ಹುಳಿಯಾರು: ಸಾಂಸ್ಕೃತಿಕ ಕಲಾ ಶ್ರೀಮಂತಿಕೆಯ ಎದುರು ಹಣದ ಶ್ರೀಮಂತಿಕೆ ಗೌಣ ಎಂದು ಮಕ್ಕಳ ಕವಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಹುಳಿಯಾರು ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ತಂಡದಿಂದ ಆಯೋಜಿಸಿರುವ ಒಂದು ವಾರಗಳ ಕಾಲದ ಸುಗಮ ಸಂಗೀತ ಕಲಿಕಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಕವಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿದರು.
ಹುಳಿಯಾರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ತಂಡದಿಂದ ಆಯೋಜಿಸಿರುವ ಒಂದು ವಾರಗಳ ಕಾಲದ ಸುಗಮ ಸಂಗೀತಕಲಿಕಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚ್ಚಿನ ದಿನಗಳಲ್ಲಿ ತಬಲ ಹಾಗೂ ಹಾರ್ಮೋನಿಯಂ ವಾದಕರು, ರಂಗಭೂಮಿ ಕಲಾವಿದರು, ಗಾಯಕರು ಹೀಗೆ ಸಾಂಸ್ಕೃತಿಕ ಕಲೆ ಬಲ್ಲವರು ವಿರಳವಾಗುತ್ತಿದ್ದಾರೆ. ಕಲಾವಿದರ ಅಭಾವ ಎಷ್ಟಿದೆ ಎಂಬುದನ್ನು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರಿಗೆ ಮಾತ್ರ ಗೊತ್ತು. ಹಾಗಾಗಿ ಇಂದು ಹಣ ಉಳ್ಳವರು ಮಾತ್ರವೇ ಶ್ರೀಮಂತರಲ್ಲ ಕಲೆ ಬಲ್ಲವರೂ ಸಹ ಶ್ರೀಮಂತರೆ. ಈ ನಿಟ್ಟಿನಲ್ಲಿ ಸುಗಮ ಸಂಗೀತ ಕಲಿಕಾ ಶಿಬಿರದ ಮೂಲಕ ನವ ಗಾಯಕರನ್ನು ಸೃಷ್ಠಿಸುತ್ತಿರುವುದ ಸ್ವಾಗತಾರ್ಹ ಬೆಳವಣಿಗೆ ಎಂದರು.
ಸಂಗೀತದಿಂದ ಆರೋಗ್ಯ ಹಾಗೂ ಜ್ಞಾನಗಳೆರಡೂ ವೃದ್ಧಿಯಾಗುತ್ತದೆ. ಅಂದರೆ ಸಂಗೀತ ಹಾಡೋದು ಆಭ್ಯಾಸಿಸಿದರೆ ಉಸಿರಾಟದ ಉಚ್ಚಾಸ-ನಿಶ್ವಾಸ ಕ್ರಮಬದ್ದವಾಗಿ ನಡೆದು ಒಂದರ್ಥದಲ್ಲಿ ಪ್ರಾಣಾಯಾಮದ ಫಲ ದೊರೆಯುತ್ತದೆ, ಇನ್ನು ಮನಸ್ಸು ಸದಾ ಉಲ್ಲಸಾಭರಿತದಿಂದಿದ್ದು ದೈನಂದಿನ ಚಟುವಟಿಕೆ ಕ್ರಿಯಾಶೀಲದಿಂದಿರುತ್ತದೆ. ಇದರ ಜೊತೆಗೆ ಬರವಣಿಗೆ ಆರಂಭವಾಗುತ್ತದೆ. ಸಾಹಿತ್ಯದ ಅರ್ಥ ಅರಿತು ಜ್ಞಾನಿಗಳಾಗುತ್ತೇವೆ ಎಂದರು.
ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್, ಭಜನಾ ಕಲಾವಿದ ಭವಾನಿ ರಮೇಶ್‌ಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಮ್ಮ, ಸಮಾಜ ಸೇವಕರುಗಳಾಧ ತಮ್ಮಯ್ಯ, ಕೆ.ಎನ್.ಉಮೇಶ್, ನೃತ್ಯ ಕಲಾವಿದ ಯತೀಶ್ ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ