ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರದ ಶ್ರೀತೀರ್ಥಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯದ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ ಮತ್ತು 108 ಕುಂಬಾಭಿಷೇಕ ಮಹೋತ್ಸವ ನ. 6ರಿಂದ 7 ರವರೆಗೆ ನಡೆಯಲಿದೆ.
6ರಂದು ಸಂಜೆ ಗೋಧೋಳಿ ಲಗ್ನದಲ್ಲಿ ಧ್ವಜಾರೋಹಣ, ಗಂಗಾ ಪೂಜೆ, 108 ಕುಂಭಾಪೂಜೆ, ಗಣಪತಿಪೂಜೆ, ರುದ್ರಪೂಜೆ ಕಾರ್ಯಕ್ರಮಗಳು ಶ್ರೀಕ್ಷೇತ್ರ ವಜ್ರದಿಂದ ಆರಂಭವಾಗಲಿದೆ.
7ರಂದು ಬೆಳಗಿನಜಾವ 4 ರಿಂದ 5 ಗಂಟೆಗೆ ಸಲ್ಲುವ ಬ್ರಾಹ್ಮಿ ಲಗ್ನದಲ್ಲಿ ಪೂಜಾ ಆಲಯ ಪ್ರವೇಶ, ಮಹಾಗಣಪತಿ ಪೂಜೆ, ಸ್ವಾಸ್ತು ಪೂಜೆ, ಮಂಡಲಕಳಸ ಸೇರಿದಂತೆ ನೂತನ ವಿಗ್ರಹಗಳಿಗೆ ಕ್ಷೀರದಿವಾಸ, ಜಲಧಿವಾಸ ಸೇರಿದಂತೆ ನಾನಾ ಪೂಜಾಧಿ ಕಾರ್ಯಗಳು ನಡೆಯಲಿವೆ.
ತಮ್ಮಡಿಹಳ್ಳಿಯ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರಸ್ವಾಮಿಜಿಯ ಅಮೃತ ಹಸ್ತದಿಂದ ವಿಗ್ರಹ ಪ್ರತಿಷ್ಠಪನೆ, ಪ್ರಾಣ ಪ್ರತಿಪ್ಠಾಪನೆ, ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ, ರುದ್ರಾಭಿಷೇಕ ನಡೆಯಲಿದೆ. 8ಗಂಟೆಗೆ ನವಗ್ರಹ ಮೃತ್ಯುಂಜಯ ಹೋಮ ರುದ್ರಹೋಮ ಪೂರ್ಣಾಹುತಿ ನಂತರ ಮಹಾಮಂಗಳಾರತಿ ನಡೆಯಲಿದೆ.
ಪೂಜಾ ಕಾರ್ಯಕ್ರಮದಲ್ಲಿ ಕೆರೆಗೋಡಿ ರಂಗಾಪುರದ ಗುರುಪರ ದೇಶಿಕೇಂದ್ರಸ್ವಾಮೀಜಿ, ತಮ್ಮಡಿಹಳ್ಳೀ ಡಾ.ಶ್ರೀ.ಅಭಿನವ ಮಲ್ಲಿಕಾರ್ಜುನಸ್ವಾಮೀಜಿ, ಗೋಡೆಕೆರೆಯ ಸಿದ್ದರಾಮೇಶ್ವರ ದೇಶೀಕೇಂದ್ರಸ್ವಾಮೀಜಿ ಹಾಗೂ ಮೃತ್ಯುಂಜಯ ದೇಶೀಕೇಂದ್ರಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿಯ ಶಿವಪ್ರಕಾಶ ಶಿವಾಚಾರ್ಯಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸುವರು. ಬೆಲಗೂರಿನ ಬಿಂದುಮಾದವ ಶರ್ಮಸ್ವಾಮೀಜಿ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆರವರು ಪಾಲ್ಗೊಳ್ಳಲಿದ್ದಾರೆ.
11ಗಂಟೆಗೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್‍ಬಾಬು ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್‍ಕುಮಾರ್, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಮತ್ತಿತರರು ಭಾಗವಹಿಸಲಿದ್ದಾರೆ.
ತೀರ್ಥಲಿಂಗೇಶ್ವರ ದೇವಾಲಯಕ್ಕೆ 500 ವರ್ಷಗಳ ಇತಿಹಾಸವಿದ್ದು ದೇವಾಲಯವನ್ನು ಹಾಗಲವಾಡಿ ಪಾಳೆಗಾರ ಮುದ್ದಿಯಪ್ಪನಾಯಕ ಕಟ್ಟಿಸಿದ್ದಾರೆ. ತೀರ್ಥರಾಮಲಿಂಗೇಶ್ವರ ದೇವಾಲಯ ಗ್ರಾಮದ ಮಧ್ಯಭಾಗದಲ್ಲಿ ದೇವಾಲಯ ಶಿಥಿಲಾವಸ್ಥೆ ಇದ್ದುದರಿಂದ ಸುತ್ತಮುತ್ತಲ ಗ್ರಾಮಸ್ಥರು ಸೇರಿ 50 ಲಕ್ಷಕ್ಕೂ ಹೆಚ್ಚು ಹಣವನ್ನು ದಾನಿಗಳಿಂದ ಸಂಗ್ರಹಿಸಿ ದೇವಾಲಯ ನಿರ್ಮಾಣ ಮಾಡಲಾಗಿದೆ. ದೇವಾಲಯದ ಮುಂಭಾಗ 16 ಅಡಿ ಎತ್ತರದ ನೂತನ ಗರಡುಕಂಬ ಸ್ಥಾಪಿಸಲಾಗಿದೆ. ತೀರ್ಥರಾಮಲಿಂಗೇಶ್ವರ ದೇವಾಲಯ ಮುಜುರಾಯಿ ಇಲಾಖೆಗೆ ಸೇರಿಲ್ಲವಾದ್ದರಿಂದ ಗ್ರಾಮಸ್ಥರೆ ದೇವಾಲಯದ ಅಭಿವೃದ್ದಿಗೆ ಶ್ರಮಿಸಿ ಭಕ್ತಾಧಿಗಳಿಂದ ದೇಣಿಗೆ ಸ್ವೀಕರಿಸಿ ದೇವಾಲಯ ನಿರ್ಮಿಸಲಾಗಿದೆ. ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಬೆಂಗಳೂರು, ಗುಬ್ಬಿ, ತುಮಕೂರು, ಚಿ.ನಾ.ಹಳ್ಳಿ, ತಿಪಟೂರಿನಲ್ಲಿ ನೆಲೆಸಿರುವ ದೇವಾಲಯದ ಭಕ್ತರು ದೇವಾಲಯಕ್ಕೆ ಧನಸಹಾಯ ಮಾಡಿದ್ದಾರೆ.
ನ. 6 ಮತ್ತು 7ರಂದು ನಡೆಯುವ ನೂತನ ದೇವಾಲಯ ಪ್ರಾರಂಭೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ದೇವಾಲಯದ ಸಮಿತಿ ಮನವಿ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ