ಹುಳಿಯಾರು: ಹೋಬಳಿಯ ಬೋರನಕಣಿವೆ ಜಲಾಶಯದ ಸುತ್ತ ಮುತ್ತಲ್ಲಿನ ಅರಣ್ಯ ಪದೇಶದಲ್ಲಿ ೩ ಕಾಡಾನೆಗಳು ಬುಧವಾರ ಬೆಳಗಿನ ಜಾವ ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾಡಾನೆಗಳು ಬೆಂಗಳೂರಿನ ಬನ್ನೇರುಘಟ್ಟ ಅರಣ್ಯ ಪದೇಶದಿಂದ ತುಮಕೂರು, ಗುಬ್ಬಿ, ಚೇಳೂರು ಮಾರ್ಗವಾಗಿ ಬುಕ್ಕಾಪಟ್ಟಣ ಅರಣ್ಯ ಪ್ರದೇಶದ ಮುಖಾಂತರ ಈ ಬೋರನಕಣಿವೆ ಜಲಾಶಯಕ್ಕೆ ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯದ ಸಮೀಪದ ಅರಣ್ಯ ಪ್ರದೇಶದಲ್ಲಿ ಮುಂಜಾನೆ ಕಂಡುಬಂದ ಕಾಡಾನೆ.
ಬುಧವಾರ ಬೆಳಿಗ್ಗೆ ಬುಕ್ಕಪಟ್ಟಣ ಅರಣ್ಯ ಪ್ರದೇಶದ ವ್ಯಾಪ್ತಿಯ ಬೋರನಕಣಿವೆ ಜಲಾಶಯದ ಪಕ್ಕದ ಅರಣ್ಯದಲ್ಲಿ ತಿರುಗಾಡುತ್ತಿದ್ದ ೩ ಕಾಡಾನೆಗಳು ಮಧ್ಯಾಹ್ನ ಜಲಾಶಯದಲ್ಲಿ ವಿಹರಿಸಿ ಸಂಜೆ ಆರು ಗಂಟೆ ಸುಮಾರಿನಲ್ಲಿ ನೀರಿನಿಂದ ಹೊರಬಂದಿದೆ
ಬೋರನಕಣಿವೆ ಜಲಾಶಯದಲ್ಲಿ ಬುಧವಾರದಂದು ೩ ಕಾಡಾನೆಗಳು ವಿಹರಿಸುತ್ತಿರುವುದು. |
ಆನೆಗಳ ಆಗಮನದ ಹಿನ್ನಲೆಯಲ್ಲಿ ರೈತಾಪಿ ವರ್ಗದವರು ಹೊಲಗದ್ದೆಗಳಿಗೆ ಹೋಗಲು ಹಾಗೂ ಗ್ರಾಮಸ್ಥರು ಓಡಾಡಲು ಭಯಭೀತರಾಗಿದ್ದಾರೆ.
ಬುಕ್ಕಪಟ್ಟಣ ವಲಯದ ಅರಣ್ಯಾಧಿಕಾರಿಗಳ ತಂಡ ಆನೆಗಳನ್ನು ಓಡಿಸಲು ಕಾರ್ಯಪ್ರವೃತ್ತರಾಗಿದ್ದು ಮುಂಜಾಗ್ರತ ಕ್ರಮವಾಗಿ ಇಲ್ಲಿನ ನಿವಾಸಿಗಳಿಗೆ ಎಚ್ಚರದಿಂದ ತಿರುಗಾಡುವಂತೆ ತಿಳಿಸಿದ್ದಾರೆ.
ಆನೆಗಳನ್ನು ಹಿಂದಿರುಗಿಸಲು ಆಗಮಿಸಿರುವ ಅರಣ್ಯ ಇಲಾಖೆಯ ಪಡೆಯಲ್ಲಿ ಬುಕ್ಕಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ, ಉಪವಲಯ ಅರಣ್ಯಾಧಿಕಾರಿ ಬಸವರಾಜು, ಸಿಬ್ಬಂದಿಗಳಾದ ಶೇಖರ್, ಪುನಿತ್, ನಾಗರಾಜು ಕಾರ್ಯಪ್ರವೃತ್ತರಾಗಿದ್ದು ಜಲಾಶಯದಲ್ಲಿಂದ ಹೊರಬಂದಿರುವ ಕಾಡಾನೆಯನ್ನು ಸಂಜೆಯ ಕತ್ತಲಲ್ಲಿ ವಾಪಸ್ ಹಿಂದಿರುಗಿಸಲು ಮುಂದಾಗಿದ್ದಾರೆ.
ಹುಳಿಯಾರು ಪಿಎಸೈ ಪ್ರವೀಣ್‌ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದು ಅರಣ್ಯಾಧಿಕಾರಿಗಳ ಕಾರ್ಯಚಾರಣೆಯಲ್ಲಿ ಕೈಜೋಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ