ಕಂಕಾಳಿ ದೇವಸ್ಥಾನದಲ್ಲಿ ಪೂರ್ವಸಿದ್ಧತಾ ಸಭೆ
-----------------------
ಹುಳಿಯಾರು:ಪಟ್ಟಣದ ಮಾತಾ ಛಾರಿಟಬಲ್ ಟ್ರಸ್ಟ್ ಕೋಡಿಪಾಳ್ಯದಲ್ಲಿ ನಿರ್ಮಿಸುತ್ತಿರುವ ಶ್ರೀ ಕಂಕಾಳಿ ಮತ್ತು ತುಳಜಾ ಭವಾನಿ ದೇವಸ್ಥಾನದ ಪ್ರಾರಂಭೋತ್ಸವಕ್ಕೆ ಭಾರತದ ಘನತೆವೆತ್ತ ರಾಷ್ಟ್ರಪತಿಗಳು ಮತ್ತಿತರೆ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಇದರ ಪೂರ್ವಸಿದ್ಧತೆಗಾಗಿ ದೇವಾಲಯದ ಆವರಣದಲ್ಲಿ ಸಾರ್ವಜನಿಕರ,ಸಂಘಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಭಾನುವಾರದಂದು ಪೂರ್ವಭಾವಿ ಸಭೆ ನಡೆಯಿತು.
ಬೆಂಗಳೂರಿನ ಉದ್ಯಮಿ ನರಸಿಂಹ ಮೂರ್ತಿ ನಾಯಕ್ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಜನಪ್ರತಿನಿಧಿಗಳು ,ಸಂಘಸಂಸ್ಥೆಗಳ ಪದಾಧಿಕಾರಿಗಳು,ದೇವಾಲಯಗಳ ಮುಖ್ಯಸ್ಥರು,ಸಮುದಾಯಗಳ ಮುಖಂಡರು, ಹುಳಿಯಾರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಚರ್ಚೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.
ಸಮಾರಂಭದ ಪ್ರಾರಂಭೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿದ್ದು ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದಿನಾಂಕ ನೀಡಿದ್ದು ಅವರು ನೀಡುವ ದಿನಾಂಕದ ಮೇರೆಗೆ ಕಾರ್ಯಕ್ರಮ ಅಂತಿಮಗೊಳ್ಳಲಿದೆ.ಉತ್ತರ ಭಾರತದಿಂದ ಐವತ್ತಕ್ಕೂ ಹೆಚ್ಚು ನಾಗಸಾಧುಗಳು ಕೂಡ ಆಗಮಿಸಲಿದ್ದಾರೆ.ಗಣ್ಯಾತಿಗಣ್ಯರು ಆಗಮಿಸಲಿರುವ ಹಿನ್ನಲೆಯಲ್ಲಿ ವಿವಿಧ ಸಮಿತಿಗಳು ಹಾಗೂ ಮೇಲ್ವಿಚಾರಣ ಸಮಿತಿಯನ್ನು ರಚಿಸಲಾಯಿತು.ವಿವಿಧ ಸಮಿತಿಗಳನ್ನು ರಚಿಸುವ ಬಗ್ಗೆ ಚರ್ಚೆ ಸಾಗಿ ನ.27ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಯಿತು.
ಪ್ರಾರಂಭೋತ್ಸವದ ನೆನಪಿಗಾಗಿ ೨೫ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದ್ದು ಒಟ್ಟು ಮೂರುದಿನಗಳ ಕಾಲ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರತಿಷ್ಟಾಪನೆ ಸಂಬಂಧ ಹೋಮಹವನಗಳು,ಅಂತರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ, ಸ್ಥಳಿಯರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು ಖ್ಯಾತ ಚಲನಚಿತ್ರ ಕಲಾವಿದರುಗಳು ಪಾಲ್ಗೊಳ್ಳಲಿದ್ದಾರೆ.
ಮುಂದಿನ ಸಭೆ ಬೆಂಗಳೂರಿನ ಸಾಮ್ರಾಟ್ ಹೋಟೆಲಿನಲ್ಲಿ ನಡೆಯಲಿದ್ದು ಸಮಾರಂಭದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು.
ಭಾನುವಾರದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್,ಜಯರಾಮ್ ನಾಯಕ್ ಹಾಗೂ ಗಣೇಶ್ ಮಾಹಿತಿ ನೀಡಿದರು. |
ಸಭೆಯಲ್ಲಿ ಮಾತಾ ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್, ತಾಪಂ ಸದಸ್ಯ ಕುಮಾರ್,ಗ್ರಾಪಂ ಉಪಾಧ್ಯಕ್ಷ ಗಣೇಶ್,ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್.ನಟರಾಜು,ಬ್ಯಾಂಕ್ ಮರುಳಯ್ಯ, ನಂಜುಂಡಪ್ಪ,ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ದಾಸಪ್ಪ,ಅನಂತಕುಮಾರ್, ಟಿ.ಆರ್.ರಂಗನಾಥ್ ಶೆಟ್ರು, ಬಡಗಿ ರಾಮಣ್ಣ.ಉಮೇಶ್ ನಾಯಕ್,ಕೆಂಕೆರೆ ಸತೀಶ್,ಎಬಿವಿಪಿ ನರೇಂದ್ರ ಬಾಬು,ವಿಜಯಣ್ಣ,ನಿಂಗಣ್ಣ ಮತ್ತಿತರರು ಸೇರಿದಂತೆ ಎಲ್ಲಾ ದೇವಾಲಯ ಸಮಿತಿಯ, ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಆನಂದ್ ಸ್ವಾಗತಿಸಿ,ಜಯರಾಮ್ ನಾಯಕ್ ನಿರೂಪಿಸಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ