ಹುಳಿಯಾರು:ದುರ್ಗಾಷ್ಟಮಿಯ ಪ್ರಯುಕ್ತ ಭಾನುವಾರದಂದು ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮ ,ದುರ್ಗಾಪರಮೇಶ್ವರಿ, ಬನಶಂಕರಿ ಹಾಗೂ ಕಾಳಿಕಾಂಭ ಅಮ್ಮನವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆ ನಡೆಯಿತು.ನವರಾತ್ರಿ ಆಚರಣೆಯಲ್ಲಿ ಶಕ್ತಿ ಮಾತೆ ದುರ್ಗಿ ರಾಕ್ಷಸ ಸಂಹಾರ ಮಾಡಿ ದುರ್ಗಾ ಪರಮೇಶ್ವರಿಯಾಗಿ ನೆಲೆಸಿದ ದಿನವಾಗಿ ದುರ್ಗಾಷ್ಟಮಿಗೆ ವಿಶೇಷ ಮಹತ್ವವಿದ್ದು ಶಕ್ತಿಯು ಹಲವು ಅವತಾರದಲ್ಲಿ ದುಷ್ಟ ಸಂಹಾರ ಮಾಡಿದ್ದಾಳೆ ಎನ್ನುವುದು ಭಕ್ತರ ನಂಬಿಕೆ.ಪ್ರಯುಕ್ತ ಇಂದು ಎಲ್ಲಾ ಅಮ್ಮನವರ ದೇವಾಲಯದಲ್ಲೂ ದುರ್ಗಿಯನ್ನು ಹಲವು ರೂಪಗಳಲ್ಲಿ ಪೂಜಿಸಿದರು.
ಹುಳಿಯಾರಮ್ಮನವರು. |
ಮುಂಜಾನೆ ಅಮ್ಮನವರಿಗೆ ಅಭಿಷೇಕ,ಕುಂಕುಮಾರ್ಚನೆ,ನವಗ್ರಹ ಪೂಜೆ,ಸಹಸ್ರನಾಮಾರ್ಚನೆ ನಡೆಯಿತು.ಹುಳಿಯಾರಮ್ಮನವರಿಗೆ ಎಲೆ ಅಲಂಕಾರ ಮಾಡಿದರೆ,ದುರ್ಗಮ್ಮನವರಿಗೆ ನವ ದುರ್ಗಿ ಅಲಂಕಾರ ಮಾಡಲಾಗಿತ್ತು.ಬನಶಂಕರಿ ಅಮ್ಮನವರಿಗೆ ವನದುರ್ಗಿ ಅಲಂಕಾರ ಮಾಡಲಾಗಿತ್ತು.ಸಂಜೆ ಎಲ್ಲಾ ದೇವಾಲಯಗಳಲ್ಲೂ ದುರ್ಗಾಪಾರಾಯಣ,ಮಹಾಮಂಗಳಾರತಿ ನಡೆದು ಪ್ರಸಾದ ವಿನಿಯೋಗ ಮಾಡಲಾಯಿತು.
ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರಿಗೆ ನವರಾತ್ರಿ ಪ್ರಯುಕ್ತ ನವದುರ್ಗಿ ಅಲಂಕಾರ ಮಾಡಿರುವುದು. |
ಎಲ್ಲಾದೇವಾಲಯಗಳಲ್ಲೂ ಅಮ್ಮನವರಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ನೋಡಲು .ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ