ಹುಳಿಯಾರು: ಹೋಬಳಿಯ ಹೆಚ್.ಮೇಲನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ೩ ವಾಸದ ಮನೆಗಳು ಆಹುತಿಯಾಗಿ ಲಕ್ಷಾಂತರ ರೂ ನಷ್ಟವಾಗಿರುವ ಘಟನೆ ಶುಕ್ರವಾರದಂದು ನಡೆದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಮ. ೩ರ ಸಮಯದಲ್ಲಿ ಗ್ರಾಮದ ಚಂದ್ರಯ್ಯ ಎಂಬುವರ ವಾಸದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಕ್ಷಣಾರ್ಧದಲ್ಲಿಯೇ ಪಕ್ಕದ ಕುಮಾರ ಎಂಬುವರ ವಾಸದ ಗುಡಿಸಲು ತದನಂತರ ಹತ್ತಿರದ ಲೋಕೇಶ್ ಎಂಬುವರ ಹೆಂಚಿನ ಮನೆಗೂ ಬೆಂಕಿ ಹರಡಿದೆ. ತಕ್ಷಣ ಕಾರ್ಯಪ್ರವೃತರಾದ ಗ್ರಾಮಸ್ಥರು ಬೆಂಕಿ ನಂದಿಸಲು ಮುಂದಾಗಿದ್ದಾರೆ.ಅಷ್ಟರಲ್ಲೆ ಸ್ಥಳಕ್ಕಾಗಮಿಸಿದ ಚಿಕ್ಕನಾಯಕನಹಳ್ಳಿ ಮತ್ತು ಹಿರಿಯೂರು ತಾಲ್ಲೂಕಿನ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.
ಈ ದುರ್ಘಟನೆಯಲ್ಲಿ ಚಂದ್ರಯನವರ ವಾಸದ ಗುಡಿಸಲಿನಲ್ಲಿದ್ದ ೮೫ ಸಾವಿರ ಹಣ, ೫೦ಗ್ರಾಂ ಬಂಗಾರದ ಆಭರಣ, ಬಟ್ಟೆ, ದಿನಸಿ, ಗೃಹಬಳಕೆಯ ವಸ್ತು, ರೇಷನ್ ಕಾರ್ಡ ಹಾಗೂ ಮನೆಯಲ್ಲಿ ಕಟ್ಟಿಹಕ್ಕಿದ್ದ ಹಸುವಿನ ಕರು ಭಸ್ಮವಾಗಿದೆ.ಕುಮಾರ್ ಎಂಬುವರಿಗೆ ಸೇರಿದ ವಾಸದ ಗುಡಿಸಲು, ಮನೆಯಲ್ಲಿದ್ದ ೫೦ಸಾವಿರ ಹಣ, ೪೦ ಗ್ರಾಂ ಬಂಗಾರದ ಆಭರಣ, ಕಬ್ಬಿಣದ ಬೀರು, ೧೨ ಚೀಲ ರಾಗಿ, ಅಕ್ಕಿ ದವಸ ಧಾನ್ಯ, ಬಟ್ಟೆ, ಕಾಗದ ಪತ್ರಗಳು ಸಹಾ ಭಸ್ಮವಾದರೆ ಲೋಕೇಶ್ ಗೆ ಸೇರಿದ ಹೆಂಚಿನ ಮನೆಯಲ್ಲಿದ್ದ ಬೈಕ್ ಸೇರಿದಂತೆ ದವಸ ಧಾನ್ಯ, ಕಾಗದ ಪತ್ರಗಳು ಬೆಂಕಿಗೆ ಆಹುತಿಯಾಗಿದೆ.
ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ