ಪ್ರಭಾವಿಗಳ ಒಂದಿಂಚೂ ಒತ್ತೂವರಿ ಭೂಮಿ ವಶಪಡಿಸಿಕೊಡ ನಿದರ್ಶನವಿಲ್ಲ
--------------------------
ಸುದ್ದಿ ಲೇಖಕರು :ಹೆಚ್.ಬಿ.ಕಿರಣ್ ಕುಮಾರ್
ಹುಳಿಯಾರು: ಸರ್ಕಾರಿ ಜಮೀನನ್ನು ಆಕ್ರಮವಾಗಿ ಒತ್ತುವರಿ ಮಾಡಿರುವವರ ವಿರುದ್ದ ಕ್ರಿಮಿನಲ್ ಕೇಸ್ ಹಾಕುವುದಾಗಿ ಮಾದ್ಯಮದಲ್ಲಿ ಬಹು ದೂಡ್ಡ ಪ್ರಚಾರವನ್ನು ತಿಪಟೂರು ಎ.ಸಿ.ಹಾಗೂ ಚಿ.ನಾ.ಹಳ್ಳಿ ತಹಶಿಲ್ದಾರ್ ಪ್ರಚಾರ ಪಡಿಸುತ್ತಿದ್ದಾರೆ. ಆದರೆ ಇವರಿಬ್ಬರ ಅಸಲಿ ಬಣ್ಣವೇ ಬೇರೆಯಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಕೆಂಕೆರೆ ಹೊನ್ನಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ.
ಹುಳಿಯಾರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ ಹುಳಿಯಾರು ಹೋಬಳಿ ಗೌಡಗೆರೆ ಗ್ರಾಮದ ಸರ್ವೆ ನಂ ೨೦ ರಲ್ಲಿ ೧೨ ಎಕರೆ ೧೩ ಗುಂಟೆ ಗೋಮಾಳವಿದ್ದು ಇಷ್ಟು ಜಮೀನು ಸಹ ಅಕ್ರಮವಾಗಿ ಒತ್ತುವರಿಯಾಗಿದೆ. ಈ ವಿಷಯ ತಿಳಿದಿದ್ದರೂ ಸಹ ಯಾರೂಬ್ಬರ ಮೇಲು ಕ್ರಿಮಿನಲ್ ಕೇಸ್ ಹಾಕುವುದಿರಲಿ ತೆರವುಗೂಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಸರ್ಕಾರಿ ಜಾಗದಲ್ಲಿ ಕೆಲ ಪ್ರಭಾವಿಗಳು ಇಟ್ಟಿಗೆ ಕಾರ್ಖಾಗಳನ್ನು ಅಕ್ರಮವಾಗಿ ನೆಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೂಳ್ಳುವಂತೆ ಕರಡಿ ಬರಪಾಳ್ಯದ ಜನರು ೧-೪-೨೦೧೬ ರಲ್ಲಿ ಎ.ಸಿ.ಕಚೇರಿಗೆ ಖುದ್ದು ಭೇಟಿ ನೀಡಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಂತರ ಪದೇ ಪದೇ ಹುಳಿಯಾರಿಗೆ ಎ.ಸಿ ಯವರು ಆಗಮಿಸಿದಾಗ ಭಾರೀ ಒತ್ತಡ ತಂದರೂ ಸಹ ಕರಡಿಸಾಬರಪಾಳ್ಯದ ಜನರಿಗೆ ಕಣ್ಣು ಒರೆಸುವ ತಂತ್ರವಾಗಿ ಕೇವಲ ನೋಟಿಸ್ ನೀಡಿದ್ದಾರೆ ಎಂದು ವಿವರಿಸಿದರು.
ಈ ವಿಚಾರ ಪತ್ರಿಕೆಯಲ್ಲಿ ಪ್ರಕಟಗೂಂಡ ನಂತರ ಮೇಲಾಧಿಕಾರಿಗಳಿಗೆ ತೆರವುಗೋಳಿಸುವುದಾಗಿ ಸುಳ್ಳು ವರದಿ ಸಲ್ಲಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಆದರೆ ಈಗಲೂ ಕೂಡ ಆಕ್ರಮವಾಗಿ ಇಟ್ಟಿಗೆ ಕಾರ್ಖಾನೆಗಳನ್ನು ನೆಡೆಯುತ್ತಿದೆಯಲ್ಲದೆ ಜಮೀನಿಗೆ ತಂತಿಬೇಲಿಯನ್ನು ಕೂಡ ಉದ್ಯಮಿಗಳು ಹಾಕಿಸಿಕೂಂಡಿದ್ದಾರೆ. ಇದೆಲ್ಲಾ ಗಮಿನಿಸಿದರೆ ಆಕ್ರಮ ಒತ್ತುವರಿದಾರರ ವಿರುದ್ದ ಕ್ರಮ ಕೈಗೊಳ್ಳುವ ನೈತಿಕ ದೈರ್ಯ ಇವರಿಬ್ಬರಿಗೆ ಇಲ್ಲಾ ಪತ್ರಿಕೆಗಳಲ್ಲಿ ಹೇಳಿಕೆ ಕೂಟ್ಟು ಪೇಪರ್ ಟೈಗರ ಆಗಿದ್ದಾರೆ ವಿನಃ ಕಾರ್ಯರೂಪಕ್ಕೆ ತಂದ ಒಂದು ನಿದರ್ಶನವಿಲ್ಲ. ಎಂದು ಕುಹಕವಾಡಿದರು.
ಜೀವನೋಪಾಯಕ್ಕಾಗಿ ಕೃಷಿ ಮಾಡುತ್ತಿರುವ ಬಡಪಾಯಿ ರೈತರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೂಳ್ಳತ್ತಾರೆ ವಿನಃ ಪ್ರಭಾವಿಗಳು, ಹಣವಂತರ ವಿರುದ್ದ ಇವರ ಅಧಿಕಾರದ ಅಸ್ತ್ರಗಳು ಕಸದ ಬುಟ್ಟಿ ಸೇರಿವೆ. ಇನ್ನಾದರೂ ಎಸಿ ಮೇಡಂ ಹಾಗೂ ತಹಸೀಲ್ದಾರ್ ಅವರಿಗೆ ಪತ್ರಿಕೆಯಲ್ಲಿ ನೀಡಿರುವ ಹೇಳಿಕೆಗೆ ಬದ್ಧರಾಗಿರಬೇಕೆಂದರೆ ಮೊದಲು ಗೌಡಗೆರೆ ವ್ಯಾಪ್ತಿಯ ಅಕ್ರಮ ಒತ್ತುವರಿದಾರರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ