ಹುಳಿಯಾರು:ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಬಿಂದು ಮಾಧವ ಸದ್ಗುರುಗಳ ಶ್ರೀಕ್ಷೇತ್ರವಾದ ಹುಳಿಯಾರು ಸಮೀಪದ ಬೆಲಗೂರಿನ ಮಹಾಲಕ್ಷ್ಮೀ ಪಾದುಕಾ ಸಂಚಾರ ಪಟ್ಟಣಕ್ಕೆ ಆಗಮಿಸಿತ್ತು.
ಬೆಲಗೂರಿನಲ್ಲಿ ಡಿ.೧೦ ರಿಂದ ವೈಭವೋಪೇತವಾಗಿ ನಡೆಯಲಿರುವ ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿಯ ಮಹಾ ಬ್ರಹ್ಮ ರಥೋತ್ಸವಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಸಂಚಾರ ಆರಂಭಿಸಿರುವ ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ವಿಗ್ರಹ ಸಮೇತ ಶ್ರೀ ಮಹಾಲಕ್ಷ್ಮೀ ಪಾದುಕೆಯು ಹುಳಿಯಾರಿಗೆ ಆಗಮಿಸಿದ ಸಂದರ್ಭದಲ್ಲಿ ಶ್ರದ್ಧಾಭಕ್ತಿಯಿಂದ ಬರಮಾಡಿಕೊಳ್ಳಲಾಯಿತು..
ಭಕ್ತಾಧಿಗಳು ಶ್ರೀ ಮಹಾಲಕ್ಷ್ಮೀ ಪಾದುಕೆಯನ್ನು ತಮ್ಮ ಮನೆಗಳಿಗೆ ಕರೆದೊಯ್ದು ಭಕ್ತಿಪೂರ್ವಕ ಪೂಜೆ ಸಲ್ಲಿಸಿದರು.ಶ್ರೀಕ್ಷೇತ್ರದ ಧಾರ್ಮಿಕ ಕೈಂಕರ್ಯಕ್ಕೆ ನೆರವಾಗಲು ದೇಣಿಗೆಯ ರೂಪದಲ್ಲಿ ಉದಾರ ಧನ ಸಹಾಯ ಮಾಡಿದರು.ನೂರಾರು ಭಕ್ತರು ಪಾದುಕೆಯ ಪೂಜೆ ಮಾಡಿ ಧನ್ಯರಾದರು. ಬೆಲಗೂರಿನ ಅರ್ಚಕರಾದ ಲಕ್ಷ್ಮೀನಾರಾಯಣಭಟ್ಟ, ಬಿ.ಎಸ್.ಗುರುದತ್ತ ,ಬಸ್ಟಾಂಡ್ ಹೋಟಲ್ ಗೋಪಾಲ್, ಬಡ್ಡಿಪುಟ್ಟಣ್ಣ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ