ಹುಳಿಯಾರು:ಸಮೀಪದ ಪುಣ್ಯಕ್ಷೇತ್ರವಾಗಿ ಹೆಸರಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ನೆಲಸಿರುವ ಹಂದನಕೆರೆ ಹೋಬಳಿಯ ಬರಗೇಹಳ್ಳಿ ಬೆಟ್ಟದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ೨೪ ಲಕ್ಷ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ದೇವಾಲಯ ಸಮಿತಿಯವರು ಮುಂದಾಗಿದ್ದಾರೆ.
ಈಚೆಗಷ್ಟೆ ಪರಸ್ಥಳದಿಂದ ಬರುವ ಭಕ್ತರ ಉಪಯೋಗಕ್ಕಾಗಿ ಎರಡು ಕೊಠಡಿಗಳನ್ನು ನಿರ್ಮಿಸಿ ಶೌಚಾಲಯ ವ್ಯವಸ್ಥೆ ಕೂಡ ಮಾಡಲಾಗಿದ್ದು ಸ್ನಾನದ ಗೃಹ ,ಊಟದ ಹಾಲ್ ಕೂಡ ನಿರ್ಮಿಸುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಅನುಕೂಲ ಕಲ್ಪಿಸಲಾಗಿದೆ.ಸಧ್ಯ ೨೪ ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೈಹಾಕಲಾಗಿದೆ.ಸಹೃದಯರ ಸಹಾಯ ಹಾಗೂ ಅನುದಾನದ ನಂತರವೂ ಹದಿನಾಲ್ಕು ಲಕ್ಷ ರೂಪಾಯಿಗಳು ಕೊರತೆ ಕಂಡುಬಂದಿದೆ.
ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ನ.೬ ರಂದು ಹಮ್ಮಿಕೊಳ್ಳಲಾಗಿದ್ದು ಭಕ್ತಾಧಿಗಳು ಧನ ಸಹಾಯ ಮಾಡುವುದರೊಂದಿಗೆ ಟ್ರಸ್ಟಿನ ಜೊತೆ ಕೈಜೊಡಿಸಿ ಬೃಹತ್ ಕಾರ್ಯ ನಿರ್ವಿಘ್ನವಾಗಿ ನೆರವೇರಲು ಸಹಕರಿಸಬೇಕಾಗಿ ದೇವಾಲಯ ಸಮಿತಿಯವರು ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಚಾರಿಟಬಲ್ ಟ್ರಸ್ಟ್ ನ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ