ಹುಳಿಯಾರು: ಗಣಪತಿ ಮಹೋತ್ಸವ ಇಂದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಾಸಲುಸತೀಶ್ ಅವರು ಅಭಿಪ್ರಾಯಪಟ್ಟರು.
ಹುಳಿಯಾರು ಸಮೀಪದ ಬರಕನಹಾಲ್ ಖಾನಾನಾಯ್ಕನತಾಂಡ್ಯದಲ್ಲಿ ಏರ್ಪಡಿಸಿದ್ದ ೫೧ ನೇ ವರ್ಷದ ಗಣಪತಿ ಮಹೋತ್ಸವದಲ್ಲಿ ಕಾಂಗ್ರೆಸ್ ಮುಖಂಡ ಸಾಸಲುಸತೀಶ್ ಮಾತನಾಡಿದರು. |
ಹುಳಿಯಾರು ಸಮೀಪದ ಬರಕನಹಾಲ್ ಖಾನಾನಾಯ್ಕನತಾಂಡ್ಯದಲ್ಲಿ ಏರ್ಪಡಿಸಿದ್ದ ೫೧ ನೇ ವರ್ಷದ ಗಣಪತಿ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಲಗಂಗಾಧರನಾಥ ತಿಲಕ್ ಅವರು ಗರ್ಭಗುಡಿಯಲ್ಲಿದ್ದ ಗಣಪತಿಯನ್ನು ಬೀದಿಗೆ ತಂದಿದ್ದು ಸ್ವಾತಂತ್ರ್ಯ ಹೋರಾಟಕ್ಕೆ ಜನ ಸಂಘಟಿಸುವ ಸಲುವಾಗಿ. ಈ ನಿಟ್ಟಿನಲ್ಲಿ ಅಂದಿನ ಹೋರಾಟಗಾರರು ಯಶಸ್ವಿಯೂ ಸಹ ಆಗಿದ್ದು ಗಲ್ಲಿಗಲ್ಲಿಯಲ್ಲಿ ಯುವಕರು, ಮಹಿಳೆಯರ ಸಂಘಟನೆ ಕಟ್ಟಿ ಸ್ವಾತಂತ್ರ್ಯ ಹೋರಾಟಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟರು. ಆದರೆ ಗಣಪತಿ ಪ್ರತಿಷ್ಠಾಪನೆಯ ಮೂಲ ಉದ್ದೇಶವನ್ನೇ ಯುವ ಪೀಳಿಗೆ ಮರೆತು ಆರ್ಕೇಸ್ಟ್ರಾ, ಡಿಜೆ ಹಾಕಿ ಕುಣಿದು ಕುಪ್ಪಳಿಸಲು ಮಾತ್ರ ಸೀಮಿತಗೊಳಿಸಿದ್ದಾರೆ ಎಂದರು.
ಗಣಪತಿ ಮಹೋತ್ಸವದ ನೆಪದಲ್ಲಿ ಈಗಲೂ ಹಳ್ಳಿಹಳ್ಳಿಗಳಲ್ಲಿ ಯುವ ಪಡೆ ಒಗ್ಗಟ್ಟಾಗುತ್ತದೆ. ಕಷ್ಟಪಟ್ಟು ದುಡಿದ ಹಣ, ಅಮೂಲ್ಯವಾದ ಸಮಯವನ್ನು ಕೇವಲ ಮನರಂಜನೆಯೊಂದಕ್ಕೆ ವ್ಯರ್ಥ ಮಾಡುತ್ತಾರೆ. ಹಾಗಾಗಿ ಗಣಪತಿ ನೆಪದಲ್ಲಿ ಸಂಘಟಿತರಾಗುವವರು ಊರಿನ ಜ್ವಲಂತ ಸಮಸ್ಯೆ, ಕ್ಷೇತ್ರದ ಅನಾಭಿವೃದ್ಧಿ, ನಾಡು-ನುಡಿಗೆ ಧಕ್ಕೆಯಾದಾಗ ಹೊರಾಟಕ್ಕೆ ಧುಮುಕಬೇಕು. ಅಧಿಕಾರಿಗಳು, ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆ ಮೊಳಗಿಸಬೇಕು. ಒಟ್ಟಾರೆ ನಿರಂತಜವಾಗಿ ಸಮಾಜಮುಖಿ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ತಾಪಂ ಸದಸ್ಯೆ ಕಲಾವತಿ, ಗ್ರಾಪಂ ಸದಸ್ಯ ಎಚ್.ಆರ್.ವೆಂಕಟೇಶ್, ದೇವರಾಜಣ್ಣ, ಮಧು, ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ