ಹುಳಿಯಾರು: ಪಟ್ಟಣದ ಆರ್ಯವೈಶ್ಯ ಮಂಡಲಿ ವತಿಯಿಂದ ಶ್ರೀಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ ೧ ರಿಂದ ೧೧ರ ವರೆಗೆ ದೇವಿಗೆ ಕುಂಕುಮಾರ್ಚನೆ, ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜಾಕಾರ್ಯಕ್ರಮಗಳು ಪ್ರತಿನಿತ್ಯ ಸಂಜೆ ನಡೆಯಲಿದೆ.
ಅಕ್ಟೋಬರ್ ೧ರಿಂದ ಕ್ರಮವಾಗಿ ಪ್ರತಿದಿನ ಸಂಜೆ ವಾಸವಿ ಅಮ್ಮನವರಿಗೆ ಹರಿದ್ರಾ ಕುಂಕುಮಾಲಂಕಾರ, ಶ್ರೀವೆಂಕಟೇಶ್ವರ ಸ್ವಾಮಿ ಅಲಂಕಾರ,ವಜ್ರಾಂಗಿ ಅಲಂಕಾರ,ನವರಂಗಿ,ಮಹಾಲಕ್ಷ್ಮೀ ,ವಿಭೂತಿ ಅಲಂಕಾರ,ವನದುರ್ಗ ಅಲಂಕಾರ,ಶಾರದೆ ಅಲಂಕಾರ, ದುರ್ಗಾಷ್ಠಮಿ ಅಲಂಕಾರ ಮಾಡಲಾಗುವುದು.
ಅ.೧೦ ರಂದು ಆಯುಧಪೂಜೆ, ಅ.೧೧ ರ ವಿಜಯದಶಮಿಯಂದು ಪ್ರಾಕಾರೋತ್ಸವ ಹಾಗೂ ಮಹಾಮಂಗಳಾರತಿ ಪ್ರಾಸಾದ ವಿನಿಯೋಗ ನಡೆಯಲಿದೆ.
ನಿತ್ಯ ಅಮ್ಮನವರಿಗೆ ಅಲಂಕಾರ ಹಾಗೂ ಆರ್ಯವೈಶ್ಯ ಮಹಿಳಾ ಸಂಘದಿಂದ ಭಜನೆ ನಡೆಯಲಿದೆ. ಸಮಾಜ ಬಾಂಧವರು ಬಂಧು ಮಿತ್ರರೊಂದಿಗೆ ಆಗಮಿಸಿ ದೇವಿ ದರ್ಶನ ಪಡೆದು ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂಡಳಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ