ಹುಳಿಯಾರು: ತಾಲ್ಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಅಕ್ಟೋಬರ್ ೯ ರಂದು ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ತಾಲ್ಲೂಕಿನ ಭಗೀರಥ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ಹೊಸದುರ್ಗ ಭಗೀರಥಪೀಠದ ಶ್ರೀಪುರುಷೋತ್ತಮನಂದಪುರಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸುವರು. ಸಂಸದ ಮುದ್ದ ಹನುಮೇಗೌಡ ವಿದ್ಯಾನಿಧಿ ಉದ್ಘಾಟಿಸುವರು. ಬೆಂಗಳೂರು ರಾಜ್ಯ ಉಪ್ಪಾರ ಸಂಘ ಸಂಸದೀಯ ಕಾರ್ಯದರ್ಶಿ ಪುಟ್ಟರಂಗಶೆಟ್ಟಿ, ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಪುನರ್ವಸತಿ ನಿಗಮದ ಅಧ್ಯಕ್ಷ ಯು.ವೆಂಕೋಬಾ, ಜಿಪಂ ಸದಸ್ಯ ಕಲ್ಲೇಶ್, ಬಿ.ಭೀಮಪ್ಪ ಮತ್ತಿತರರು ಆಗಮಿಸುವರು.
ಚಿ.ನಾ.ಹಳ್ಳಿ ತಾಲ್ಲೋಕು ಭಗೀರಥ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಟಿ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಬೆಂಗಳೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿವೃತ್ತ ಸದಸ್ಯರಾದ ಕೆ.ಎನ್.ಲಿಂಗಪ್ಪ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಪ್ರಭಾಕರಖೇಣಿ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಜಗನ್ನಾಥ್‌ಸಾಗರ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿಉಪ್ಪಾರ್, ಚಿ.ನಾ.ಹಳ್ಳಿ ತಾಲ್ಲೋಕು ಉಪ್ಪಾರ ಸಂಘದ ಅದ್ಯಕ್ಷ ಜಿ.ಎಸ್.ಕೃಷ್ಣಮೂರ್ತಿ, ಮತ್ತಿತರರು ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ