ಹುಳಿಯಾರು:ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದಲ್ಲಿ ಕಂಡುಬಂದಿದ್ದ ಕಾಡಾನೆಗಳು ಬುಧವಾರ ರಾತ್ರಿ ಅಲ್ಲಿಂದ ತೆರಳಿ ಕಂದಿಕೆರೆ ಹೋಬಳಿಯ ಗಂಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗಿಜಾವ ಕಾಣಿಸಿಕೊಂಡಿದೆ.
ಕಳೆದ ಬುಧವಾರದಂದು ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ಆನೆಗಳು ನಂತರ ಬೋರನಕಣಿವೆ ಜಲಾಶಯದಲ್ಲಿ ಸಂಜೆಯವರೆಗೂ ಇದ್ದ ಆನೆಗಳು ರಾತ್ರಿ ಪುನ: ಇಲ್ಲಿನ ಅರಣ್ಯ ಪ್ರದೇಶದ ಮುಖಾಂತರ ಬಡಕೆಗುಡ್ಲು, ಮೈಲ್‌ಕಬ್ಬೆ ಮಾರ್ಗವಾಗಿ ಪ್ರಯಾಣ ಮುಂದುವರೆಸಿ ತಿಮ್ಮನಹಳ್ಳಿ ಸಮೀಪದ ಗಂಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಕಂಡುಬಂದಿದೆ.
ಆನೆಗಳ ಆಗಮನದಿಂದ ಆತಂಕಗೊಂಡಿರುವ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎಚ್ಚರದಿಂದ ತಿರುಗಾಡುವಂತ್ತೆ ಅರಣ್ಯ ಇಲಾಖೆ ಎಚ್ಚರಿಸಿದೆ.
ಬೆಂಗಳೂರಿನ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ತುಮಕೂರು, ಗುಬ್ಬಿ, ಚೇಳೂರು ಮಾರ್ಗವಾಗಿ ಬುಕ್ಕಾಪಟ್ಟಣ ಅರಣ್ಯ ಪ್ರದೇಶದ ಮುಖಾಂತರ ಗಂಟೇನಹಳ್ಲಿಗೆ ಆಗಮಿಸಿರುವ ಆನೆಗಳನ್ನು ಹಿಂದಿರುಗಿಸಲು ಬುಕ್ಕಾಪಟ್ಟಣ ವಲಯದ ಅರಣ್ಯಾಧಿಕಾರಿಗಳ ತಂಡ ಹರಸಹಸ ಪಡುತ್ತಿದ್ದಾರೆ. ಹಗಲಿನ ವೇಳೆ ವಿಶ್ರಮಿಸುತ್ತ ರಾತ್ರಿವೇಳೆ ಸಂಚರಿಸುತ್ತಿರುವ ಈ ಕಾಡಾನೆಗಳು ಬಂದ ಮಾರ್ಗದಲ್ಲಿಯೇ ವಾಪಸ್ ಹಿಂದಿರುಗಿ ಹೋಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ, ಉಪವಲಯ ಅರಣ್ಯಾಧಿಕಾರಿ ಬಸವರಾಜು, ಸಿಬ್ಬಂದಿಗಳಾದ ಶೇಖರ್, ಪುನಿತ್, ನಾಗರಾಜು ಸಿಬ್ಬಂದಿಗಳು ಆನೆಗಳನ್ನು ವಾಪಸ್ ಕಳಿಸುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ