ಹುಳಿಯಾರು: ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯ,ಕನ್ನಿಕಾ ಪರಮೇಶ್ವರಿ ದೇವಾಲಯ,ಶ್ರೀ ಬನಶಂಕರಿ ದೇವಾಲಯ ,ಕಾಳಿಕಾಂಭ ದೇವಾಲಯಗಳಲ್ಲಿ ಶರನ್ನವರಾತ್ರಿ ಅಂಗವಾಗಿ ಅ. ೦೧ ರಿಂದ ೧೧ ರವರೆಗೆ ಪ್ರತಿನಿತ್ಯ ಬೆಳಗ್ಗೆ ಅಭಿಷೇಕ,ಅರ್ಚನೆ ಸೇರಿದಂತೆ ಚಂಡಿಕಾಪಾರಾಯಣ, ದೇವಿಸ್ತುತಿ,ದುರ್ಗಾಪಾರಾಯಣ, ಮಹಾಮಂಗಳಾರತಿ ಹಾಗೂ ಸಂಜೆ ದೇವಿಗೆ ವಿವಿಧ ಅಲಂಕಾರ, ರಾತ್ರಿ ೭ ಗಂಟೆಗೆ ಭಜನೆ, ಅರ್ಚನೆ, ದೀಪಾರಾಧನೆ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅ.೧ರಂದು ಅಮ್ಮನವರನ್ನು ಪಟ್ಟಕ್ಕೆ ಕೂರಿಸಲಾಗುವುದು. ಅ.೨ ರಿಂದ ಪ್ರತಿದಿನ ಸಂಜೆ ದುರ್ಗಾದೇವಿಗೆ ಕ್ರಮವಾಗಿ ಹರಿದ್ರಾ ಕುಂಕುಮಾಲಂಕಾರ, ಗಜಲಕ್ಷ್ಮೀ ಅಲಂಕಾರ, ಹಿಮಾ ಪಾರ್ವತಿ, ಶಾಖಾಂಬರಿ ಅಲಂಕಾರ, ಬಳೆ ಅಲಂಕಾರ, ಸ್ವರ್ಣಗೌರಿ ,ಹಂಸವಾಹಿನಿ ಸರಸ್ವತಿ ಅಲಂಕಾರ, ವನದುರ್ಗಿ ಅಲಂಕಾರ ,ಕಾಳರಾತ್ರಿ ಹಾಗೂ ವಿಜಯದಶಮಿಯಂದು ಸರ್ವಾಲಂಕೃತ ದುರ್ಗಿ ಅಲಂಕಾರ ಮಾಡಲಾಗುವುದು.
ಬನಶಂಕರಿ ದೇವಾಲಯದಲ್ಲಿ ಅ.೧ರಿಂದ ಕ್ರಮವಾಗಿ ಪ್ರತಿದಿನ ಸಂಜೆ ಬನಶಂಕರಿ ದೇವಿಗೆ ಕ್ರಮವಾಗಿ ಹರಿದ್ರಾ ಕುಂಕುಮಾಲಂಕಾರ,ಬ್ರಹ್ಮಚಾರಿಣಿ, ಗಜಲಕ್ಶ್ಮೀ ಅಲಂಕಾರ, ಕಾತ್ಯಾಯಿನಿ, ಸ್ಕಂದಮಾತಾ,ಮಹಾಗೌರಿ,ಹಂಸವಾಹಿನಿ ಸರಸ್ವತಿ,ಗಂಧದ ಅಲಂಕಾರ,ವನದುರ್ಗಿ,ಶಾಖಾಂಬರಿ ಅಲಂಕಾರ,ವನದುರ್ಗಿ ಅಲಂಕಾರ ,ಕಾಳರಾತ್ರಿ ಹಾಗೂ ವಿಜಯದಶಮಿಯಂದು ಸರ್ವಾಲಂಕೃತ ಬನಶಂಕರಿ ಅಲಂಕಾರ ಮಾಡಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಲಂಕೃತ ಅಮ್ಮನವರ ದರ್ಶನ ಪಡೆಯಬೇಕಾಗಿ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ