ಹುಳಿಯಾರು: ಪುಟ್ಟರಾಜಗವಾಯಿ ಶಿಷ್ಯರಾದ ಸುಭಾಷ್‌ಪಾಟೀಲ್ ಹಾಗೂ ವೃಂದದವರಿಂದ ಪಟ್ಟಣದಲ್ಲಿ ಒಂದು ವಾರಗಳ ಸುಗಮ ಸಂಗೀತ ಕಲಿಕಾ ಶಿಬಿರ ಸಂಘಟಿಸಿದ್ದು ಅ,9 ರಂದು ಬೆಳಿಗ್ಗೆ ೧೦ಗಂಟೆಯಿಂದ ವಾಸವಿ ಕಲ್ಯಾಣ ಮಂದಿರದಲ್ಲಿ ಕಂಠ ಪರೀಕ್ಷೆ ಏರ್ಪಡಿಸಲಾಗಿದೆ.
ಕಂಠ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಒಂದು ವಾರಗಳ ಕಾಲ ಭಕ್ತಿಗೀತೆ, ಭಾವಗೀತೆ, ದಾಸರ ಪದಗಳು, ಜನಪದ ಗೀತೆ, ದೇಶಭಕ್ತಿಗೀತೆ ಹಾಗೂ ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳನ್ನು ಹೇಳಿ ಕೊಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಯನ್ನು ಸುಭಾಷ್ ಪಾಟೀಲ್ (9900468611), ಭವಾನಿರಮೇಶ್‌ಸ್ವಾಮಿ (9008731918), ಪೂರ್ಣಮ್ಮ (8183033888), ತಮ್ಮಯ್ಯ (9972572687), ಕೆ.ಎನ್.ಉಮೇಶ್ (9141011234) ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ