ಸುದ್ದಿ :ಹುಳಿಯಾರು ಕಿರಣ್ ಕುಮಾರ್
ಹುಳಿಯಾರು: ಭಗವಂತನ ನಾಮಸ್ಮರಣೆಯಿಂದ ಸಕಲವೂ ಸಿದ್ದಿಸುವುದಿದ್ದು ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎಂದು ಭಗವಂತನ ನಾಮ ಸ್ಮರಣೆಯಿಂದ ಶ್ರೀಕೃಷ್ಣನ್ನನೇ ತನ್ನತ್ತ ಕನಕದಾಸರು ತಿರುಗಿಸಿಕೊಂಡಿರುವ ನಿದರ್ಶನ ನಮ್ಮ ಮುಂದಿರುವಾಗ ವಿಕೃತ ಸಂಗೀತಕ್ಕೆ ಮಾರು ಹೋಗುವುದ ಬಿಡಿ ಎಂದು ಕಾಗಿನೆಲೆಯ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರು ಕಿವಿ ಮಾತು ಹೇಳಿದರು.
ಹುಳಿಯಾರು: ಭಗವಂತನ ನಾಮಸ್ಮರಣೆಯಿಂದ ಸಕಲವೂ ಸಿದ್ದಿಸುವುದಿದ್ದು ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎಂದು ಭಗವಂತನ ನಾಮ ಸ್ಮರಣೆಯಿಂದ ಶ್ರೀಕೃಷ್ಣನ್ನನೇ ತನ್ನತ್ತ ಕನಕದಾಸರು ತಿರುಗಿಸಿಕೊಂಡಿರುವ ನಿದರ್ಶನ ನಮ್ಮ ಮುಂದಿರುವಾಗ ವಿಕೃತ ಸಂಗೀತಕ್ಕೆ ಮಾರು ಹೋಗುವುದ ಬಿಡಿ ಎಂದು ಕಾಗಿನೆಲೆಯ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರು ಕಿವಿ ಮಾತು ಹೇಳಿದರು.
ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸೇವಾ ಛಾರಿಟಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಶ್ರೀ ತಿರುಮಲ-ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಹುಳಿಯಾರಿನ ಸಮಸ್ತ ಭಜನಾ ಮಂಡಳಿಗಳ ಸಹಕಾರದೊಂದಿಗೆ ಏರ್ಪಡಿಸಿರುವ ರಾಜ್ಯ ಮಟ್ಟದ ಆಹ್ವಾನಿತ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗಣಪತಿ, ರಾಜ್ಯೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳನ್ನು ಇಂದು ಮನಸ್ಸನ್ನು ವಿಕಾರಗೊಳಿಸುವ ಸಂಗೀತಗಳು, ನೃತ್ಯಗಳು ಆಕ್ರಮಿಸಿವೆ. ಕನಕ ಜಂಯಂತಿಯೂ ಇದರಿಂದ ಹೊರತಾಗಿಲ್ಲ. ದಾಸರ ಕೀರ್ತನೆ ಬಿಟ್ಟು ಹೊಡಿ ಹೊಡಿ ಮಗ ಹಾಡು ಹಾಕಿ ಪಾನಮತ್ತರಾಗಿ ಮುಂಜಾನೆ ೩ ರ ತನಕ ಕುಣಿದು ಕುಪ್ಪಳಿದ ನಿದರ್ಶನ ಇದೆ. ಆದರೆ ಹುಳಿಯಾರು ಗಣಪತಿ ದೇವಸ್ಥಾನದಲ್ಲಿ ವಾರಗಳ ಕಾಲ ಭಜನಾ ಸ್ಪರ್ಧೆ ಆಯೋಜಿಸಿ ಮನಸು ವಿಕಾಸವಾಗುವ, ಉಲ್ಲಾಸದಿಂದ ಕೂಡಿರುವ ಸಂಸ್ಕಾರ ಹಾಡುಗಳನ್ನು ಇಲ್ಲಿನ ಜನತೆಗೆ ಕೇಳುವ ಸೌಭಾಗ್ಯ ಕಲ್ಪಿಸಿರುವುದು ನಿಜಕ್ಕೂ ಅನುಕರಣೀಯ ಬೆಳವಣಿಗೆ ಎಂದರು.
ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ ಮಾತನಾಡಿ ಭಾರತದ ಆಧಾರ ಸ್ತಂಭ ಸಂಸ್ಕೃತಿ ಮತ್ತು ಸಂಸ್ಕಾರ. ಇದನ್ನು ಮತ್ತೊಷ್ಟು ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಭಜನಾ ಸ್ಪರ್ಧೆ ಏರ್ಪಡಿಸಿ ಜನರಲ್ಲಿ ವಾರಗಳ ಕಾಲ ಭಕ್ತಿಭಾವ ಮನೆ ಮಾಡುವಂತೆ ಮಾಡಿರುವುದು ಶ್ಲಾಘನೀಯ. ಜಗತ್ತಿನಲ್ಲಿ ಎಂತ್ತೆದಕ್ಕೂ ಪೈಪೋಟಿ ನೋಡಿದ್ದೇವೆ. ಆದರೆ ಭಗವಂತನ ನಾಮಸ್ಮರಣೆಯಲ್ಲಿ ನಾ ಮುಂದು,,ತಾಮುಂದು ಎಂದು ಒಬ್ಬರಿಗಿಂತ ಒಬ್ಬರೂ ಪೈಟೋಟಿಗೆ ಬಿದ್ದಿರುವುದು ಕಣ್ಣಿಗೆ, ಮನಸಿಗೆ ಹಬ್ಬ ನೀಡಿದೆ. ಇಂತಹ ಪುಣ್ಯ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಶ್ರೀ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಮೋಹನ್‌ಕುಮಾರ್, ಭಜನಾ ಕಲಾವಿದರಾದ ಬಿ.ಗೋಪಾಲಸ್ವಾಮಿ, ಶಾಂತಲಾ, ಲಕ್ಷ್ಮೀರಾಮಚಂದ್ರ, ಸಾವಿತ್ರಮ್ಮ, ಲಕ್ಷ್ಮೀಅನಂತರಾಮಣ್ಣ ಎಚ್.ಎಸ್.ರಮೇಶ್ ಸ್ವಾಮಿ, ಗಾಯಿತ್ರಿರಮೇಶ್, ಲಕ್ಷ್ಮೀಸುಬ್ರಹ್ಮಣ್ಯ, ಶಾಂತ, ರಾಜಕಮಲ, ಪ್ರತಿಭಾ, ರೇಖಾ, ಮಮತಗೋಪಾಲ್, ಕುಮಾರಿ ಸೌಮ್ಯ, ದೇವಸ್ಥಾನ ಸಮಿತಿಯ ಕೆ.ಎಂ.ಎಲ್ ಮೂರ್ತಿ, ಹೂವಿನ ಬಸವರಾಜು, ಜಯಲಕ್ಷ್ಮಮ್ಮ, ಗೌಡಿ, ತಮ್ಮಯ್ಯ, ವೆಂಕಟರಾಯರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ