ 10,000ಕ್ಕೆ ಕಡಿಮೆಯಿಲ್ಲದಂತೆ ಹಾಗೂ 20,000ಕ್ಕೆ ಹೆಚ್ಚಿಲ್ಲದಂತೆ ಇರಬೇಕು. ಜನಸಾಂದ್ರತೆ ಆ ಪ್ರದೇಶದ ಒಂದು ಚ.ಕಿ.ಮೀ ವೀಸ್ತೀರ್ಣಕ್ಕೆ 400ಕ್ಕಿಂತ ಕಡಿಮೆ ಇಲ್ಲದಿರುವುದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡವಾರು ಪ್ರಮಾಣ ಒಟ್ಟು ಉದ್ಯೋಗದ ಪ್ರಮಾಣದ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಇರಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು ಇಪ್ಪತ್ತು ಸಾವಿರ ದಾಟಿರುವ ಜನ ಸಂಖ್ಯೆ ಹೊಂದಿರುವ ಹುಳಿಯಾರು ಎಂದೋ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರುವ ಎಲ್ಲಾ ಲಕ್ಷಣಗ

ರಾಜ್ಯಮಟ್ಟದ ಹ್ಯಾಮರ್ ಥ್ರೋನಲ್ಲಿ ಭಗತ್‌ಗೆ ತೃತೀಯ ಸ್ಥಾನ

ಹುಳಿಯಾರು:ಕರ್ನಾಟಕ ಅಥ್ಲೇಟಿಕ್ಸ್ ಅಸೋಷಿಯೇಷನ್ ಬಾಗಲಕೋಟೆಯಲ್ಲಿ ಸಂಘಟಿಸಿದ್ದ ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ ಹ್ಯಾಮರ್ ಥ್ರೋನಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಭಗತ್ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

ಸಮುದಾಯ ಭವನದ ನೆರವಿಗೆ ಮನವಿ

ಹುಳಿಯಾರು: ಸಮೀಪದ ಪುಣ್ಯಕ್ಷೇತ್ರವಾಗಿ ಹೆಸರಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ನೆಲಸಿರುವ ಹಂದನಕೆರೆ ಹೋಬಳಿಯ ಬರಗೇಹಳ್ಳಿ ಬೆಟ್ಟದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ೨೪ ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ದೇವಾಲಯ ಸಮಿತಿಯವರು ಮುಂದಾಗಿದ್ದಾರೆ.          ಈಚೆಗಷ್ಟೆ ಪರಸ್ಥಳದಿಂದ ಬರುವ ಭಕ್ತರ ಉಪಯೋಗಕ್ಕಾಗಿ ಎರಡು ಕೊಠಡಿಗಳನ್ನು ನಿರ್ಮಿಸಿ ಶೌಚಾಲಯ ವ್ಯವಸ್ಥೆ ಕೂಡ ಮಾಡಲಾಗಿದ್ದು ಸ್ನಾನದ ಗೃಹ ,ಊಟದ ಹಾಲ್ ಕೂಡ ನಿರ್ಮಿಸುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಅನುಕೂಲ ಕಲ್ಪಿಸಲಾಗಿದೆ.ಸಧ್ಯ ೨೪ ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೈಹಾಕಲಾಗಿದೆ.ಸಹೃದಯರ ಸಹಾಯ ಹಾಗೂ ಅನುದಾನದ ನಂತರವೂ ಹದಿನಾಲ್ಕು ಲಕ್ಷ ರೂಪಾಯಿಗಳು ಕೊರತೆ ಕಂಡುಬಂದಿದೆ.          ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ನ.೬ ರಂದು ಹಮ್ಮಿಕೊಳ್ಳಲಾಗಿದ್ದು ಭಕ್ತಾಧಿಗಳು ಧನ ಸಹಾಯ ಮಾಡುವುದರೊಂದಿಗೆ ಟ್ರಸ್ಟಿನ ಜೊತೆ ಕೈಜೊಡಿಸಿ ಬೃಹತ್ ಕಾರ್ಯ ನಿರ್ವಿಘ್ನವಾಗಿ ನೆರವೇರಲು ಸಹಕರಿಸಬೇಕಾಗಿ ದೇವಾಲಯ ಸಮಿತಿಯವರು ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಚಾರಿಟಬಲ್ ಟ್ರಸ್ಟ್ ನ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ.

ಬರಕನಹಾಲ್‌ನಲ್ಲಿ ವಾಲಿಬಾಲ್ ಪಂದ್ಯಾವಳಿ

ಹುಳಿಯಾರು ಹೋಬಳಿಯ ಬರಕನಹಾಲ್‌ನಲ್ಲಿ ೧೦ ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿದೆ.                 ನವೆಂಬರ್ ೧ ರ ಮಂಗಳವಾರ ಹಾಗೂ ೨ ಬುಧವಾರ ನಡೆಯಲಿರುವ ಟೂರ್ನಿಯಲ್ಲಿ ಪ್ರಥಮ ಬಹುಮಾನವಾಗಿ ೧೦ ಸಾವಿರ ರೂ. ನಗದು, ದ್ವಿತೀಯ ಬಹುಮಾನವಾಗಿ ೬ ಸಾವಿರ ರೂ. ನಗದು ಹಾಗೂ ತೃತೀಯ ಬಹುಮಾನವಾಗಿ ೩ ಸಾವಿರ ರೂ. ನಗದು ಬಹುಮಾನ ಕೊಡಲಾಗುವುದು.        ಪ್ರವೇಶ ಶುಲ್ಕ ೪೦೦ ರೂಪಾಯಿಗಳಾಗಿದ್ದು ಆಟಗಾರರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನರಸಿಂಹಮೂರ್ತಿ (೯೯೬೪೮೨೩೬೧೧), ರಾಕೇಶ್ (೯೧೬೪೧೪೪೩೦೦), ಮನೋಜ್ (೮೯೭೦೪೯೯೮೫೨) ಅವರನ್ನು ಸಂಪರ್ಕಿಸಬಹುದಾಗಿದೆ.

ಹುಳಿಯಾರು: ಗೌಜು ಗದ್ದಲದಲ್ಲಿ ನಡೆದ ಪಂಚಾಯ್ತಿ ಸಭೆ

ಗಲಾಟೆಯಲ್ಲಿ ಮಾತನಾಡಲು ಅವಕಾಶವಾಗದೆ ಸಭೆಯಿಂದ ಹೊರನಡೆದ ಮಹಿಳಾ ಸದಸ್ಯರು ---------------------------- ಹುಳಿಯಾರು : ಗ್ರಾ.ಪಂ.ಗೆ ಅಂಟಿದ ಶಾಪವೇನೋ ಎಂಬಂತೆ ಇಲ್ಲಿ ನಡೆಯುವ ಯಾವುದೇ ಸಭೆಗಳು ಎಂದೂ ಶಾಂತ ರೀತಿಯಲ್ಲಿ ನಡೆಯುವುದಿಲ್ಲ. ಅದೇ ರೀತಿ ಬುಧವಾದಂದು ಗೀತಾ ಪ್ರದೀಪ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯೂ ಇದಕ್ಕೆ ಹೊರತಾಗದೆ ಸಭೆಯ ಪ್ರಾರಂಭದಿಂದಲೂ ಅಂತ್ಯದವರೆಗೂ ಗಲಾಟೆ,ಗದ್ದಲ ಮಾತಿನ ಚಕಮಕಿಯಲ್ಲೇ ನಡೆದು ಕಡೆಗೆ ಗಲಾಟೆಯಲ್ಲಿ ಮಾತನಾಡಲು ಅವಕಾಶವಾಗದೆ ಸಭೆಯಿಂದ ಮಹಿಳಾ ಸದಸ್ಯರು ನಿರ್ಗಮಿಸಿದ್ದು ಇದಕ್ಕೆ ಇಂಬು ಕೊಡುವಂತಿತ್ತು.        ಜಮಾಖರ್ಚಿನ ವಿವರ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ,ಬೋರನಕಣಿವೆ ಪೈಪ್ ಲೈನ ದುರಸ್ತಿ ,ವಿವಿಧ ವಾರ್ಡುಗಳಲ್ಲಿನ ಕೈಪಂಪು ರಿಪೇರಿ,ಬಡಾವಣೆಗಳಲ್ಲಿನ ಕಸ ವಿಲೇವಾರಿ,೧೪ ನೇ ಹಣಕಾಸು ಯೋಜನೆ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬುಧವಾರದಂದು ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕೈಗೊಂಡ ನಿರ್ಣಯಗಳು :ನಾಯಿ ಹಾಗೂ ಹಂದಿ ಕಾಟ ವಿಪರೀತವಾಗಿದ್ದು ಓಡಾಡಲು ಭಯ ಪಡುವ ಸ್ಥಿತಿಯಿದ್ದು ನಾಯಿಗಳನ್ನು ಹಿಡಿಸಲು ಮಿತಿಮೀರಿರುವ ಹಂದಿಗಳನ್ನು ಊರಾಚೆ ಸಾಗಿಸುವಂತೆ ಸೂಚಿಸಲು ತೀರ್ಮಾನಿಸಲಾಯಿತು. ಚರಂಡಿ ಸ್ವಚ್ಚಗೊಳಿಸಲು ಹಾಗೂ ಬೀದಿಬದಿಯಲ್ಲಿನ ಕಸ ಸಾಗಿಸಲು ಟ್ರಾಕ್ಟರ್ ಬಳಸಿಕೊಂಡು ಊರಾಚೆ ಕಸ ಸಾಗಿಸಲು ಒಪ್ಪಲಾಯಿತು.        ರಾಂಗೋಪಾಲ್ ಸರ

ಪುರದಮಠದಲ್ಲಿ ತೆಂಗು ಬೆಳೆ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ

ಹುಳಿಯಾರು: ಸಮೀಪದ ಪುರದಮಠದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಚಿ.ನಾ.ಹಳ್ಳಿ ಕಲ್ಪತೀರ್ಥ ತೆಂಗು ಉತ್ಪಾದಕರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ತೆಂಗು ಬೆಳೆ ಸಮಗ್ರ ನಿರ್ವಹಣೆ ಮತ್ತು ಅಣಬೆ ರೋಗದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.           ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಜಿಕೆವಿಕೆಯ ಪ್ರಾಧಾಪಕ ಡಾ.ವೈ.ಎನ್.ಶಿವಲಿಂಗಯ್ಯ ಮಾತನಾಡಿ ಸರಿಯಾದ ಸಮಯಕ್ಕೆ ಮಳೆಯಾಗದೆ ತೆಂಗಿಗೆ ನುಸಿರೋಗ ಸೇರಿದಂತೆ ದಿನಕ್ಕೊಂದು ರೋಗ ತಗುಲಿ ಇಳುವರಿ ಕುಂಠಿತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ೨೦೦೫ ಹಾಗೂ ೦೬ ರಲ್ಲಿ ತೆಂಗಿನ ಮರ ೮೦ ರಿಂದ ೯೦ ಕಾಯಿ ಬಿಡುತ್ತಿತ್ತು. ಇಂದು ರೋಗದ ಹಾವಳಿಗೆ ಇಪ್ಪತ್ತರಿಂದ ಮೂವತ್ತು ಕಾಯಿ ಬಿಡುತ್ತಿವೆ. ಆದರೂ ಕೂಡ ರೈತರು ರೋಗ ತಡೆಗೆ ಹೆಚ್ಚು ಗಮನ ಹರಿಸದೆ ಮೌನವಾಗುತ್ತಿರುವುದು ಹಾಗೂ ಸರಿಯಾದ ಕ್ರಮದಲ್ಲಿ ಔಷಧ ನೀಡದಿರುವುದು ರೋಗ ಉಲ್ಬಣಕ್ಕೆ ಕಾರಣವಾಗಿದೆ ಎಂದರು. ನುಸಿ ರೋಗ ಹತೋಟಿಗೆ ಬೇವಿನ ಹಿಂಡಿ, ಕುರಿಗೊಬ್ಬರ, ಬೂದಿ, ಕೆರೆಗೋಡು ಕನಿಷ್ಟ ಎರಡು ವರ್ಷಕ್ಕೊಮ್ಮೆಯಾದರೂ ಹಾಕಬೇಕು. ತೆಂಗಿನ ಮರದ ಬುಡಕ್ಕೆ ನೀರು, ಗೊಬ್ಬರ ಹಾಕುವುದರ ಬದಲು ಮರದಿಂದ ಎರಡರಿಂದ ಮೂರು ಅಡಿ ಅಂತರದಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.              ಕೀಟಶಾಸ್ತ್ರಜ್ಞ ಡಾ.ಶ್ರೀನಿವಾಸರೆಡ್ಡಿ, ಡಾ.ಪಾಲಣ್ಣ, ಕಲ್ಪತೀರ್ಥ ತೆಂಗು ಉತ್ಪಾದಕರ ಸಂಸ್ಥೆಯ ಅಧ್ಯಕ್ಷ

ಮೂರು ತಿಂಗಳಿನೊಳಗೆ ಹುಳಿಯಾರಿಗೆ ಶುದ್ಧ ನೀರು ಸರಬರಾಜು

ಹುಳಿಯಾರು: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವ ಘಟಕಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು ಇನ್ನು ಮೂರುತಿಂಗಳೊಳಗೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲಾಗುವುದೆಂದು ಹುಳಿಯಾರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್ ತಿಳಿಸಿದರು. ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಬೋರನಕಣಿವೆ ಜಲಾಶಯದ ಬಳಿ ನೀರಿನ ಪೈಪ್ ಲೈನ್ ದುರಸ್ತಿಗೆ ಅಂದಾಜು ತಯಾರಿಸುತ್ತಿರುವ ಎಇಇ ರುದ್ರಮುನಿ ಅವರೊಂದಿಗೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಪ್ರದೀಪ್,ಪಿಡಿಓ ಸಿದ್ಧರಾಮಣ್ಣ ಮತ್ತಿತರರು.            ಬೋರನಕಣಿವೆ ಜಲಾಶದಿಂದ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಶುದ್ಧೀಕರಣ ಘಟಕದಲ್ಲಿನ ನಿತ್ಯ ಸಮಸ್ಯೆಯಿಂದಾಗಿ ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ಅಡಚಣೆ ಜೊತೆಗೆ ಅಶುದ್ಧ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ  ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.   ಕಳೆದ ವಾರ ಭದ್ರಾಮೇಲ್ದಂಡೆಯೋಜನೆಯ ಪರಿಸರ ಸಾರ್ವಜನಿಕ ಸಮಾರಂಭಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಖುದ್ದಾಗಿ ತೆರಳಿ ನೀರು ಪೂರೈಕೆ ಘಟಕ ವೀಕ್ಷಿಸಿದ್ದರು.ಫಿಲ್ಟರ್ ಸಮಸ್ಯೆಯನ್ನುಕಣ್ಣಾರೆ ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಈ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕಾಯಕಲ್ಪಕ್ಕೆ ಮುಂದಾಗಿದೆ

ಮಿತ ಆಹಾರ ಹಾಗೂ ಸದಾ ಕ್ರಿಯಾಶೀಲರಾಗಿರುವುದರಿಂದ ಉತ್ತಮ ಆರೋಗ್ಯ

ಹುಳಿಯಾರು:  ಮಿತ ಆಹಾರ ಸೇವನೆ ಹಾಗೂ ಸದಾ ಕ್ರಿಯಾಶೀಲತೆಯಿಂದಿರುವುದರಿಂದ ಆಯಸ್ಸು ಹಾಗೂ ಆರೋಗ್ಯ ಲಭಿಸಲಿದೆ ಎಂದು ಡಾ.ವೈ.ಜಿ.ಸಿದ್ದರಾಮಯ್ಯ ತಿಳಿಸಿದರು.          ಹುಳಿಯಾರಿನ ಯೋಗಿನಾರಾಯಣ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೩ ದಿನಗಳ ಧ್ಯಾನ ಕಾರ್ಯಕ್ರಮದ ಸಮಾರೋಪ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿ ಇಚ್ಚಾಶಕ್ತಿ ಹಾಗೂ ಗುರಿ ಸಾಧನೆಯ ಛಲ ಇದ್ದರೆ ಸಾಧನೆಗೆ ಬಡತನ ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ಪೇಪರ್ ಹಾಕುತ್ತಿದ್ದ ಕಲಾಂ ರಾಷ್ಟ್ರಪತಿಯಾಗಿದ್ದು, ಟೀ ಮಾರುತ್ತಿದ್ದ ಮೋದಿ ಪ್ರಧಾನಿಯಾಗಿದ್ದೇ ನಿದರ್ಶನವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಿಂದಲೇ ಭವಿಷ್ಯದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಕಾರ್ಯಾ ಸಾಧನೆಗಾಗಿ ಕಠಿಣ ಪರಿಶ್ರಮ ಹಾಕಿ. ಇದಕ್ಕಾಗಿ ಮನಸ್ಸಿನ ಏಕಾಗ್ರತೆಗೆ ಧಾನ್ಯ ಹಾಗೂ ಯೋಗದ ಮೊರೆ ಹೋಗಿ ಹಾಗೂ ಟಿವಿ, ಮೊಬೈಲ್‌ಗಳಿಂದ ದೂರವಿರಿ ಎಂದು ಸಲಹೆ ನೀಡಿದರು.         ಸಿದ್ಧಗಂಗಾ ಶ್ರೀಗಳು ೧೦೯ ವರ್ಷಗಳಾಗಿದ್ದರೂ ಕನ್ನಡಕ ಇಲ್ಲದೆ ಪತ್ರಿಕೆ ಓದುತ್ತಾರೆ, ಯಾರ ಸಹಾಯವಿಲ್ಲದೆ ನಡೆಯುತ್ತಾರೆ. ಸುದೀರ್ಘವಾಗಿ ಮಾತನಾಡು ತ್ತಾರೆ, ಜೊತೆಗೆ ಅಗಾಧವಾದ ನೆನಪಿನ ಶಕ್ತಿ ಅವರಲ್ಲಿದೆ. ಅವರು ರಾತ್ರಿ ೧೨ ಗಂಟೆಗೆ ಮಲಗಿ ಬೆಳಿಗ್ಗೆ ೩ ರ ಸುಮಾರಿಗೆ ಏಳುವುದು, ನಿಯಮಿ ತವಾಗಿ ಮಿತ ಆಹಾರ ಸೇವಿಸುವುದು ಹಾಗೂ ಸದಾ ಕ್ರಿಯಾಶೀಲತೆಯಿಂದಿ ಇರುವುದರಿಂದ ಇದು ಸಾಧ್ಯವಾಗಿದೆ ಎಂದರು. ಪ್ರಾಚಾರ್ಯ

ಹುಳಿಯಾರು:ರಾಷ್ಟ್ರಪತಿಗಳ ನಾಗಸಾಧುಗಳ ಆಗಮನದ ಹಿನ್ನಲೆ

ಕಂಕಾಳಿ ದೇವಸ್ಥಾನದಲ್ಲಿ ಪೂರ್ವಸಿದ್ಧತಾ ಸಭೆ ----------------------- ಹುಳಿಯಾರು: ಪಟ್ಟಣದ ಮಾತಾ ಛಾರಿಟಬಲ್ ಟ್ರಸ್ಟ್ ಕೋಡಿಪಾಳ್ಯದಲ್ಲಿ ನಿರ್ಮಿಸುತ್ತಿರುವ ಶ್ರೀ ಕಂಕಾಳಿ ಮತ್ತು ತುಳಜಾ ಭವಾನಿ ದೇವಸ್ಥಾನದ ಪ್ರಾರಂಭೋತ್ಸವಕ್ಕೆ ಭಾರತದ ಘನತೆವೆತ್ತ ರಾಷ್ಟ್ರಪತಿಗಳು ಮತ್ತಿತರೆ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಇದರ ಪೂರ್ವಸಿದ್ಧತೆಗಾಗಿ ದೇವಾಲಯದ ಆವರಣದಲ್ಲಿ ಸಾರ್ವಜನಿಕರ,ಸಂಘಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಭಾನುವಾರದಂದು ಪೂರ್ವಭಾವಿ ಸಭೆ ನಡೆಯಿತು. ಬೆಂಗಳೂರಿನ ಉದ್ಯಮಿ ನರಸಿಂಹ ಮೂರ್ತಿ ನಾಯಕ್ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಜನಪ್ರತಿನಿಧಿಗಳು ,ಸಂಘಸಂಸ್ಥೆಗಳ ಪದಾಧಿಕಾರಿಗಳು,ದೇವಾಲಯಗಳ ಮುಖ್ಯಸ್ಥರು,ಸಮುದಾಯಗಳ ಮುಖಂಡರು, ಹುಳಿಯಾರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಚರ್ಚೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.         ಸಮಾರಂಭದ ಪ್ರಾರಂಭೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿದ್ದು ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದಿನಾಂಕ ನೀಡಿದ್ದು ಅವರು ನೀಡುವ ದಿನಾಂಕದ ಮೇರೆಗೆ ಕಾರ್ಯಕ್ರಮ ಅಂತಿಮಗೊಳ್ಳಲಿದೆ.ಉತ್ತರ ಭಾರತದಿಂದ ಐವತ್ತಕ್ಕೂ ಹೆಚ್ಚು ನಾಗಸಾಧುಗಳು ಕೂಡ ಆಗಮಿಸಲಿದ್ದಾರೆ.ಗಣ್ಯಾತಿಗಣ್ಯರು ಆಗಮಿಸಲಿರುವ ಹಿನ್ನಲೆಯಲ್ಲಿ ವಿವಿಧ ಸಮಿತಿಗಳ

ಬಸ್ ಗೆ ಲಾರಿ ಗುದ್ದಿ ಪರಾರಿ

ಹುಳಿಯಾರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ಗೆ ಲಾರಿಯೊಂದು ಗುದ್ದಿ ,ಲಾರಿಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತಿರುವ ಪ್ರಕರಣ ಶನಿವಾರ ಮುಂಜಾನೆ ಸಂಭವಿಸಿದೆ. ಹೊಸದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಮತ್ತೊಂದು ಕೆಎಸ್ಆರ್ಟಿಸಿ ಬಸ್ಸನ್ನು ಹಿಂದಿಕ್ಕಿ ಹೋಗುವ ತರಾತುರಿಯಲ್ಲಿ ದಿಢೀರೆಂದು ಟರ್ನ್ ಮಾಡಿದ್ದೆ ಹಿಂದಿನಿಂದ ಬರುತ್ತಿದ್ದ ಲಾರಿ ಗುದ್ದಿ ಅಪಘಾತ ಸಂಭವಿಸಲು ಕಾರಣ ಎನ್ನಲಾಗಿದೆ.ಲಾರಿ ಗುದ್ದಿದ ರಭಸಕ್ಕೆ ಬಸ್ ಹಿಮ್ಮುಖವಾಗಿ ಚಲಿಸಿ ನಿಂತಿತು.ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣವಾಗಿದ್ದು ಬಸ್ ಮುಂಭಾಗ ಹಾನಿಯಾಗಿದ್ದು ಪ್ರಯಾಣಿಕರಿಗೆ ಯಾವುದೇ ನೋವಾಗದಿದ್ದರು ಅಘಾತಕೊಳಗಾಗಿದ್ದರು.            ಹೆದ್ದಾರಿಯಲ್ಲೆ ಬಸ್ ನಿಲ್ಲಿಸುವುದರಿಂದ ಹಾಗೂ ಸರ್ಕಾರಿ ಡಿಪೋ ಬಸ್ಸುಗಳ ನಡುವೆಯೇ ಪೈಪೋಟಿ ಏರ್ಪಟ್ಟಿರುವುದರಿಂದ ತಮ್ಮ ಬಸ್ಸಿನಲ್ಲೆ ಪ್ರಯಾಣಿಕರು ಹತ್ತಲ್ಲಿ ಎಂದು ಅಡ್ಡಾದಿಡ್ಡಿಯಾಗಿ ಬಸ್ಸುಗಳ ನಿಲ್ಲಿಸಿ ವೇಗವಾಗಿ ಚಲಿಸುವದರಿಂದ ಪ್ರಯಾಣಿಕರು ಜೀವ ಬಿಗಿಹಿಡಿದು ಸಂಚರಿಸುವಂತಾಗಿದೆ.

ಅ.23.ಕಂಕಾಳಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

ಹುಳಿಯಾರು: ಕೋಡಿಪಾಳ್ಯದ ಶ್ರೀ ಕಂಕಾಳಿ ಮತ್ತು ತುಳಜಾ ಭವಾನಿ ದೇವಸ್ಥಾನದ ಆರಂಭೋತ್ಸವಕ್ಕೆ ಭಾರತದ ಘನತೆವೆತ್ತ ರಾಷ್ಟ್ರಪತಿಗಳು ಮತ್ತಿತರೆ ಗಣ್ಯರನ್ನು ಆಹ್ವಾನಿಸುವ ಉದ್ದೇಶವಿದ್ದು ಇದಕ್ಕಾಗಿ ವಿವಿಧ ಸಮಿತಿ ರಚಿಸುವ ಹಿನ್ನಲೆಯಲ್ಲಿ ದೇವಾಲಯದ ಆವರಣದಲ್ಲಿ ಸಾರ್ವಜನಿಕರ,ಸಂಘಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಅ.23ರ ಬೆ.11ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ. ಹುಳಿಯಾರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಕೋರಲಾಗಿದೆ

ಹುಳಿಯಾರು ಶೀಘ್ರ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ :ಸಂಸದ ಮುದ್ದ ಹನುಮೇಗೌಡ

ಹುಳಿಯಾರು: ಹಿಂದುಳಿದಿರುವ ಪ್ರದೇಶವೆಂಬ ಹಣೆಪಟ್ಟಿಯಿರುವ ಹುಳಿಯಾರಿನ ಅಭಿವೃದ್ಧಿಗೆ ತಾನು ಕಟ್ಟಿಬದ್ಧನಾಗಿದ್ದು ಆ ನಿಟ್ಟಿನಲ್ಲಿ ಹುಳಿಯಾರು ಗ್ರಾಪಂ ಯನ್ನ ಪಟ್ಟಣಪಂಚಾಯ್ತಿಮಾಡುವುದು ನನ್ನ ಆದ್ಯ ಕರ್ತವ್ಯವೆಂದು ಸಂಸದ ಮುದ್ದ ಹನುಮೇಗೌಡ ತಿಳಿಸಿದರು.           ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ಹಾಗೂ ವಿಜಯನಗರ ಬಡವಣೆಯಲ್ಲಿ ಅಂಗನವಾಡಿ ಶಂಕುಸ್ಥಾಪನೆ ನೇರವೆರಿಸಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.          ಹುಳಿಯಾರು ಪಟ್ಟಣ ಪಂಚಾಯ್ತಿಯಾಗುವ ಬಗ್ಗೆ ತಾವು ಮುಖ್ಯಮಂತ್ರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದಿದ್ದು ಸಚಿವ ಸಂಪೂಟದ ಅನುಮೋದನೆಯಷ್ಟೆ ಬಾಕಿ ಉಳಿದಿದೆ ಎಂದರು.            ಸಂಸದರ ನಡೆ ಹಳ್ಳಿಗಳ ಕಡೆ ಎಂಬ ಪರಿಕಲ್ಪನೆಯಡಿಯಲ್ಲಿ ಜನರ ಸಮಸ್ಯೆಗಳನ್ನ ಖುದ್ದಾಗಿ ಆಲಿಸಿ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನಾನೇ ನೇರವಾಗಿ ಜನರ ಬಳಿಗೆ ಹೋಗುತ್ತಿದ್ದು , ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗೆ ಪಕ್ಷದ ಮುಖಂಡರು, ಸದಸ್ಯರೊಂದಿಗೆ ತೆರಳಿ ಅಹವಾಲು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.              ಇಂದು ನನ್ನ ಅನುದಾನದಲಿ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ವ್ಯಾಪ್ತಿಯಲ್ಲಿ ೧೭ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದ್ದು ಬಹುತೇಕ ಕಡೆ ಶುದ್ಧ ನೀರಿನ ಘಟಕಕ

ಭದ್ರಾ ಮೇಲ್ದಂಡೆ ಯೋಜನೆ ಪರಿಸರಕ್ಕೆ ಪೂರಕ :ಜಿಲ್ಲಾಧಿಕಾರಿ

ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ೧೯ ಕೆರೆಗಳಿಗೆ ನೀರು: ೭೧ ಹಳ್ಳಿಗೆ ಲಾಭ ---------------------------------- ಹುಳಿಯಾರು: ಭದ್ರಾ ಮೇಲ್ದಂಡೆ ಯೋಜನೆಯ ಉದ್ದೇಶಿತ ೨ನೇ ಹಂತದ ಯೋಜನೆಯಲ್ಲಿ ತಾಲ್ಲೂಕಿನ ಗಡಿಭಾಗದ ಪ್ರದೇಶವಾದ ಹೆಗ್ಗೆರೆ ಗ್ರಾಮದ ಮುಖಾಂತರ ಪ್ರವೇಶಿಸುವ ಭದ್ರಾ ಯೋಜನೆಯ ನೀರಿನಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ೧೯ ಕೆರೆಗಳಿಗೆ ನೀರು ಹರಿಯಲಿದ್ದು ಒಟ್ಟು ೭೧ ಹಳ್ಳಿಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಚೀಫ್ ಇಂಜಿನೀಯರ್ ಆರ್.ಚೆಲುವರಾಜು ತಿಳಿಸಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಭದ್ರಾಮೇಲ್ದಂಡೆ ಏತ ನೀರಾವರಿ ಯೋಜನೆ ಕುರಿತಂತೆ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಮೋಹನ್ ರಾಜ್ ಮಾತನಾಡಿದರು.               ಭದ್ರಾಮೇಲ್ದಂಡೆ ಏತ ನೀರಾವರಿ ಯೋಜನೆ ಕುರಿತಂತೆ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಮಧ್ಯಾಹ್ನ ತುಮಕೂರು ಜಿಲ್ಲಾಧಿಕಾರಿ ಮೋಹನ್ ರಾಜ್ ಅಧ್ಯಕ್ಷತೆಯಲ್ಲಿ ನಡೆದ ಪರಿಸರ ಸಾರ್ವಜನಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು.           .ಸಭೆಯ ಮೊದಲಿಗೆ ಭದ್ರಾಮೇಲ್ದಂಡೆ ಯೋಜನೆಯ ಕರಡು ಪರಿಸರ ಅಘಾತ ಅಂದಾಜೀಕರಣ ವರದಿಯ ಸಾರಂಶವನ್ನು ಮಂಡಿಸಲಾಯಿತು. ಸದರಿ ಯೋಜನೆ ಉದ್ದೇಶ ಹಾಗೂ ಯೋಜನೆಯಿಂದ ತುಂಬಲಿರುವ ಕೆರೆಗಳ ಪಟ್ಟಿ ಹಾಗು ಹಂತ ೨ರ ಕಾಮಗಾರಿಯ ವಿಸ್ತೃತ ವರದಿ ನೀಡಲಾಯಿತು.                 ಕ

ಹುಳಿಯಾರಿನಲ್ಲಿ ಬೆಲಗೂರು ಮಹಾಲಕ್ಷ್ಮೀ ಪಾದುಕೆಯ ಪೂಜಾ ಸಂಭ್ರಮ

ಹುಳಿಯಾರು: ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಬಿಂದು ಮಾಧವ ಸದ್ಗುರುಗಳ ಶ್ರೀಕ್ಷೇತ್ರವಾದ ಹುಳಿಯಾರು ಸಮೀಪದ ಬೆಲಗೂರಿನ ಮಹಾಲಕ್ಷ್ಮೀ ಪಾದುಕಾ ಸಂಚಾರ ಪಟ್ಟಣಕ್ಕೆ  ಆಗಮಿಸಿತ್ತು.          ಬೆಲಗೂರಿನಲ್ಲಿ ಡಿ.೧೦ ರಿಂದ ವೈಭವೋಪೇತವಾಗಿ ನಡೆಯಲಿರುವ ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿಯ ಮಹಾ ಬ್ರಹ್ಮ ರಥೋತ್ಸವಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಸಂಚಾರ ಆರಂಭಿಸಿರುವ ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ವಿಗ್ರಹ ಸಮೇತ ಶ್ರೀ ಮಹಾಲಕ್ಷ್ಮೀ ಪಾದುಕೆಯು ಹುಳಿಯಾರಿಗೆ ಆಗಮಿಸಿದ ಸಂದರ್ಭದಲ್ಲಿ ಶ್ರದ್ಧಾಭಕ್ತಿಯಿಂದ ಬರಮಾಡಿಕೊಳ್ಳಲಾಯಿತು..             ಭಕ್ತಾಧಿಗಳು ಶ್ರೀ ಮಹಾಲಕ್ಷ್ಮೀ ಪಾದುಕೆಯನ್ನು ತಮ್ಮ ಮನೆಗಳಿಗೆ ಕರೆದೊಯ್ದು ಭಕ್ತಿಪೂರ್ವಕ ಪೂಜೆ ಸಲ್ಲಿಸಿದರು.ಶ್ರೀಕ್ಷೇತ್ರದ ಧಾರ್ಮಿಕ ಕೈಂಕರ್ಯಕ್ಕೆ ನೆರವಾಗಲು ದೇಣಿಗೆಯ ರೂಪದಲ್ಲಿ ಉದಾರ ಧನ ಸಹಾಯ ಮಾಡಿದರು.ನೂರಾರು ಭಕ್ತರು ಪಾದುಕೆಯ ಪೂಜೆ ಮಾಡಿ ಧನ್ಯರಾದರು. ಬೆಲಗೂರಿನ ಅರ್ಚಕರಾದ ಲಕ್ಷ್ಮೀನಾರಾಯಣಭಟ್ಟ, ಬಿ.ಎಸ್.ಗುರುದತ್ತ ,ಬಸ್ಟಾಂಡ್ ಹೋಟಲ್ ಗೋಪಾಲ್‌, ಬಡ್ಡಿಪುಟ್ಟಣ್ಣ ಮತ್ತಿತರರಿದ್ದರು.

ಹುಳಿಯಾರು: ಶುದ್ಧ ನೀರು ಪೂರೈಕೆಗೆ ಕ್ರಮ: ಡೀಸಿ

ಹುಳಿಯಾರು: ಬೋರನಕಣಿವೆಯಿಂದ ಹುಳಿಯಾರು ಪಟ್ಟಣಕ್ಕೆ ಸರಬರಾಜಾಗುವ ಶುದ್ಧ ನೀರು ಘಟಕದ ಸಮಸ್ಯೆ ಬಗೆಹರಿಸಿ ಜನತೆಗೆ ಶುದ್ಧೀಕರಿಸಿದ ನೀರು ಪೂರೈಕೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳು ವುದಾಗಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ತಿಳಿಸಿದರು. ಹುಳಿಯಾರಿನಲ್ಲಿ ನಡೆದ ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ ಹಂತ-೨ರ ಸಾರ್ವಜನಿಕ ಪರಿಸರ ಸಭೆಯ ನಂತರ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹುಳಿಯಾರಿಗೆ ಸರಬರಾಜಾಗುವ ಕಾರೇಹಳ್ಳಿ ಬಳಿಯಿರುವ ಕುಡಿಯುವ ನೀರಿನ ಘಟಕವನ್ನ ನವೀಕರಿಸುವ ಕುರಿತಂತೆ ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸದಸ್ಯರೊಂದಿಗೆ ನೀರು ಪೂರೈಕೆಯಾಗುವ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಇಲ್ಲಿನ ಸಮಸ್ಯೆ ಬಗ್ಗೆ ಗ್ರಾಪಂ ಅಧ್ಯಕ್ಷರು ಹಾಗು ಪಿಡಿಓ ಮತ್ತು ಸದಸ್ಯರು ಸಮಸ್ಯೆ ಬಗ್ಗೆ ಗಮನ ಸೆಳೆದರು. ಬೋರನಕಣಿವೆಯಿಂದ ಹುಳಿಯಾರಿಗೆ ಕುಡಿಯುವ ನೀರಿಗಾಗಿ ಮಾಡಲಾಗಿರುವ ಪೈಪ್ ಲೈನ್ ಐದು ವರ್ಷಗಳಷ್ಟು ಹಳೆಯದಾಗಿದ್ದು ಸಾಕಷ್ಟು ಕಡೆ ಪೈಪ್ ಹೊಡೆದು ನೀರು ಪೋಲಾಗುತ್ತಿದೆ. ಅಲ್ಲದೆ ನೀರುಎತ್ತಲು ಬಳಸುವ ಮೋಟಾರ್ ಪದೆ ಪದೇ ಸುಟ್ಟು ಕೆಟ್ಟು ಹೋಗುತ್ತಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ. ಶುದ್ಧಿಕರಣ ಘಟಕ ಕೂಡ ಹಳೆಯದಾಗಿದ್ದು ಇದನ್ನು ಮಾರ್ಪಡಿಸುವ ಅಗತ್ಯವಿದೆ ಎಂದು ಅಧ್ಯಕ್ಷೆ ಗೀತಾಪ್ರದೀಪ್ ಒತ್ತಾಯಿಸಿದರು.                

ತಮ್ಮಡಿಹಳ್ಳಿ ಶ್ರೀ ಸಿದ್ಧರಾಮೇಶ್ವರ ಸ್ವಾಮಿಯವರ ಮಹಾರಥೋತ್ಸವ ಇಂದು

ಹುಳಿಯಾರು: ಸಮೀಪದ ತಮ್ಮಡಿಹಳ್ಳಿಯ ಶ್ರೀ ಸಿದ್ಧರಾಮೇಶ್ವರ ಸ್ವಾಮಿಯವರ ದಸರಾ ಮಹೋತ್ಸವ ಅ.೧೦ ರಿಂದ ಪ್ರಾರಂಭವಾಗಿದ್ದು ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಪೂಜಾ ಕೈಂಕರ್ಯಗಳು ನಡೆಯುತ್ತಾ ಬಂದಿದೆ. ಮಂಗಳವಾರದಂದು ಗ್ರಾಮಸ್ಥರಿಂದ ಗುರುಪರವು ನಡೆದಿದ್ದು ಅ.19ರ ಬುಧವಾರದಂದು ಮ.2 ಗಂಟೆಗೆ ಮಹರಥೋತ್ಸವ ಜರುಗಲಿದೆ. ಸಂಜೆ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯ ಸಮಿತಿಯವರು ಕೋರಿದ್ದಾರೆ

ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ: ಪರಿಸರ ಸಾರ್ವಜನಿಕ ಸಭೆ ಇಂದು

ಹುಳಿಯಾರು: ಕರ್ನಾಟಕ ನೀರಾವರಿ ನಿಗಮ ನಿಯಮಿತದವರು ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ ಹಂತ-೨ ರಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದು , ಈ ಯೋಜನೆಯ ಕುರಿತಂತೆ ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಅ.೧೯ರ ಬುಧವಾರ ಬೆಳಿಗ್ಗೆ ೧೧ಕ್ಕೆ ಸಾರ್ವಜನಿಕ ಪರಿಸರ ಸಭೆಯನ್ನು ಕರೆಯಲಾಗಿದೆ.             ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ ಹಂತ-೨ ರಲ್ಲಿ ದಾವಣಗೆರೆ ಹಾಗೂ ತುಮಕೂರು ಜಿಲ್ಲಾ ಭಾಗದ ರೈತರಿಗೆ ನೀರಾವರಿ ಯೋಜನೆಯ ಲಾಭ ದೊರೆಯಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಪರಿಸರ ಆಘಾತ ಅಧ್ಯಯನ ಅಧಿಸೂಚನೆಯಂತೆ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲಾ ಎಂಬ ವರದಿ ಸಲ್ಲಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ.ಯೋಜನೆಯ ಬಗ್ಗೆ ಸಾರ್ವಜನಿಕ ಆಕ್ಷೇಪಣೆಗಳನ್ನು ಆಲಿಸಲಾಗುವುದು ಹಾಗೂ ಸಂಬಂಧಪಟ್ಟ ತಜ್ಞರಿಂದ ಸಮಸ್ಯೆಗೆ ಪರಿಹಾರದ ಜೊತೆಗೆ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು. ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪರಿಸರ ತಜ್ಞರು ಉಪಸ್ಥಿತರಿರುವರು.

ಸಾಯಿಮಂದಿರದಲ್ಲಿ ಹುಣ್ಣಿಮೆ ಪೂಜೆ ಸಂಭ್ರಮ

ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಮ೦ದಿರದಲ್ಲಿ ಆ 16 ಭಾನುವಾರದಂದು ಹುಣ್ಣಿಮೆ ಅಂಗವಾಗಿ ಶ್ರೀ ಸಾಯಿ ಬಾಬಾ ರವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.          ಅರ್ಚಕರಾದ ನಂಜುಂಡರಾವ್,ಸತೀಶ್,ರವಿಕುಮಾರ್ ಬಾಬಾರವರಿಗೆ ಫಲ ಪಂಚಾಮೃತಾಭಿಷೇಕ, ಅರ್ಚನೆ ಸತ್ಯನಾರಾಯಣ ಪೂಜೆ, ಧೂಪಾರತಿ, ಮಹಾಮಂಗಳಾರತಿ ನೆರವೇರಿಸಿದರು.ಗುರು ಪೂಜಾ ನಂತರ ಮಹಾ ಪ್ರಸಾದ ಕಾರ್ಯಕ್ರಮ ನಡೆಯಿತು.             ಬಾಬಾರ ಪೂಜಾ ಕಾರ್ಯಕ್ರಮ ಡಿಡಿ ಚ೦ದನ ವಾಹಿನಿಯಲ್ಲಿ ದಿವ್ಯ ದೇಗುಲ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲು ಚಿತ್ರೀಕರಣವಾಯ್ತು.ಹೊಯ್ಸಳಕಟ್ಟೆ,ದಸೂಡಿ, ದಬ್ಬಗುಂಟೆ,ಹುಳಿಯಾರು ಭಾಗದಿಂದ ಆಗಮಿಸಿದ್ದ ಭಕ್ತರು ಸಾಯಿ ಭಜನೆ ಮಾಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದು ಪುನೀತರಾದರು.          ಹುಳಿಯಾರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕ ಬಾಬಾರ ಬಗ್ಗೆ ಪ್ರವಚನ ನೀಡಿದರು ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಾ ಶ್ರೀಮಂತಿಕೆಯ ಎದುರು ಹಣದ ಶ್ರೀಮಂತಿಗೆ ಗೌಣ: ಬಿಳಿಗೆರೆ ಕೃಷ್ಣಮೂರ್ತಿ

ಹುಳಿಯಾರು: ಸಾಂಸ್ಕೃತಿಕ ಕಲಾ ಶ್ರೀಮಂತಿಕೆಯ ಎದುರು ಹಣದ ಶ್ರೀಮಂತಿಕೆ ಗೌಣ ಎಂದು ಮಕ್ಕಳ ಕವಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು. ಹುಳಿಯಾರು ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ತಂಡದಿಂದ ಆಯೋಜಿಸಿರುವ ಒಂದು ವಾರಗಳ ಕಾಲದ ಸುಗಮ ಸಂಗೀತ ಕಲಿಕಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಕವಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿದರು.         ಹುಳಿಯಾರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ತಂಡದಿಂದ ಆಯೋಜಿಸಿರುವ ಒಂದು ವಾರಗಳ ಕಾಲದ ಸುಗಮ ಸಂಗೀತಕಲಿಕಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.           ಇತ್ತೀಚ್ಚಿನ ದಿನಗಳಲ್ಲಿ ತಬಲ ಹಾಗೂ  ಹಾರ್ಮೋನಿಯಂ  ವಾದಕರು, ರಂಗಭೂಮಿ ಕಲಾವಿದರು, ಗಾಯಕರು ಹೀಗೆ ಸಾಂಸ್ಕೃತಿಕ ಕಲೆ ಬಲ್ಲವರು ವಿರಳವಾಗುತ್ತಿದ್ದಾರೆ. ಕಲಾವಿದರ ಅಭಾವ ಎಷ್ಟಿದೆ ಎಂಬುದನ್ನು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರಿಗೆ ಮಾತ್ರ ಗೊತ್ತು. ಹಾಗಾಗಿ ಇಂದು ಹಣ ಉಳ್ಳವರು ಮಾತ್ರವೇ ಶ್ರೀಮಂತರಲ್ಲ ಕಲೆ ಬಲ್ಲವರೂ ಸಹ ಶ್ರೀಮಂತರೆ. ಈ ನಿಟ್ಟಿನಲ್ಲಿ ಸುಗಮ ಸಂಗೀತ ಕಲಿಕಾ ಶಿಬಿರದ ಮೂಲಕ ನವ ಗಾಯಕರನ್ನು ಸೃಷ್ಠಿಸುತ್ತಿರುವುದ ಸ್ವಾಗತಾರ್ಹ ಬೆಳವಣಿಗೆ ಎಂದರು.                 ಸಂಗೀತದಿಂದ ಆರೋಗ್ಯ ಹಾಗೂ ಜ್ಞಾನಗಳೆರಡೂ ವೃದ್ಧಿಯಾಗುತ್ತದೆ. ಅಂದರೆ ಸಂಗೀತ ಹಾಡೋದು

ತಿರುಮಲಾಪುರ ದೇವಾಲಯದಲ್ಲಿ ಹುಂಡಿ ಕದ್ದೊಯ್ದ ಕಳ್ಳರು.

ಹುಳಿಯಾರು: ಸಮೀಪದ ತಿರುಮಲಾಪುರದ ಪುರಾಣ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿನ ಹುಂಡಿಯನ್ನು ಕದ್ದೊಯ್ದಿರುವ ಘಟನೆ ಭಾನುವಾರ ತಡರಾತ್ರಿ ಜರುಗಿದೆ. ಹುಣ್ಣಿಮೆ ರಾತ್ರಿಯ ಬೆಳದಿಂಗಳಿನಲ್ಲಿ ದೇವಾಲಯದ ಬಾಗಿಲ ಬೀಗ ಹೊಡೆದು ಒಳ್ಳನುಗ್ಗಿರುವ ಕಳ್ಳರು ದೇವರಿಗೆ ಕರ್ಪೂರ ಹಚ್ಚಿ ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿ ನಂತರ ಅಲ್ಲಿದ್ದ ಹುಂಡಿಯನ್ನು ಕದ್ದೊಯ್ದಿದ್ದಾರೆ.ದೇವರ ಶಿಲಾಮೂರ್ತಿಗೆ ಯಾವುದೇ ಆಭರಣ ಹಾಕಿರಲಿಲ್ಲವಾದ್ದರಿಂದ ಅಲ್ಲಿದ್ದ ಹುಂಡಿ ಮಾತ್ರ ಕಳವು ಮಾಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಹುಂಡಿ ಹಣದ ಏಣಿಕೆಯಾಗಿರಲಿಲ್ಲಾ.ಐವತ್ತು ಸಾವಿರದಷ್ಟು ಹಣ ಹುಂಡಿಯಲ್ಲಿದ್ದಿರಬಹುದೆಂದು ಅಂದಾಜಿಸಲಾಗಿದ್ದು ಬೆಳಗಿನ ಜಾವ ಪೂಜೆಗೆ ಹೋದ ಸಂದರ್ಭದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ.ದೇವಾಲಯದ ಅಧ್ಯಕ್ಷ ಟಿ.ಕೆ.ಮಂಜುನಾಥ್ ಹುಳಿಯಾರು ಠಾಣೆಗೆ ದೂರು ನೀಡಿದ್ದಾರೆ. ಕಳೆದ ಹದಿನೈದು ದಿನದಲ್ಲಿ ಹುಳಿಯಾರಿನಲ್ಲಿ ಸಂಭವಿಸಿದ ಹುಂಡಿಕಳವಿನ ಎರಡನೇ ಪ್ರಕರಣ ಇದಾಗಿದ್ದು ದೇವಾಲಯಗಳ ಆಡಳಿತ ಮಂಡಳಿಗಳು ಘಟನೆಯಿಂದ ತಲ್ಲಣಗೊಂಡಿವೆ.

ಹುಳಿಯಾರು ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಯ ಸುವರ್ಣ ಮಹೋತ್ಸವಕ್ಕೆ ಚಾಲನೆ

ಹುಳಿಯಾರು: ಭಾರತ ದೇಶ ಪ್ರತಿಯೊಬ್ಬ ವ್ಯಕ್ತಿಯಲ್ಲಿಯು ಸಹಾ ಪ್ರೀತಿ, ವಿಶ್ವಾಸ, ನಂಬಿಕೆ, ಸಹೋದರತ್ವ ಭಾವನೆಯನ್ನು ಹೊಂದಿರುವ ಹೆಮ್ಮಯ ದೇಶವಾಗಿದೆ ಎಂದು ಥಿಯಸಾಫಿಕಲ್ ಸೊಸೈಟಿಯ ಅಂತರರಾಷ್ಟೀಯ ಕಾರ್ಯದರ್ಶಿ ಮಾರ್ಜಾ ಆರ್ಟಮಾ ಶ್ಲಾಘಿಸಿದರು. ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಆವರಣದಲ್ಲಿ ನಡೆದ ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ನಿನ ೧೦೭ನೇಯ ವಾರ್ಷಿಕ ಸಮ್ಮೇಳನ ಹಾಗೂ ಹುಳಿಯಾರು ಸನ್ಮಾರ್ಗ ಥಿಯಸಾಫಿಕಲ್ ಲಾಡ್ಜಿನ ಸುವರ್ಣ ಮಹೋತ್ಸವದ ಸಮಾರಂಭದ ಉದ್ಘಾಟನೆಯನ್ನು ಥಿಯಸಾಫಿಕಲ್ ಸೊಸೈಟಿಯ ಅಂತರರಾಷ್ಟ್ರಿ ಯ ಕಾರ್ಯದರ್ಶಿ ಮಾರ್ಜಾ ಆರ್ಟಮಾ ನೆರವೇರಿಸಿದರು.         ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಆವರಣದಲ್ಲಿ ನಡೆದ ಸನ್ಮಾರ್ಗ ಥಿಯಸಾಫಿಕಲ್ ಲಾಡ್ಜಿನ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ನಿನ ೧೦೭ನೇಯ ವಾರ್ಷಿಕ ಸಮ್ಮೇಳ ಉದ್ಘಾಟಿಸಿ ಅವರು ಮಾತನಾಡಿದರು.             ವಿಶ್ವ ಸೋದರತ್ವ -ಆಂತರಿಕ ಮತ್ತು ಬಾಹ್ಯ ದೃಷ್ಟಿಕೋನ ಎಂವ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು ಈ ದೇಶದ ಜನರಲ್ಲಿ ನಂಬಿಕೆಯ ಗುಣ, ಒಳ್ಳೆಯ ಆಲೋಚನೆ, ಸಹೋದರತ್ವ ಭಾವನೆಯು ಪ್ರತಿಯೊಬ್ಬರ ಅಂತರಂಗದಿಂದ ಬಂದಿರುವಂತಹ ಪ್ರವೃತ್ತಿಯಾಗಿದೆ ಎಂದರು. ಇಂತಹ ಭಾವನೆಯನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ವ್ಯಕ್ತಪಡಿಸುವ ಮೂಲಕ ನಮ್ಮನ್ನು ನಾವು ಗುರುತಿಸಿಕೊಂಡು ಸಹೋದರತ್ವದಿಂದ ನಡೆಯುವಂತಹ ಸರಪಳಿಯು ಹಿಂದಿನಿಂದಲೂ

ಹುಳಿಯಾರು ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಪ್ರಸ್ತಾವನೆ

ಹುಳಿಯಾರು :ಹುಳಿಯಾರು ಜನರ ಬಹುದಿನದ ಬೇಡಿಕೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತುಮಕೂರು ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಹುಳಿಯಾರು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಣ್ಣ ತಿಳಿಸಿದರು.         ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಹುಳಿಯಾರಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಚರ್ಚೆ ನಡೆದು ಪ್ರಸ್ತಾವನೆಯನ್ನು ಅನುಮೋದಿಸಲಾಯಿತು ಎಂದರು.          ಪ್ರಾ.ಆ. ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕೆಲವು ಮಾನದಂಡಗಳಿದ್ದು ಆ ಪ್ರಕಾರವಾಗಿ ಅಲ್ಲಿ ತಿಂಗಳಿಗೆ ಕನಿಷ್ಟ ೨೦ ಹೆರಿಗೆ ಪ್ರಕರಣಗಳು ದಾಖಲಾಗಬೇಕು. ನಾಲ್ಕು ಪ್ರಾ.ಆ. ಕೇಂದ್ರಗಳ ಸಮೀಪದಲ್ಲಿ ಕೇಂದ್ರ ಸ್ಥಾನವಿದ್ದು, ಅದು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯನ್ನು ಒಳಗೊಂಡಿರಬೇಕು. ಈ ಎಲ್ಲ ಮಾನದಂಡಗಳ ಅರ್ಹತೆ ಆಧಾರದ ಮೇಲೆ ಹುಳಿಯಾರು ಅಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಒಪ್ಪಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.        ತಾವು ಕೂಡ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದ

ಹುಳಿಯಾರು: ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ೪೬ ಮಂದಿ ಆಯ್ಕೆ

ಹುಳಿಯಾರು: ಪಟ್ಟಣದಲ್ಲಿ ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ತಂಡದಿಂದ ಆಯೋಜಿಸಿರುವ ಒಂದು ವಾರಗಳ ಕಾಲದ ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ನಡೆದ ಕಂಠ ಪರೀಕ್ಷೆಯಲ್ಲಿ ೪೬ ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಅ.೧೮ರ ಮಂಗಳವಾರದಿಂದ ಶಿಬಿರ ನಡೆಯಲಿದೆ ಎಂದು ಸಂಗೀತ ಶಿಕ್ಷಕ ಸುಭಾಷ್‌ಪಾಟೀಲ್ ತಿಳಿಸಿದರು. ಹುಳಿಯಾರಿನಲ್ಲಿ ಆಯೋಜಿಸಲಾಗಿರುವ ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ಶಿಕ್ಷಕ ಸುಭಾಷ್ ಪಾಟೀಲ್ ಕಂಠ ಪರೀಕ್ಷೆ ನಡೆಸಿದರು             ಇಂದಿನ ಯುವಪೀಳಿಗೆಗೆ ನಮ್ಮ ಸಾಹಿತ್ಯ,ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸಲು ಕಲಿಕಾ ಶಿಬಿರ ಹಮ್ಮಿಕೊಂಡಿದ್ದು ಇಲ್ಲಿ ಸುಲಲಿತವಾಗಿ ನಿರ್ಭಯವಾಗಿ ವಾದ್ಯದ ಹಿಮ್ಮೇಳದಲ್ಲಿ ವೇದಿಕೆಯಲ್ಲಿ ಹಾಡುವುದನ್ನು ಕಲಿಸಲಾಗುವುದು ಎಂದರು.         ಶಿಬಿರದಲ್ಲಿ ಭಕ್ತಿಗೀತೆ, ಭಾವಗೀತೆ,ತತ್ವಪದ,ಜಾನಪದ ಗೀತೆ,ಭಜನೆ,ಗಝಲ್,ದೇವರನಾಮ ಮುಂತಾದವುಗಳನ್ನು ವಾದ್ಯ ಸಂಗೀತದ ಹಿನ್ನಲೆಯಲ್ಲಿ ಮಾಧುರ್ಯ ಪೂರ್ಣವಾಗಿ ಹಾಡುವ ಬಗ್ಗೆ ಕಲಿಸಿಕೊಡಲಾಗುವುದು.ಹಾಡುವ ಬಗ್ಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗುವುದು.ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಂದ ಕಡೆಯ ದಿನ ಸಂಗೀತ ಸಂಜೆ ನಡೆಸಿಕೊಡಲಾಗುವುದು ಎಂದರು.         ಮಂಗಳವಾರದಿಂದ ವಾಸವಿ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ೧ ಗಂಟೆಯವರೆಗೆ ತರಬೇತಿ ನೀಡಲಾಗುವುದು.ಶಿಬಿರಕ್ಕೆ ಮತ್ತೆ ಸೇರಬಯಸುವವರ

ಹುಳಿಯಾರು ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಗೆ ೫೦ ವರ್ಷ

ಇಂದಿನಿಂದ ಮೂರುದಿನಗಳ ಕಾಲ ಸುವರ್ಣ ಮಹೋತ್ಸವ ಆಚರಣೆ ---------------------------------- ಹುಳಿಯಾರು: ಪಟ್ಟಣದ ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಯ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಕರ್ನಾಟಕ ಥಿಯಾಸಫಿಕಲ್ ಫೆಡರೇಷನ್ನಿನ ವಾರ್ಷಿಕ ಸಮ್ಮೇಳನ ಅ.೧೫ರ ಶನಿವಾರದಿಂದ ಮೂರುದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಕ.ಥಿ.ಫೆ ನ ಅಧ್ಯಕ್ಷರಾದ ಸೋ.ಬಿ.ವಿ.ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಅಡಿಯಾರು ಥಿಯಾಸಫಿಕಲ್ ಸೊಸೈಟಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಮಾರ್ಜಾ ಆರ್ಟಮಾ ,ಅಡಿಯಾರು ಲೈಬ್ರರಿ ಮತ್ತು ಸಂಶೋಧನ ಕೇಂದ್ರದ ಪ್ರೋ.ಸಿ.ಎ.ಶಿಂಧೆ,ಬೆಂಗಳೂರು ಕ.ಥಿ.ಫೆ ನ ಉಪಾಧ್ಯಕ್ಷ ದಕ್ಷಿಣಮೂರ್ತಿ,ಕಾರ್ಯದರ್ಶಿ ಪಾರ್ವತಮ್ಮ,ಕೆ.ಎಲ್.ನಂಜುಂಡಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.           ಶನಿವಾರ ಸಂಜೆ ಸುವರ್ಣ ಮಹೋತ್ಸವದ ಉದ್ಘಾಟನೆಯನ್ನು ಮಾರ್ಜಾ ಆರ್ಟಮಾ ನೆರವೇರಿಸಲಿದ್ದು ವಿಶ್ವ ಸೋದರತ್ವ -ಆಂತರಿಕ ಮತ್ತು ಬಾಹ್ಯ ದೃಷ್ಟಿಕೋನ ಎಂವ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ನಂತರ ತನುಶ್ರೀ ಅವರಿಂದ ಭರತನಾಟ್ಯ ನಡೆಯಲಿದೆ.            ಭಾನುವಾರ ಮುಂಜಾನೆ ಭಾರತ ಸಮಾಜ ಪೂಜೆ ಹಾಗೂ ಪೂಜೆಯೆ ಅರ್ಥವಿವರಣೆ ಬಗ್ಗೆ ಕೆ.ಎಲ್.ನಂಜುಂಡಶೆಟ್ಟಿ ಉಪನ್ಯಾಸ ನೀಡಲಿದ್ದಾರೆ.೧೦ ಗಂಟೆಗೆ ಕರ್ನಾಟಕ ಥಿಯಾಸಫಿಕಲ್ ಫೆಡರೇಷನ್ನಿನ ೧೦೭ನೇ ವಾರ್ಷಿಕ ಸಮ್ಮೇಳನದ ಉದ್ಘಾಟನೆ

ಹುಳಿಯಾರು ಹವ್ಯಾಸಿ ಚಾರಣಿಗರಿಂದ ದೇಶದ ಎತ್ತರದ ಜಲಪಾತಕ್ಕೆ ಚಾರಣ

ಹುಳಿಯಾರು ಹಾಗೂ ಶೆಟ್ಟಿಕೆರೆ ಗ್ರಾಮಗಳ ಹವ್ಯಾಸಿ ಚಾರಣಿಗರು ಪ್ರಸಕ್ತ ಸಾಲಿನ ಚಾರಣವನ್ನು ದೇಶದ ಎತ್ತರದ ಜಲಪಾತವಾದ ಕುಂಚಿಕಲ್ ಜಲಪಾತಕ್ಕೆ ೩ ದಿನಗಳ ಚಾರಣ ಶಿಬಿರವನ್ನು ಇದೇ ತಿಂಗಳ ೧೪ ರಿಂದ ೧೬ ರ ವರೆವಿಗೆ ಹಮ್ಮಿಕೊಳ್ಳಲಿದೆ. ಹುಳಿಯಾರು ಹಾಗೂ ಶೆಟ್ಟಿಕೆರೆ ಗ್ರಾಮಗಳಿಂದ ದೇಶದ ಎತ್ತರದ ಜಲಪಾತಕ್ಕೆ ಚಾರಣ ಹೊರಟಿರುವ ಹವ್ಯಾಸಿ ಚಾರಣಿಗರ ತಂಡದ ಸದಸ್ಯರು.            ದಶಕದ ಹಿಂದೆ ನೆಹರು ಯುವ ಕೇಂದ್ರ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಏರ್ಪಡಿಸಿದ್ದ ಸಾಹಸ ಚಾರಣ ಶಿಬಿರದಿಂದ ಉತ್ತೇಜನಗೊಂಡು ಆರಂಭವಾದ ಈ ತಂಡದ ಚಾರಣ ಹವ್ಯಾಸ ಇಲ್ಲಿಯವರೆಗೆ ಬುರುಡೆಜೋಗ, ಅನಡ್ಕ, ಬಲ್ಲಾಳರಾಯನದುರ್ಗ, ಅರಿಶಿನಗುಂಡಿ, ಹಿಡ್ಲುಮನೆ, ದೇವಕಾರು, ಭಂಡಾಜೆ, ಕೊಡಚಾದ್ರಿ, ಕೂಡ್ಲುತೀರ್ಥ, ಬೆಳ್ಳಿಗುಂಡಿ ಹೀಗೆ ಅನೇಕ ಕಡೆಯ ದುರ್ಗಮ ಕಾಡಿನಲ್ಲಿ ಯಶಸ್ವಿಯಾಗಿ ಚಾರಣ ನಡೆಸಿ ಬಂದಿದೆ.          ಸರ್ಕಾರದ ಹಾಗೂ ದಾನಿಗಳ ಧನಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಚಾರಣ ಕೈಗೊಳ್ಳುತ್ತಿರುವ ಈ ತಂಡ ಈ ಭಾರಿ ವಿಶೇಷ ಎನ್ನುವಂತೆ ಕರ್ನಾಟಕ ರಾಜ್ಯದಲ್ಲಿರುವ ದೇಶದ ಎತ್ತರದ ಹಾಗೂ ಹೆಚ್ಚು ಕವಲುಗಳನ್ನು ಹೊಂದಿರುವ ಕುಂಚಿಕಲ್ ಫಾಲ್ಸ್‌ಗೆ ಚಾರಣ ನಡೆಸಲಿದೆ. ಕುಂಚಿಕಲ್ ಜಲಪಾತವು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಜೋಗ್ ಜಲಪಾತ ೮೨೯ ಅಡಿಗಳ ಎತ್ತರದಿಂದ ಧುಮುಕಿದರೆ ಇದು ೧೪೯೩ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ವಾರಾಹಿ ನದಿಯಿ

ಸಿ.ಬಿ.ಎಸ್ ಗ್ರೂಪ್ ನಿಂದ ಇಂದು ವಾಲಿಬಾಲ್ ಪಂದ್ಯಾವಳಿ

ಹುಳಿಯಾರು ಸಮೀಪದ ಬರಗೀಹಳ್ಳಿಯಲ್ಲಿ ಸಿ.ಬಿ.ಎಸ್ ಗ್ರೂಪ್ ನಿಂದ ಅ.೧೩,೧೪ಮತ್ತು ೧೫ ರಂದು ಮೂರುದಿನಗಳ ಕಾಲದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ತಾಪಂ ಸದಸ್ಯ ಯತೀಶ್ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಲಿದ್ದಾರೆ.ಜಿಪಂ ಸದಸ್ಯ ಕಲ್ಲೇಶ್ ಹಾಗೂ ಚಿಕ್ಕನಾಯಕನಹಳ್ಳಿಯ ಪುರಸಭಾ ಅಧ್ಯಕ್ಷ ದಯಾನಂದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಯೋಗ ಮತ್ತು ಮಧುಮೇಹ ಜಾಗೃತಿ ಕಾರ್ಯಕ್ರಮ ಯಶಸ್ವಿ

ಹುಳಿಯಾರು: ಯೋಗ, ಧ್ಯಾನದಿಂದ ಮಧುಮೇಹವನ್ನು ಬರದಂತೆ ನೋಡಿಕೊಳ್ಳಬಹುದೇ ವಿನಹಃ ವೈಜ್ಞಾನಿಕ ಔಷಧಿಗಳಿಂದ ಬರದಂತೆ ತಡೆಗಟ್ಟುವುದು ಅಸಾಧ್ಯ ಎಂದು ಮಾಜಿ ಶಾಸಕ ಕಿರಣ್‌ಕುಮಾರ್‌ರವರು ಅಭಿಪ್ರಾಯಪಟ್ಟರು              ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ಜರುಗಿದ ಯೋಗ ಮತ್ತು ಮಧುಮೇಹ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತಿನ ದಿನಗಳಲ್ಲಿ ಮಧುಮೇಹ/ಸಕ್ಕರೆ ಕಾಯಿಲೆ ಜನ ಸಾಮಾನ್ಯನನ್ನು ಅತೀಯಾಗಿ ಕಾಡುತ್ತಿದೆ. ಇದಕ್ಕೆ ಇಂಗ್ಲಿಷ್ ಔಷದಗಳಿಂದ ಪರಿಹಾರ ಕಷ್ಠ ಸಾಧ್ಯ, ಒಮ್ಮೆ ಔಷದಕ್ಕೆ ಅಂಟಿಕೊಂಡರೆ ಜೀವಿನದ ಕೊನೆಯವರೆಗೂ ಔಷದಗಳನ್ನು ತೆಗೆದುಕೊಳ್ಳುತ್ತಿರಬೇಕು .ಇದರಿಂದ ಸಂಪೂರ್ಣವಾಗಿ ಸಕ್ಕರೆ ಕಾಯಿಲೆಯನ್ನು ನಿರ್ಮೂಲನೆಯಾಗುವುದಿಲ್ಲ. ಯೋಗ ಮತ್ತು ಧ್ಯಾನದಿಂದ ಮಧುಮೇಹವನ್ನು ಹತೋಟಿಯಲ್ಲಿಟ್ಟು ನಿರ್ಮೂಲನೆ ಮಾಡಬಹುದಾಗಿದೆ. ಹಿಂದಿನ ದಿನಗಳಲ್ಲಿ ರೈತಾಪಿ ವರ್ಗದವರು ಹೊಲ ತೋಟಗಳಿಗೆ ಹೋಗುತ್ತಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರಿಂದ ವ್ಯಾಯಮವಾಗುತಿತ್ತು. ಆದರೆ ಇಂದಿನ ದಿನಗಳಲ್ಲಿ ದೈಹಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಪಟ್ಟಣದಲ್ಲಿ ಧ್ಯಾನ ಹಾಗೂ ಯೋಗ ಕೇಂದ್ರಗಳು ಇಂತಹ ಮಧುಮೇಹಿಗಳಿಗೆ ಆರೋಗ್ಯದ ಬಗ್ಗೆ ಮತ್ತು ದೈಹಿಕವಾಗಿ ಕೆಲಸ ಮಾಡುವಂತೆ ಮಾಡುತ್ತಿವೆ ಎಂದರು.           ವೈಧ್ಯಾಧಿಕಾರಿ ಡಾ|| ಚಂದನರವರು ಮಾತನಾಡಿ ಹಿಂದಿನ ದಿನಗಳ

ದಸೂಡಿಯಲ್ಲಿ ಸಂಭ್ರಮದ ದಸರಾ ಆಚರಣೆ

ಹುಳಿಯಾರು ಹೋಬಳಿಯ ದಸೂಡಿಯಲ್ಲಿ ದಸರಾ ಮಹೋತ್ಸವನ್ನು ಹತ್ತುದಿನಗಳ ಕಾಲ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಗ್ರಾಮದ ಶ್ರೀ ಆಂಜನೇಯಸ್ವಾಮಿಯವರ ದೇವಾಲಯದಲ್ಲಿ ಮಹಾಲಯ ಅಮವಾಸ್ಯೆಯ ಮಾರನೆ ದಿನ ಪಾಡ್ಯದಂದು ಶ್ರೀಸ್ವಾಮಿಯವರನ್ನು ಪಟ್ಟಕ್ಕೆ ಕೂರಿಸುವ ಮೂಲಕ ದಸರಾಕ್ಕೆ ಚಾಲನೆ ನೀಡಲಾಗಿತ್ತು. ಹುಳಿಯಾರು ಹೋಬಳಿಯ ದಸೂಡಿಯಲ್ಲಿ ದಸರಾ ಮಹೋತ್ಸವದ ಅಂಗವಾಗಿ ಹನುಮ ಸಹಿತ ಶ್ರೀರಾಮಚಂದ್ರರ ಪಟ್ಟಾಭಿಷೇಕ ನೆರವೇರಿತು.           ಪ್ರತಿದಿನ ರಾತ್ರಿ ವಿಶೇಷ ಅಲಂಕಾರ ,ಪೂಜೆ ಹಾಗೂ ಭಜನೆ ನಡೆಯಿತು.ಅರ್ಚಕ ವಂಶಸ್ಥರಿಂದ ನಿರಂತರ ಅಷ್ಟೋತ್ತರ,ಮತ್ತು ಶ್ರೀರಾಮಾಯಣ ಗ್ರಂಥದ ಪಠನೆ ಮಾಡಲಾಯಿತು.ಕೊನೆಯ ದಿನವಾದ ವಿಜಯದಶಮಿಯಂದು ಮಧ್ಯಾಹ್ನ ೩ ಕ್ಕೆ ಅಂಬಿನ ಸೇವೆ ಮಾಡಿ,ಬನ್ನಿಪತ್ರೆಯನ್ನು ವಿತರಿಸುವ ಮೂಲಕ ಸಕಲರಿಗೂ ಶ್ರೇಯಸ್ಸನ್ನು ಕೋರಲಾಯಿತು.ರಾತ್ರಿ ಹನುಮ ಸಹಿತ ಶ್ರೀರಾಮಚಂದ್ರರ ಪಟ್ಟಾಭಿಷೇಕ ಮಾಡುವ ಮೂಲಕ ದಸರಾ ಉತ್ಸವಕ್ಕೆ ತೆರೆಯೆಳೆಯಲಾಯಿತು.ಆಗಮಿಸಿದ ಭಕ್ತಾಧಿಗಳಿಗೆ ಪಂಚಫಲ ಪ್ರಸಾದ ವಿತರಿಸಲಾಯಿತು.ಈ ಎಲ್ಲಾ ಕಾರ್ಯಗಳಲ್ಲಿ "ಶ್ರೀ ಸೇನೆ ದಸೂಡಿ"ಯ ಕಾರ್ಯಕರ್ತರು ಹಾಗೂ ಭಕ್ತಾದಿಗಳು ಪಾಲ್ಗೊಂಡು ಶ್ರೀ ದಸೂಡಿ ಹನುಮನ ಕೃಪೆಗೆ ಪಾತ್ರರಾದರು.

ಹುಳಿಯಾರಿನಲ್ಲಿ ಸಂಭ್ರಮದ ಅಂಬಿನೋತ್ಸವ

ಹುಳಿಯಾರು: ಹುಳಿಯಾರಿನಲ್ಲಿ ದಸರಾ ಅಂಗವಾಗಿ ಕೆರೆ ಏರಿಯ ಮೇಲಿನ ಬನ್ನಿ ಮಂಟಪದ ಬಳಿ ಸಂಭ್ರಮದಿಂದ ಅಂಬಿನೋತ್ಸವ ನಡೆಯಿತು. ಅಂಬಿನೋತ್ಸವಕ್ಕೆ ಮೊದಲು ಪಟ್ಟಣದ ಶ್ರೀಬೀರಪ್ಪ ದೇವರು, ಗ್ರಾಮದೇವತೆ ಶ್ರೀ ದುರ್ಗಮ್ಮ, ಶ್ರೀ ಹುಳಿಯಾರಮ್ಮ ದೇವರುಗಳನ್ನು ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿಗೆ ಕರೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.             ನಂತರ ಎಲ್ಲಾ ದೇವರುಗಳು ರಾಜ ಬೀದಿಯಲ್ಲಿ ಮೆರವಣಿಗೆಯಲ್ಲಿ ಹುಳಿಯಾರು ಕೆರೆ ಏರಿಯ ಮೇಲಿರುವ ಬನ್ನಿ ಮಂಟಪದ ಬಳಿಗೆ ಆಗಮಿಸಿದವು. ನಂತರ ಎಲ್ಲಾ ದೇವರುಗಳನ್ನು ಹಸಿರು ಚಪ್ಪರದಡಿ ಕೂರಿಸಿ ಅಂಬಿನೋತ್ಸವದ ಪೂಜ ಕೈಂಕರ್ಯಗಳನ್ನು ನಡೆಸಲಾಯಿತು. ಬನ್ನಿ ಮರದ ಬಳಿ ಬಾಳೆಕಂದನ್ನು ನೆಟ್ಟು ವಿಶೇಷ ಪೂಜೆ ನೆರವೇರಿಸಲಾಯಿತು.             ನಂತರ ಮೈಸೂರು ಪೇಟ, ಜರಿಪಂಚೆಯ ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದ ಶಾನಬೋಗ ಕುಟುಂಬದ ಲಕ್ಷ್ಮೀನಾರಾಯಣ್ ಅವರನ್ನು ಬನ್ನಿ ಮಂಟಕ್ಕೆ ಸಕಲ ಶಿಷ್ಟಾಚಾರದೊಂದಿಗೆ ಕರೆತರಲಾಯಿತು. ಅರ್ಚಕರುಗಳಾದ ಗುಂಡಣ್ಣ, ಶೇಷಣ್ಣ, ಮಧು ಹಾಗೂ ತಳವಾರ ನಾಯಕರ ಸಮ್ಮುಖದಲ್ಲಿ ಬನ್ನಿ ಮರಕ್ಕೆ ಅಂಬನ್ನು ಹೊಡೆಸಲಾಯಿತು. ನೆರೆದಿದ್ದ ಸಾವಿರಾರು ಭಕ್ತರು ಹರ್ಷೋದ್ಘಾರದೊಂದಿಗೆ ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬನ್ನಿ ಮರಕ್ಕೆ ಹಾಗೂ ಆಗಮಿಸಿದ್ದ ದೇವರುಗಳಿಗೆ ಪೂಜೆ ಹಾಗೂ ಹಣ್ಣುಕಾಯಿ ಮಾಡಿಸಿಕೊಂಡರು. ಶ್ರೀ ಬೀರದೇವರ ವೀರ ಮಕ್ಕಳ ಸೇವೆ ನಡೆಸಿ ಪೂಜೆ ಸಲ್ಲಿಸಿ ತೆರಳಲಾಯಿ

ಹುಳಿಯಾರು: ತಾಲ್ಲೂಕು ಭಗೀರಥ ನೌಕರರ ಸಮಾವೇಶ ಯಶಸ್ವಿ

ಹುಳಿಯಾರು: ಭಗೀರಥ ಸಮಾಜದವರು ಆರ್ಥಿಕವಾಗಿ ಹಿಂದುಳಿದಿರುವ ತಮ್ಮ ಜನಾಂಗದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಹ ನೀಡಲು ವಿದ್ಯಾನಿಧಿಯನ್ನು ಸ್ಥಾಪಿಸಿರುವುದು ಅನುಕರಣೀಯ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಶ್ಲಾಘಿಸಿದರು.             ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಭಗೀರಥ ನೌಕರರ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಭಗೀರಥ ನೌಕರರ ಸಮಾವೇಶದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿದರು.             ಭಗೀರಥ ಸಮಾಜಬಾಂಧವರನ್ನು ಸಂಘಟಿಸಿ ಅವಶ್ಯವಿರುವವರಿಗೆ ನೆರವು ನೀಡಲು ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದ ಅವರು  ನನ್ನ ಅಧಿಕಾರದ ಅವಧಿಯಲ್ಲಿ ನನ್ನಿಂದಾಗುವ ಎಲ್ಲಾ ರೀತಿಯ ಅನುಕೂಲವನ್ನ ನೀಡುತ್ತಿದ್ದು ಸರಕಾರವು ಸಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.               ಅಡಕೆ ಮತ್ತು ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡುವ ಕಾರ್ಯವನ್ನ ಕೇಂದ್ರಸರ್ಕಾರ ನಡೆಸಬೇಕಿದೆ. ಈ ಬಗ್ಗೆ ಈಗಾಗಲೇ ಸಂಸತ್ತಿನ ಅಧಿವೇಶನದಲ್ಲಿ ನಾನು ಪ್ರಸ್ತಾವಿಸಿದ್ದು ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದ್ದೇನೆ ಎಂದರು. ನೀರಾ ಆರೋ

ಹುಳಿಯಾರಿನಲ್ಲಿ ಆಯುಧಪೂಜೆ ಸಂಭ್ರಮ

ಹೂವಿನ ದರ ಗಗನಕ್ಕೆ : ಬೂದುಗುಂಬಳ ಬೇಡಿಕೆ ------------------------- ಹುಳಿಯಾರು:ಪಟ್ಟಣದಲ್ಲಿ ಆಯುಧಪೂಜೆಯ ಹಿನ್ನಲೆಯಲ್ಲಿ ಬೂದು ಕುಂಬಳಕಾಯಿ, ಹೂವಿನ, ಬಾಳೆ ಕಂದು, ಅಲಂಕಾರಿಕ ಹೂಗಳ ವ್ಯಾಪಾರ ಜೋರಾಗಿತ್ತು. ಬೆಲೆ ಹೆಚ್ಚಿದರೂ ಅನಿವಾರ್ಯವಾಗಿ ಕೊಳ್ಳುವ ಸ್ಥಿತಿ ಗ್ರಾಹಕನದಾಗಿತ್ತು.ಭಾನುವಾರದಂದು ವಿಶೇಷ ಹಬ್ಬದ ಸಂತೆ ಕೂಡ ನಡೆಯಿತು. ಸಂತೆಗೆ ಆಗಮಿಸಿದ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಬ್ಬಕ್ಕೆ ಬೇಕಾದ ಹೂ,ಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಂಡೊಯ್ಯುತ್ತಿದುದ್ದು ಸಾಮಾನ್ಯವಾಗಿತ್ತು. ಆಯುಧಪೂಜೆ ಪ್ರಯುಕ್ತ ಎಲ್ಲೆಡೆ ರಾಶಿರಾಶಿ ಬೂದುಗುಂಬಳ ಕಂಡುಬಂತು.                  ನವರಾತ್ರಿಯಲ್ಲಿ ಆಯುಧಪೂಜೆ, ಅಂಗಡಿಪೂಜೆ ಮತ್ತು ವಾಹನ ಪೂಜೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೂದು ಕುಂಬಳಕಾಯಿ ಬೇಡಿಕೆಯಿತ್ತು.ಕುಂಬಳಕಾಯಿಬೆಲೆ ಕಳೆದ ಬಾರಿಗಿಂತ ಕಡಿಮೆಯಾಗಿದ್ದು ಸಣ್ಣ ಗಾತ್ರಕ್ಕೆ ೨೦ ರಿಂದ ೩೦ ಇದ್ದರೆ, ಭಾರಿ ಗಾತ್ರದವಕ್ಕೆ ೧೦೦ ರೂ ಇತ್ತು. ಹಬ್ಬಕ್ಕೆ ಎರಡುದಿನ ಮುಂಚಿತವಾಗಿಯೇ ರೈತರು ಕುಂಬಳಕಾಯಿಯನ್ನು ಮಾರಲು ತಂದಿದ್ದರು. ಪಟ್ಟಣದ ಅನೇಕ ಕಡೆ ಕುಂಬಳಕಾಯಿಯ ರಾಶಿರಾಶಿಯೇ ಇದ್ದು ಗ್ರಾಹಕರಿಗಾಗಿ ಕಾದುಕೂರುವಂತೆ ಪರಿಸ್ಥಿತಿ ಮಾರಾಟಗಾರನದಾಗಿತ್ತು.               ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರ ಜೋರಾಗಿತ್ತು.ಗೌರಿ ಶಾವಂತಿಗೆ,ಮಾರಿಗೋಲ್ಡ್, ಚೆಂಡುಹೂ ಬೆಲೆ ಗಗನಕ್ಕೇರಿತ್ತ