ಹುಳಿಯಾರು:ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ಗೆ ಲಾರಿಯೊಂದು ಗುದ್ದಿ ,ಲಾರಿಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತಿರುವ ಪ್ರಕರಣ ಶನಿವಾರ ಮುಂಜಾನೆ ಸಂಭವಿಸಿದೆ.
ಹೊಸದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಮತ್ತೊಂದು ಕೆಎಸ್ಆರ್ಟಿಸಿ ಬಸ್ಸನ್ನು ಹಿಂದಿಕ್ಕಿ ಹೋಗುವ ತರಾತುರಿಯಲ್ಲಿ ದಿಢೀರೆಂದು ಟರ್ನ್ ಮಾಡಿದ್ದೆ ಹಿಂದಿನಿಂದ ಬರುತ್ತಿದ್ದ ಲಾರಿ ಗುದ್ದಿ ಅಪಘಾತ ಸಂಭವಿಸಲು ಕಾರಣ ಎನ್ನಲಾಗಿದೆ.ಲಾರಿ ಗುದ್ದಿದ ರಭಸಕ್ಕೆ ಬಸ್ ಹಿಮ್ಮುಖವಾಗಿ ಚಲಿಸಿ ನಿಂತಿತು.ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣವಾಗಿದ್ದು ಬಸ್ ಮುಂಭಾಗ ಹಾನಿಯಾಗಿದ್ದು ಪ್ರಯಾಣಿಕರಿಗೆ ಯಾವುದೇ ನೋವಾಗದಿದ್ದರು ಅಘಾತಕೊಳಗಾಗಿದ್ದರು.
ಹೆದ್ದಾರಿಯಲ್ಲೆ ಬಸ್ ನಿಲ್ಲಿಸುವುದರಿಂದ ಹಾಗೂ ಸರ್ಕಾರಿ ಡಿಪೋ ಬಸ್ಸುಗಳ ನಡುವೆಯೇ ಪೈಪೋಟಿ ಏರ್ಪಟ್ಟಿರುವುದರಿಂದ ತಮ್ಮ ಬಸ್ಸಿನಲ್ಲೆ ಪ್ರಯಾಣಿಕರು ಹತ್ತಲ್ಲಿ ಎಂದು ಅಡ್ಡಾದಿಡ್ಡಿಯಾಗಿ ಬಸ್ಸುಗಳ ನಿಲ್ಲಿಸಿ ವೇಗವಾಗಿ ಚಲಿಸುವದರಿಂದ ಪ್ರಯಾಣಿಕರು ಜೀವ ಬಿಗಿಹಿಡಿದು ಸಂಚರಿಸುವಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ