ಹುಳಿಯಾರು:ಪಟ್ಟಣದಲ್ಲಿ ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ತಂಡದಿಂದ ಆಯೋಜಿಸಿರುವ ಒಂದು ವಾರಗಳ ಕಾಲದ ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ನಡೆದ ಕಂಠ ಪರೀಕ್ಷೆಯಲ್ಲಿ ೪೬ ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಅ.೧೮ರ ಮಂಗಳವಾರದಿಂದ ಶಿಬಿರ ನಡೆಯಲಿದೆ ಎಂದು ಸಂಗೀತ ಶಿಕ್ಷಕ ಸುಭಾಷ್‌ಪಾಟೀಲ್ ತಿಳಿಸಿದರು.
ಹುಳಿಯಾರಿನಲ್ಲಿ ಆಯೋಜಿಸಲಾಗಿರುವ ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ಶಿಕ್ಷಕ ಸುಭಾಷ್ ಪಾಟೀಲ್ ಕಂಠ ಪರೀಕ್ಷೆ ನಡೆಸಿದರು |
ಇಂದಿನ ಯುವಪೀಳಿಗೆಗೆ ನಮ್ಮ ಸಾಹಿತ್ಯ,ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸಲು ಕಲಿಕಾ ಶಿಬಿರ ಹಮ್ಮಿಕೊಂಡಿದ್ದು ಇಲ್ಲಿ ಸುಲಲಿತವಾಗಿ ನಿರ್ಭಯವಾಗಿ ವಾದ್ಯದ ಹಿಮ್ಮೇಳದಲ್ಲಿ ವೇದಿಕೆಯಲ್ಲಿ ಹಾಡುವುದನ್ನು ಕಲಿಸಲಾಗುವುದು ಎಂದರು.
ಶಿಬಿರದಲ್ಲಿ ಭಕ್ತಿಗೀತೆ, ಭಾವಗೀತೆ,ತತ್ವಪದ,ಜಾನಪದ ಗೀತೆ,ಭಜನೆ,ಗಝಲ್,ದೇವರನಾಮ ಮುಂತಾದವುಗಳನ್ನು ವಾದ್ಯ ಸಂಗೀತದ ಹಿನ್ನಲೆಯಲ್ಲಿ ಮಾಧುರ್ಯ ಪೂರ್ಣವಾಗಿ ಹಾಡುವ ಬಗ್ಗೆ ಕಲಿಸಿಕೊಡಲಾಗುವುದು.ಹಾಡುವ ಬಗ್ಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗುವುದು.ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಂದ ಕಡೆಯ ದಿನ ಸಂಗೀತ ಸಂಜೆ ನಡೆಸಿಕೊಡಲಾಗುವುದು ಎಂದರು.
ಮಂಗಳವಾರದಿಂದ ವಾಸವಿ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ೧ ಗಂಟೆಯವರೆಗೆ ತರಬೇತಿ ನೀಡಲಾಗುವುದು.ಶಿಬಿರಕ್ಕೆ ಮತ್ತೆ ಸೇರಬಯಸುವವರಿಗೆ ಸೋಮವಾರದವರೆಗೂ ಅವಕಾಶ ಕಲ್ಪಿಸಲಾಗಿದೆ.ಆಸಕ್ತರು ಹೆಚ್ಚಿನ ಮಾಹಿತಿಯನ್ನು ಸುಭಾಷ್ ಪಾಟೀಲ್ (9900468611), ಭವಾನಿ ರಮೇಶ್‌ಸ್ವಾಮಿ (9008731918), ಪೂರ್ಣಮ್ಮ (8183033888), ತಮ್ಮಯ್ಯ (9972572687), ಕೆ.ಎನ್.ಉಮೇಶ್ (9141011234) ಇವರನ್ನು ಸಂಪರ್ಕಿಸಿ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ