ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಶರನ್ನವರಾತ್ರಿ ಅಂಗವಾಗಿ ಅ. ೦೧ ರಿಂದ ೧೧ ರವರೆಗೆ ಪ್ರತಿನಿತ್ಯ ಬೆಳಗ್ಗೆ ಅಭಿಷೇಕ,ಅರ್ಚನೆ ಸೇರಿದಂತೆ ಚಂಡಿಕಾಪಾರಾಯಣ, ದೇವಿಸ್ತುತಿ,ದುರ್ಗಾಪಾರಾಯಣ, ಮಹಾಮಂಗಳಾರತಿ ಹಾಗೂ ಸಂಜೆ ದೇವಿಗೆ ವಿವಿಧ ಅಲಂಕಾರ, ರಾತ್ರಿ ೭ ಗಂಟೆಗೆ ಭಜನೆ, ಅರ್ಚನೆ, ದೀಪಾರಾಧನೆ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅ.೧ರಂದು ಅಮ್ಮನವರನ್ನು ಪಟ್ಟಕ್ಕೆ ಕೂರಿಸಲಾಗುವುದು. ಅ.೨ ರಿಂದ ಪ್ರತಿದಿನ ಸಂಜೆ ದುರ್ಗಾದೇವಿಗೆ ಕ್ರಮವಾಗಿ ಹರಿದ್ರಾ ಕುಂಕುಮಾಲಂಕಾರ, ಗಜಲಕ್ಷ್ಮೀ ಅಲಂಕಾರ, ಹಿಮಾ ಪಾರ್ವತಿ, ಶಾಖಾಂಬರಿ ಅಲಂಕಾರ, ಬಳೆ ಅಲಂಕಾರ, ಸ್ವರ್ಣಗೌರಿ ,ಹಂಸವಾಹಿನಿ ಸರಸ್ವತಿ ಅಲಂಕಾರ, ವನದುರ್ಗಿ ಅಲಂಕಾರ ,ಕಾಳರಾತ್ರಿ ಹಾಗೂ ವಿಜಯದಶಮಿಯಂದು ಸರ್ವಾಲಂಕೃತ ದುರ್ಗಿ ಅಲಂಕಾರ ಮಾಡಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಲಂಕೃತ ಅಮ್ಮನವರ ದರ್ಶನ ಪಡೆಯಬೇಕಾಗಿ ದೇವಾಲಯ ಸಮಿತಿಯ ಹು.ಕೃ.ವಿಶ್ವನಾಥ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ