ಹುಳಿಯಾರು: ಮಿತ ಆಹಾರ ಸೇವನೆ ಹಾಗೂ ಸದಾ ಕ್ರಿಯಾಶೀಲತೆಯಿಂದಿರುವುದರಿಂದ ಆಯಸ್ಸು ಹಾಗೂ ಆರೋಗ್ಯ ಲಭಿಸಲಿದೆ ಎಂದು ಡಾ.ವೈ.ಜಿ.ಸಿದ್ದರಾಮಯ್ಯ ತಿಳಿಸಿದರು.
ಹುಳಿಯಾರಿನ ಯೋಗಿನಾರಾಯಣ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೩ ದಿನಗಳ ಧ್ಯಾನ ಕಾರ್ಯಕ್ರಮದ ಸಮಾರೋಪ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿ ಇಚ್ಚಾಶಕ್ತಿ ಹಾಗೂ ಗುರಿ ಸಾಧನೆಯ ಛಲ ಇದ್ದರೆ ಸಾಧನೆಗೆ ಬಡತನ ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ಪೇಪರ್ ಹಾಕುತ್ತಿದ್ದ ಕಲಾಂ ರಾಷ್ಟ್ರಪತಿಯಾಗಿದ್ದು, ಟೀ ಮಾರುತ್ತಿದ್ದ ಮೋದಿ ಪ್ರಧಾನಿಯಾಗಿದ್ದೇ ನಿದರ್ಶನವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಿಂದಲೇ ಭವಿಷ್ಯದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಕಾರ್ಯಾ ಸಾಧನೆಗಾಗಿ ಕಠಿಣ ಪರಿಶ್ರಮ ಹಾಕಿ. ಇದಕ್ಕಾಗಿ ಮನಸ್ಸಿನ ಏಕಾಗ್ರತೆಗೆ ಧಾನ್ಯ ಹಾಗೂ ಯೋಗದ ಮೊರೆ ಹೋಗಿ ಹಾಗೂ ಟಿವಿ, ಮೊಬೈಲ್‌ಗಳಿಂದ ದೂರವಿರಿ ಎಂದು ಸಲಹೆ ನೀಡಿದರು.
ಸಿದ್ಧಗಂಗಾ ಶ್ರೀಗಳು ೧೦೯ ವರ್ಷಗಳಾಗಿದ್ದರೂ ಕನ್ನಡಕ ಇಲ್ಲದೆ ಪತ್ರಿಕೆ ಓದುತ್ತಾರೆ, ಯಾರ ಸಹಾಯವಿಲ್ಲದೆ ನಡೆಯುತ್ತಾರೆ. ಸುದೀರ್ಘವಾಗಿ ಮಾತನಾಡು ತ್ತಾರೆ, ಜೊತೆಗೆ ಅಗಾಧವಾದ ನೆನಪಿನ ಶಕ್ತಿ ಅವರಲ್ಲಿದೆ. ಅವರು ರಾತ್ರಿ ೧೨ ಗಂಟೆಗೆ ಮಲಗಿ ಬೆಳಿಗ್ಗೆ ೩ ರ ಸುಮಾರಿಗೆ ಏಳುವುದು, ನಿಯಮಿ ತವಾಗಿ ಮಿತ ಆಹಾರ ಸೇವಿಸುವುದು ಹಾಗೂ ಸದಾ ಕ್ರಿಯಾಶೀಲತೆಯಿಂದಿ ಇರುವುದರಿಂದ ಇದು ಸಾಧ್ಯವಾಗಿದೆ ಎಂದರು.
ಪ್ರಾಚಾರ್ಯ ಸಿ.ಎನ್.ಬಸವರಾಜು, ಡಾ.ಉಮಾ , ಮೋಹನ್, ಉಪನ್ಯಾಸಕರಾದ ವಿಜಯಕುಮಾರ್, ರಮೇಶ್, ಬಸವರಾಜು, ನಫೀಜಾಖಾನಂ ಇದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ