ಹುಳಿಯಾರು: ಸಮೀಪದ ಪುರದಮಠದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಚಿ.ನಾ.ಹಳ್ಳಿ ಕಲ್ಪತೀರ್ಥ ತೆಂಗು ಉತ್ಪಾದಕರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ತೆಂಗು ಬೆಳೆ ಸಮಗ್ರ ನಿರ್ವಹಣೆ ಮತ್ತು ಅಣಬೆ ರೋಗದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಜಿಕೆವಿಕೆಯ ಪ್ರಾಧಾಪಕ ಡಾ.ವೈ.ಎನ್.ಶಿವಲಿಂಗಯ್ಯ ಮಾತನಾಡಿ ಸರಿಯಾದ ಸಮಯಕ್ಕೆ ಮಳೆಯಾಗದೆ ತೆಂಗಿಗೆ ನುಸಿರೋಗ ಸೇರಿದಂತೆ ದಿನಕ್ಕೊಂದು ರೋಗ ತಗುಲಿ ಇಳುವರಿ ಕುಂಠಿತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ೨೦೦೫ ಹಾಗೂ ೦೬ ರಲ್ಲಿ ತೆಂಗಿನ ಮರ ೮೦ ರಿಂದ ೯೦ ಕಾಯಿ ಬಿಡುತ್ತಿತ್ತು. ಇಂದು ರೋಗದ ಹಾವಳಿಗೆ ಇಪ್ಪತ್ತರಿಂದ ಮೂವತ್ತು ಕಾಯಿ ಬಿಡುತ್ತಿವೆ. ಆದರೂ ಕೂಡ ರೈತರು ರೋಗ ತಡೆಗೆ ಹೆಚ್ಚು ಗಮನ ಹರಿಸದೆ ಮೌನವಾಗುತ್ತಿರುವುದು ಹಾಗೂ ಸರಿಯಾದ ಕ್ರಮದಲ್ಲಿ ಔಷಧ ನೀಡದಿರುವುದು ರೋಗ ಉಲ್ಬಣಕ್ಕೆ ಕಾರಣವಾಗಿದೆ ಎಂದರು.
ನುಸಿ ರೋಗ ಹತೋಟಿಗೆ ಬೇವಿನ ಹಿಂಡಿ, ಕುರಿಗೊಬ್ಬರ, ಬೂದಿ, ಕೆರೆಗೋಡು ಕನಿಷ್ಟ ಎರಡು ವರ್ಷಕ್ಕೊಮ್ಮೆಯಾದರೂ ಹಾಕಬೇಕು. ತೆಂಗಿನ ಮರದ ಬುಡಕ್ಕೆ ನೀರು, ಗೊಬ್ಬರ ಹಾಕುವುದರ ಬದಲು ಮರದಿಂದ ಎರಡರಿಂದ ಮೂರು ಅಡಿ ಅಂತರದಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.
ಕೀಟಶಾಸ್ತ್ರಜ್ಞ ಡಾ.ಶ್ರೀನಿವಾಸರೆಡ್ಡಿ, ಡಾ.ಪಾಲಣ್ಣ, ಕಲ್ಪತೀರ್ಥ ತೆಂಗು ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಚನ್ನಬಸಪ್ಪ, ಉಪಾಧ್ಯಕ್ಷ ಚಿಕ್ಕಣ್ಣ, ಎಂಡಿ ಬಸವರಾಜು, ನಿರ್ದೇಶಕ ರಮೇಶ್, ಸುನೀಲ್ ಕುಮಾರ್, ರುದ್ರಪ್ಪ,ತೋಂಟಾರಾಧ್ಯ,ಕರುಣಾಕರ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ