ಹುಳಿಯಾರು ಸಮೀಪದ ಬರಗೀಹಳ್ಳಿಯಲ್ಲಿ ಸಿ.ಬಿ.ಎಸ್ ಗ್ರೂಪ್ ನಿಂದ ಅ.೧೩,೧೪ಮತ್ತು ೧೫ ರಂದು ಮೂರುದಿನಗಳ ಕಾಲದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ತಾಪಂ ಸದಸ್ಯ ಯತೀಶ್ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಲಿದ್ದಾರೆ.ಜಿಪಂ ಸದಸ್ಯ ಕಲ್ಲೇಶ್ ಹಾಗೂ ಚಿಕ್ಕನಾಯಕನಹಳ್ಳಿಯ ಪುರಸಭಾ ಅಧ್ಯಕ್ಷ ದಯಾನಂದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ