ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಮ೦ದಿರದಲ್ಲಿ ಆ 16 ಭಾನುವಾರದಂದು ಹುಣ್ಣಿಮೆ ಅಂಗವಾಗಿ ಶ್ರೀ ಸಾಯಿ ಬಾಬಾ ರವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅರ್ಚಕರಾದ ನಂಜುಂಡರಾವ್,ಸತೀಶ್,ರವಿಕುಮಾರ್ ಬಾಬಾರವರಿಗೆ ಫಲ ಪಂಚಾಮೃತಾಭಿಷೇಕ, ಅರ್ಚನೆ ಸತ್ಯನಾರಾಯಣ ಪೂಜೆ, ಧೂಪಾರತಿ, ಮಹಾಮಂಗಳಾರತಿ ನೆರವೇರಿಸಿದರು.ಗುರು ಪೂಜಾ ನಂತರ ಮಹಾ ಪ್ರಸಾದ ಕಾರ್ಯಕ್ರಮ ನಡೆಯಿತು.
ಬಾಬಾರ ಪೂಜಾ ಕಾರ್ಯಕ್ರಮ ಡಿಡಿ ಚ೦ದನ ವಾಹಿನಿಯಲ್ಲಿ ದಿವ್ಯ ದೇಗುಲ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲು ಚಿತ್ರೀಕರಣವಾಯ್ತು.ಹೊಯ್ಸಳಕಟ್ಟೆ,ದಸೂಡಿ, ದಬ್ಬಗುಂಟೆ,ಹುಳಿಯಾರು ಭಾಗದಿಂದ ಆಗಮಿಸಿದ್ದ ಭಕ್ತರು ಸಾಯಿ ಭಜನೆ ಮಾಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದು ಪುನೀತರಾದರು.
ಹುಳಿಯಾರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕ ಬಾಬಾರ ಬಗ್ಗೆ ಪ್ರವಚನ ನೀಡಿದರು
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ