ಹುಳಿಯಾರು : ಪಟ್ಟಣದ ಶ್ರೀ ಗಣಪತಿ ದೇವಾಲಯದಲ್ಲಿ ೬೬ ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಿರುವ ಬಸವ ಸಿಂಹಾಸನಾರೂಡ ಗಣಪತಿಯ ವಿಸರ್ಜನಾ ಮಹೋತ್ಸವದ ಅಂಗವಾಗಿ ಶ್ರೀಪಸನ್ನ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಹೋಮ ಹಾಗೂ ಅನ್ನಸಂತರ್ಪಣೆ ಕಾರ್ಯ ನಡೆಯಿತು ಅರ್ಚಕರಾದ ಸತ್ಯನಾರಾಯಣ ಜೋಯಿಸ್ ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಗಣೇಶಮೂರ್ತಿಗೆ ನಾಂದಿ, ಪುಣ್ಯಾಹ, ಅರ್ಚನೆ, ಅಭಿಷೇಕ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನಡೆಸಿದ್ದಲ್ಲದೆ, ನವಗ್ರಹ,ಮೃತ್ಯುಂಜಯ,ಮಹಾಲಕ್ಷ್ಮಿ,ಅಂಜನೇಯ ಹೋಮಗಳನ್ನು ನೆರವೇರಿಸಲಾಯಿತು.
ಮಹಾಮಂಗಳಾರತಿ ಹಾಗೂ ಪೂರ್ಣಾಹುತಿ ಅರ್ಪಿಸಿದ ನಂತರ ವೆಂಕಟಾಚಲಪತಿಶೆಟ್ಟರು ಕುಟುಂಬ ವರ್ಗದವರಿಂದ ಪಾನಕಪನಿವಾರ ಸೇವೆ ನಡೆಯಿತು.ದೇವಾಲಯ ಸಮಿತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್, ತಾಂಡಾವಾಚಾರ್, ಹೂವಿನ ಬಸವರಾಜು, ಗೌಡಿ,ತಮ್ಮಯ್ಯ.ಕೆ ಎಂ ಎಲ್ ಮೂರ್ತಿ,ಮೆಡಿಕಲ್ ಚಂಬಣ್ಣ,ಅರ್ಚಕ ರಾಜಣ್ಣ ಸೇರಿದಂತೆ ಟ್ರಸ್ಟ್ ಸದಸ್ಯರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ