ಹುಳಿಯಾರು:ಭಾರತ ಸರ್ಕಾರದ ಕೇಂದ್ರೀಯ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆ ಅನುಸಂಧಾನ ಪರಿಷತ್ ಮತ್ತು ರಾಜಯೋಗ ಎಜುಕೇಷನ್ ಅಂಡ್ ರಿಸರ್ಚ್ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಯೋಗ ಮತ್ತು ಮಧುಮೇಹದ ಬಗ್ಗೆ ಒಂದು ದಿನದ ಜಾಗೃತಿ ಶಿಬಿರವನ್ನು ಹುಳಿಯಾರಿನ ಬ್ರಹ್ಮ ಕುಮಾರಿಸ್ ಸಭಾಂಗಣದಲ್ಲಿ ಅ.2ರ ಭಾನುವಾರದಂದು ಬೆ.9 ರಿಂದ ಮ.2ರವರೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ವಿಶೇಷ ತಜ್ಞರಿಂದ ಮಧುಮೇಹದ ಕಾರಣ,ನಿವಾರಣೆ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ-2016ರ ಅಡಿಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ ಪ್ರವೇಶ ಉಚಿತವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ