ಹುಳಿಯಾರು: ಯೋಗ, ಧ್ಯಾನದಿಂದ ಮಧುಮೇಹವನ್ನು ಬರದಂತೆ ನೋಡಿಕೊಳ್ಳಬಹುದೇ ವಿನಹಃ ವೈಜ್ಞಾನಿಕ ಔಷಧಿಗಳಿಂದ ಬರದಂತೆ ತಡೆಗಟ್ಟುವುದು ಅಸಾಧ್ಯ ಎಂದು ಮಾಜಿ ಶಾಸಕ ಕಿರಣ್‌ಕುಮಾರ್‌ರವರು ಅಭಿಪ್ರಾಯಪಟ್ಟರು
ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಈಚೆಗೆ ಜರುಗಿದ ಯೋಗ ಮತ್ತು ಮಧುಮೇಹ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತಿನ ದಿನಗಳಲ್ಲಿ ಮಧುಮೇಹ/ಸಕ್ಕರೆ ಕಾಯಿಲೆ ಜನ ಸಾಮಾನ್ಯನನ್ನು ಅತೀಯಾಗಿ ಕಾಡುತ್ತಿದೆ. ಇದಕ್ಕೆ ಇಂಗ್ಲಿಷ್ ಔಷದಗಳಿಂದ ಪರಿಹಾರ ಕಷ್ಠ ಸಾಧ್ಯ, ಒಮ್ಮೆ ಔಷದಕ್ಕೆ ಅಂಟಿಕೊಂಡರೆ ಜೀವಿನದ ಕೊನೆಯವರೆಗೂ ಔಷದಗಳನ್ನು ತೆಗೆದುಕೊಳ್ಳುತ್ತಿರಬೇಕು .ಇದರಿಂದ ಸಂಪೂರ್ಣವಾಗಿ ಸಕ್ಕರೆ ಕಾಯಿಲೆಯನ್ನು ನಿರ್ಮೂಲನೆಯಾಗುವುದಿಲ್ಲ. ಯೋಗ ಮತ್ತು ಧ್ಯಾನದಿಂದ ಮಧುಮೇಹವನ್ನು ಹತೋಟಿಯಲ್ಲಿಟ್ಟು ನಿರ್ಮೂಲನೆ ಮಾಡಬಹುದಾಗಿದೆ.
ಹಿಂದಿನ ದಿನಗಳಲ್ಲಿ ರೈತಾಪಿ ವರ್ಗದವರು ಹೊಲ ತೋಟಗಳಿಗೆ ಹೋಗುತ್ತಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರಿಂದ ವ್ಯಾಯಮವಾಗುತಿತ್ತು. ಆದರೆ ಇಂದಿನ ದಿನಗಳಲ್ಲಿ ದೈಹಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಪಟ್ಟಣದಲ್ಲಿ ಧ್ಯಾನ ಹಾಗೂ ಯೋಗ ಕೇಂದ್ರಗಳು ಇಂತಹ ಮಧುಮೇಹಿಗಳಿಗೆ ಆರೋಗ್ಯದ ಬಗ್ಗೆ ಮತ್ತು ದೈಹಿಕವಾಗಿ ಕೆಲಸ ಮಾಡುವಂತೆ ಮಾಡುತ್ತಿವೆ ಎಂದರು.
ವೈಧ್ಯಾಧಿಕಾರಿ ಡಾ|| ಚಂದನರವರು ಮಾತನಾಡಿ ಹಿಂದಿನ ದಿನಗಳಲ್ಲಿ ಬರೀ ಶ್ರೀಮಂತರ ಕಾಯಿಲೆ ಎಂದುಕೊಂಡಿದ್ದ ಮಧುಮೇಹ ಇಂದಿನ ದಿನಗಳಲ್ಲಿ ಎಲ್ಲಾ ವರ್ಗದ ಜನರಿಗೆ ಅತೀಯಾಗಿ ಕಾಡುತ್ತಿದೆ. ಈ ಕಾಯಿಲೆಯ ಮುನ್ಸೂಚನೆಯೆಂದರೆ ಅತೀ ದಾಹ, ಹೆಚ್ಚಿನ ಹಸಿವು, ಸುಸ್ತಾಗುವಿಕೆ, ದೈಹಿಕವಾಗಿ ಸಣ್ಣದಾಗುವುದು, ದೇಹದ ಭಾಗದಲ್ಲಿ ಗಾಯಗಳಾಗಿ ಬೇಗನೆ ವಾಸಿಯಾಗದೆ ಇರುವುದು. ಈ ಕಾಯಿಲೆ ಬಂದವರು ಊಟ ಬಿಡುವುದರಿಂದ ಮಧುಮೇಹವನ್ನು ಯಾವುದೇ ಕಾರಣಕ್ಕೂ ಹತೋಟಿಯಲ್ಲಿಡಲು ಸಾಧ್ಯವಿಲ್ಲ, ಅದರ ಬದಲು ನಿಯಮಿತ ಆಹಾರ ,ಹಸಿ ತರಕಾರಿ , ಸೌತೆ ಕಾಯಿ ತಿನ್ನುವುದರಿಂದ ನಿಯಂತ್ರಣದಲ್ಲಿಡಬಹುದು. ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಮಕ್ಕಳ ಜೊತೆ ಬೆರೆತು ದಿನದ ಒಂದು ಗಂಟೆ ಕಾಲ ಕಳೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಚಾಲಕಿ ಬಿ.ಕೆ.ಗೀತಾಕ್ಕ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗೀತಾಪ್ರದೀಪ್, ಡಾ||.ಇಂದ್ರಮ್ಮ ,ಡಾ.ಸಿದ್ರಾಮಯ್ಯ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ