ಹುಳಿಯಾರು:ಹುಳಿಯಾರು ಜನರ ಬಹುದಿನದ ಬೇಡಿಕೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತುಮಕೂರು ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಹುಳಿಯಾರು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಣ್ಣ ತಿಳಿಸಿದರು.
ಪ್ರಾ.ಆ. ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕೆಲವು ಮಾನದಂಡಗಳಿದ್ದು ಆ ಪ್ರಕಾರವಾಗಿ ಅಲ್ಲಿ ತಿಂಗಳಿಗೆ ಕನಿಷ್ಟ ೨೦ ಹೆರಿಗೆ ಪ್ರಕರಣಗಳು ದಾಖಲಾಗಬೇಕು. ನಾಲ್ಕು ಪ್ರಾ.ಆ. ಕೇಂದ್ರಗಳ ಸಮೀಪದಲ್ಲಿ ಕೇಂದ್ರ ಸ್ಥಾನವಿದ್ದು, ಅದು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯನ್ನು ಒಳಗೊಂಡಿರಬೇಕು. ಈ ಎಲ್ಲ ಮಾನದಂಡಗಳ ಅರ್ಹತೆ ಆಧಾರದ ಮೇಲೆ ಹುಳಿಯಾರು ಅಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಒಪ್ಪಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ತಾವು ಕೂಡ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದು ಶೀಘ್ರದಲ್ಲೆ ಸ್ಥಳಿಯ ಜನಪ್ರತಿನಿಧಿಗಳ ನಿಯೋಗದೊಂದಿಗೆ ಜಿಲ್ಲಾಉಸ್ತುವಾರಿ ಸಚಿವರಾದ ಜಯಚಂದ್ರ ಹಾಗೂ ಆರೊಗ್ಯ ಸಚಿವರಾದ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲಿರುವುದಾಗಿ ತಿಳಿಸಿದರು.ಸಚಿವರ ಶಿಫಾರಸು ನಂತರ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿ ಅನುಮೋದನೆ ದೊರೆಯಲಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ