ಹುಳಿಯಾರು ಹಾಗೂ ಶೆಟ್ಟಿಕೆರೆ ಗ್ರಾಮಗಳ ಹವ್ಯಾಸಿ ಚಾರಣಿಗರು ಪ್ರಸಕ್ತ ಸಾಲಿನ ಚಾರಣವನ್ನು ದೇಶದ ಎತ್ತರದ ಜಲಪಾತವಾದ ಕುಂಚಿಕಲ್ ಜಲಪಾತಕ್ಕೆ ೩ ದಿನಗಳ ಚಾರಣ ಶಿಬಿರವನ್ನು ಇದೇ ತಿಂಗಳ ೧೪ ರಿಂದ ೧೬ ರ ವರೆವಿಗೆ ಹಮ್ಮಿಕೊಳ್ಳಲಿದೆ.
ಹುಳಿಯಾರು ಹಾಗೂ ಶೆಟ್ಟಿಕೆರೆ ಗ್ರಾಮಗಳಿಂದ ದೇಶದ ಎತ್ತರದ ಜಲಪಾತಕ್ಕೆ ಚಾರಣ ಹೊರಟಿರುವ ಹವ್ಯಾಸಿ ಚಾರಣಿಗರ ತಂಡದ ಸದಸ್ಯರು. |
ದಶಕದ ಹಿಂದೆ ನೆಹರು ಯುವ ಕೇಂದ್ರ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಏರ್ಪಡಿಸಿದ್ದ ಸಾಹಸ ಚಾರಣ ಶಿಬಿರದಿಂದ ಉತ್ತೇಜನಗೊಂಡು ಆರಂಭವಾದ ಈ ತಂಡದ ಚಾರಣ ಹವ್ಯಾಸ ಇಲ್ಲಿಯವರೆಗೆ ಬುರುಡೆಜೋಗ, ಅನಡ್ಕ, ಬಲ್ಲಾಳರಾಯನದುರ್ಗ, ಅರಿಶಿನಗುಂಡಿ, ಹಿಡ್ಲುಮನೆ, ದೇವಕಾರು, ಭಂಡಾಜೆ, ಕೊಡಚಾದ್ರಿ, ಕೂಡ್ಲುತೀರ್ಥ, ಬೆಳ್ಳಿಗುಂಡಿ ಹೀಗೆ ಅನೇಕ ಕಡೆಯ ದುರ್ಗಮ ಕಾಡಿನಲ್ಲಿ ಯಶಸ್ವಿಯಾಗಿ ಚಾರಣ ನಡೆಸಿ ಬಂದಿದೆ.
ಸರ್ಕಾರದ ಹಾಗೂ ದಾನಿಗಳ ಧನಸಹಾಯ ಪಡೆಯದೆ ತಮ್ಮ ಸ್ವಂತ ಖರ್ಚಿನಲ್ಲಿ ಚಾರಣ ಕೈಗೊಳ್ಳುತ್ತಿರುವ ಈ ತಂಡ ಈ ಭಾರಿ ವಿಶೇಷ ಎನ್ನುವಂತೆ ಕರ್ನಾಟಕ ರಾಜ್ಯದಲ್ಲಿರುವ ದೇಶದ ಎತ್ತರದ ಹಾಗೂ ಹೆಚ್ಚು ಕವಲುಗಳನ್ನು ಹೊಂದಿರುವ ಕುಂಚಿಕಲ್ ಫಾಲ್ಸ್‌ಗೆ ಚಾರಣ ನಡೆಸಲಿದೆ. ಕುಂಚಿಕಲ್ ಜಲಪಾತವು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಜೋಗ್ ಜಲಪಾತ ೮೨೯ ಅಡಿಗಳ ಎತ್ತರದಿಂದ ಧುಮುಕಿದರೆ ಇದು ೧೪೯೩ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ವಾರಾಹಿ ನದಿಯಿಂದ ಉಂಟಾಗುತ್ತದೆ. ಈ ಜಲಪಾತದ ಸ್ವಾಭಾವಿಕ ಸೌಂದರ್ಯ ಸವಿಯಲು ಚಾರಣ ನಡೆಸಲಿದೆ.
ಹುಳಿಯಾರಿನಿಂದ ಎಚ್.ಎಸ್.ಶಿವಕುಮಾರ್, ಎಚ್.ಬಿ.ಶ್ರೀನಿವಾಸಪ್ರಸಾದ್, ಕೆ.ಸಿ.ರಂಗನಾಥ್, ಎಚ್.ಡಿ.ದುರ್ಗರಾಜು, ಎಚ್.ಬಿ.ಕಿರಣ್‌ಕುಮಾರ್, ಕೆ.ಎನ್.ಉಮೇಶ್, ಎಚ್.ಎ.ಭರತ್, ಕಂಠಯ್ಯ ಹಾಗೂ ಶೆಟ್ಟಿಕೆರೆಯಿಂದ ಎಸ್.ಇ.ಪ್ರದೀಪ್‌ರಾಜ್, ಎಸ್.ಭಾರ್ಗವ್, ಚಂದ್ರಶೇಖರ್ ಅವರುಗಳು ಈ ಚಾರಣದಲ್ಲಿ ಭಾಗವಹಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ