ಇಂದಿನಿಂದ ಮೂರುದಿನಗಳ ಕಾಲ ಸುವರ್ಣ ಮಹೋತ್ಸವ ಆಚರಣೆ
----------------------------------
ಹುಳಿಯಾರು:ಪಟ್ಟಣದ ಸನ್ಮಾರ್ಗ ಥಿಯಾಸಫಿಕಲ್ ಸೊಸೈಟಿಯ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಕರ್ನಾಟಕ ಥಿಯಾಸಫಿಕಲ್ ಫೆಡರೇಷನ್ನಿನ ವಾರ್ಷಿಕ ಸಮ್ಮೇಳನ ಅ.೧೫ರ ಶನಿವಾರದಿಂದ ಮೂರುದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಕ.ಥಿ.ಫೆ ನ ಅಧ್ಯಕ್ಷರಾದ ಸೋ.ಬಿ.ವಿ.ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಅಡಿಯಾರು ಥಿಯಾಸಫಿಕಲ್ ಸೊಸೈಟಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಮಾರ್ಜಾ ಆರ್ಟಮಾ ,ಅಡಿಯಾರು ಲೈಬ್ರರಿ ಮತ್ತು ಸಂಶೋಧನ ಕೇಂದ್ರದ ಪ್ರೋ.ಸಿ.ಎ.ಶಿಂಧೆ,ಬೆಂಗಳೂರು ಕ.ಥಿ.ಫೆ ನ ಉಪಾಧ್ಯಕ್ಷ ದಕ್ಷಿಣಮೂರ್ತಿ,ಕಾರ್ಯದರ್ಶಿ ಪಾರ್ವತಮ್ಮ,ಕೆ.ಎಲ್.ನಂಜುಂಡಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಶನಿವಾರ ಸಂಜೆ ಸುವರ್ಣ ಮಹೋತ್ಸವದ ಉದ್ಘಾಟನೆಯನ್ನು ಮಾರ್ಜಾ ಆರ್ಟಮಾ ನೆರವೇರಿಸಲಿದ್ದು ವಿಶ್ವ ಸೋದರತ್ವ -ಆಂತರಿಕ ಮತ್ತು ಬಾಹ್ಯ ದೃಷ್ಟಿಕೋನ ಎಂವ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ನಂತರ ತನುಶ್ರೀ ಅವರಿಂದ ಭರತನಾಟ್ಯ ನಡೆಯಲಿದೆ.
ಭಾನುವಾರ ಮುಂಜಾನೆ ಭಾರತ ಸಮಾಜ ಪೂಜೆ ಹಾಗೂ ಪೂಜೆಯೆ ಅರ್ಥವಿವರಣೆ ಬಗ್ಗೆ ಕೆ.ಎಲ್.ನಂಜುಂಡಶೆಟ್ಟಿ ಉಪನ್ಯಾಸ ನೀಡಲಿದ್ದಾರೆ.೧೦ ಗಂಟೆಗೆ ಕರ್ನಾಟಕ ಥಿಯಾಸಫಿಕಲ್ ಫೆಡರೇಷನ್ನಿನ ೧೦೭ನೇ ವಾರ್ಷಿಕ ಸಮ್ಮೇಳನದ ಉದ್ಘಾಟನೆಯನ್ನು ಪ್ರೋ .ಸಿ.ಎ.ಶಿಂಧೆ ನೆರವೇರಿಸಿ ಪ್ರಕೃತಿಯ ಸಹಜ ಗುಣವೇ ಐಕ್ಯತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ನಂತರ ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ.ಮ.೧೨ಕ್ಕೆ ವಿಚಾರ ಮಂಥನ ಹಾಗೂ ಸಂಜೆ ೬ಕ್ಕೆ ಸಾರ್ವಜನಿಕ ಉಪನ್ಯಾಸ ತದನಂತರ ಮೋಹಿನಿ ಅಟ್ಟಂ ನೃತ್ಯ ಹಾಗೂ ಸುಗಮ ಸಂಗೀತ ಆಯೋಜಿಸಲಾಗಿದೆ.
ಅ.೧೭ರ ಸೋಮವಾರ ಬೆ.೬ಕ್ಕೆ ಭಾರತ ಸಮಾಜ ಪೂಜೆ ,೯ಕ್ಕೆ ಮಹಿಳಾ ವಿಚಾರ ಸಂಕಿರಣ,೧೦ಕ್ಕೆ ಸೇವಾವಿಭಾಗದ ಕಾರ್ಯಕ್ರಮ,೧೧.೩೦ಕ್ಕೆ ಥಿಯಾಸಫಿ ಅನುಷ್ಠಾನದಿಂದ ಸಹೋದರ ಭಾವದ ಸಾಧನೆ ಬಗ್ಗೆ ಉಪನ್ಯಾಸ ಹಾಗೂ ೧೨.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ