ಹುಳಿಯಾರು: ಭಾರತ ದೇಶ ಪ್ರತಿಯೊಬ್ಬ ವ್ಯಕ್ತಿಯಲ್ಲಿಯು ಸಹಾ ಪ್ರೀತಿ, ವಿಶ್ವಾಸ, ನಂಬಿಕೆ, ಸಹೋದರತ್ವ ಭಾವನೆಯನ್ನು ಹೊಂದಿರುವ ಹೆಮ್ಮಯ ದೇಶವಾಗಿದೆ ಎಂದು ಥಿಯಸಾಫಿಕಲ್ ಸೊಸೈಟಿಯ ಅಂತರರಾಷ್ಟೀಯ ಕಾರ್ಯದರ್ಶಿ ಮಾರ್ಜಾ ಆರ್ಟಮಾ ಶ್ಲಾಘಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಆವರಣದಲ್ಲಿ ನಡೆದ ಸನ್ಮಾರ್ಗ ಥಿಯಸಾಫಿಕಲ್ ಲಾಡ್ಜಿನ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ನಿನ ೧೦೭ನೇಯ ವಾರ್ಷಿಕ ಸಮ್ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸೋದರತ್ವ -ಆಂತರಿಕ ಮತ್ತು ಬಾಹ್ಯ ದೃಷ್ಟಿಕೋನ ಎಂವ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು ಈ ದೇಶದ ಜನರಲ್ಲಿ ನಂಬಿಕೆಯ ಗುಣ, ಒಳ್ಳೆಯ ಆಲೋಚನೆ, ಸಹೋದರತ್ವ ಭಾವನೆಯು ಪ್ರತಿಯೊಬ್ಬರ ಅಂತರಂಗದಿಂದ ಬಂದಿರುವಂತಹ ಪ್ರವೃತ್ತಿಯಾಗಿದೆ ಎಂದರು. ಇಂತಹ ಭಾವನೆಯನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ವ್ಯಕ್ತಪಡಿಸುವ ಮೂಲಕ ನಮ್ಮನ್ನು ನಾವು ಗುರುತಿಸಿಕೊಂಡು ಸಹೋದರತ್ವದಿಂದ ನಡೆಯುವಂತಹ ಸರಪಳಿಯು ಹಿಂದಿನಿಂದಲೂ ಸಾಗಿಬಂದಿದೆ ಎಂದರು.
ಥಿಯಸಾಫಿಕಲ್ ಸೊಸೈಟಿಯು ಒಳ್ಳೆಯ ಭಾವನೆ, ನಂಬಿಕೆ, ಒಂದುಕ್ಷಣದ ಮೌನ, ಶಾಂತತೆ, ಕ್ರಿಯಾಶೀಲತೆ, ಬುದ್ಧಿವಂತಿಕೆ, ಧೈರ್ಯ, ಸಾಮಾಜಿಕವಾಗಿ ಏನ್ನನಾದರು ಉತ್ತಮ ಕಾರ್ಯವನ್ನು ನಡೆಸುವಂತಹ, ಪ್ರೇರಣೆ ನೀಡುವಂತಹ ಒಂದು ಉತ್ತಮ ಸೊಸೈಟಿಯಾಗಿದೆ.ಮನುಷ್ಯರಲ್ಲಿರುವ ಅನುಮಾನ, ದ್ವೇಷ, ಅಸೂಯೆಗಳನ್ನು ತೊಲಗಿಸಿ ಪ್ರತಿಯೊಬ್ಬರು ಸಹೋದರತ್ವ ಭಾವನೆಯನ್ನು ಬಲಗೊಳಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕ.ಥಿ.ಫೆ ನ ಅಧ್ಯಕ್ಷರಾದ ಸೋ.ಬಿ.ವಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೋ.ಸಿ.ಎ.ಶಿಂಧೆ,ಬೆಂಗಳೂರು ಕ.ಥಿ.ಫೆ ನ ಉಪಾಧ್ಯಕ್ಷ ದಕ್ಷಿಣಮೂರ್ತಿ, ಕಾರ್ಯದರ್ಶಿ ಪಾರ್ವತಮ್ಮ, ಎಂ.ಆರ್.ರಾಜಗೋಪಾಲ್ ಶೆಟ್ಟಿ,ಕೆ.ಎಲ್.ನಂಜುಂಡಶೆಟ್ಟಿ ,ಉಮಕಾಂತ್ ,ಗೋಪಾಲಕೃಷ್ಣ, ಮಹೇಶಾಚಾರ್, ಎಂ.ಆರ್.ಗೋಪಾಲ್,ಜಗದೀಶ್, ಭುವನೇಶ್ವರಿ, ಸತೀಶ್ ಮತ್ತಿತರರು ಸೇರಿದಂತೆ ಹುಳಿಯಾರು ಥಿಯಾಸಫಿಕಲ್ ಸೊಸೈಟಿಯ ಸೋದರ ಸೋದರಿಯರು ಪಾಲ್ಗೊಂಡಿದ್ದರು.
ಈ ವೇಳೆ ಬೆಂಗಳೂರಿನ ಡಿ.ಆರ್.ತನುಶ್ರೀ ರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ