ಹುಳಿಯಾರು ಹೋಬಳಿಯ ದಸೂಡಿಯಲ್ಲಿ ದಸರಾ ಮಹೋತ್ಸವನ್ನು ಹತ್ತುದಿನಗಳ ಕಾಲ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಗ್ರಾಮದ ಶ್ರೀ ಆಂಜನೇಯಸ್ವಾಮಿಯವರ ದೇವಾಲಯದಲ್ಲಿ ಮಹಾಲಯ ಅಮವಾಸ್ಯೆಯ ಮಾರನೆ ದಿನ ಪಾಡ್ಯದಂದು ಶ್ರೀಸ್ವಾಮಿಯವರನ್ನು ಪಟ್ಟಕ್ಕೆ ಕೂರಿಸುವ ಮೂಲಕ ದಸರಾಕ್ಕೆ ಚಾಲನೆ ನೀಡಲಾಗಿತ್ತು.
ಹುಳಿಯಾರು ಹೋಬಳಿಯ ದಸೂಡಿಯಲ್ಲಿ ದಸರಾ ಮಹೋತ್ಸವದ ಅಂಗವಾಗಿ ಹನುಮ ಸಹಿತ ಶ್ರೀರಾಮಚಂದ್ರರ ಪಟ್ಟಾಭಿಷೇಕ ನೆರವೇರಿತು. |
ಪ್ರತಿದಿನ ರಾತ್ರಿ ವಿಶೇಷ ಅಲಂಕಾರ ,ಪೂಜೆ ಹಾಗೂ ಭಜನೆ ನಡೆಯಿತು.ಅರ್ಚಕ ವಂಶಸ್ಥರಿಂದ ನಿರಂತರ ಅಷ್ಟೋತ್ತರ,ಮತ್ತು ಶ್ರೀರಾಮಾಯಣ ಗ್ರಂಥದ ಪಠನೆ ಮಾಡಲಾಯಿತು.ಕೊನೆಯ ದಿನವಾದ ವಿಜಯದಶಮಿಯಂದು ಮಧ್ಯಾಹ್ನ ೩ ಕ್ಕೆ ಅಂಬಿನ ಸೇವೆ ಮಾಡಿ,ಬನ್ನಿಪತ್ರೆಯನ್ನು ವಿತರಿಸುವ ಮೂಲಕ ಸಕಲರಿಗೂ ಶ್ರೇಯಸ್ಸನ್ನು ಕೋರಲಾಯಿತು.ರಾತ್ರಿ ಹನುಮ ಸಹಿತ ಶ್ರೀರಾಮಚಂದ್ರರ ಪಟ್ಟಾಭಿಷೇಕ ಮಾಡುವ ಮೂಲಕ ದಸರಾ ಉತ್ಸವಕ್ಕೆ ತೆರೆಯೆಳೆಯಲಾಯಿತು.ಆಗಮಿಸಿದ ಭಕ್ತಾಧಿಗಳಿಗೆ ಪಂಚಫಲ ಪ್ರಸಾದ ವಿತರಿಸಲಾಯಿತು.ಈ ಎಲ್ಲಾ ಕಾರ್ಯಗಳಲ್ಲಿ "ಶ್ರೀ ಸೇನೆ ದಸೂಡಿ"ಯ ಕಾರ್ಯಕರ್ತರು ಹಾಗೂ ಭಕ್ತಾದಿಗಳು ಪಾಲ್ಗೊಂಡು ಶ್ರೀ ದಸೂಡಿ ಹನುಮನ ಕೃಪೆಗೆ ಪಾತ್ರರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ