ಹಿಪ್ಪೋಕ್ಯಾಂಪಸ್ ಪುಟಾಣಿಗಳಿಂದ ಜನಜಾಗೃತಿ ಜಾಥ
--------------------------------------------
ಹುಳಿಯಾರು: ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತದ ಸ್ವಚ್ಚಭಾರತ್‌ಗೆ ಪ್ರತಿಯೊಬ್ಬರು ಕೈಜೋಡಿಸ ಬೇಕಿದೆ.ನಮ್ಮ ಸುತ್ತಮುತ್ತಲ್ಲಿನ ಪರಿಸರವು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನ ಕಾಪಾಡಿಕೊಳ್ಳ ಬೇಕಿದೆ ಎಂದು ಶಿಕ್ಷಕಿ ಚೈತ್ರ ಸಲಹೆ ನೀಡಿದರು.
ಹುಳಿಯಾರು ಗಾಂಧಿಪೇಟೆಯಲ್ಲಿನ ಹಿಪ್ಪೋಕ್ಯಾಂಪಸ್ ಶಾಲೆಯಲ್ಲಿ ನಡೆದ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉತ್ತಮ ಪರಸರದಿಂದ ಉತ್ತಮ ಆರೋಗ್ಯದ ಸಿಗಲಿದ್ದು ಸ್ವಚ್ಚತೆಯಿಂದ ಗ್ರಾಮದ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ನಂತರ ಪುಟ್ಟಾಣಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸ್ವಚ್ಚತೆಯನ್ನ ಕಾಪಾಡುವಂತ್ತೆ ಮತ್ತು ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಘೋಷಣೆ ಕೂಗುತ್ತಾ ಜನಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಲತ, ಸರ್ವಮಂಗಳಮ್ಮ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ