ಹುಳಿಯಾರು:ಸಮೀಪದ ತಿರುಮಲಾಪುರದ ಪುರಾಣ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿನ ಹುಂಡಿಯನ್ನು ಕದ್ದೊಯ್ದಿರುವ ಘಟನೆ ಭಾನುವಾರ ತಡರಾತ್ರಿ ಜರುಗಿದೆ.
ಹುಣ್ಣಿಮೆ ರಾತ್ರಿಯ ಬೆಳದಿಂಗಳಿನಲ್ಲಿ ದೇವಾಲಯದ ಬಾಗಿಲ ಬೀಗ ಹೊಡೆದು ಒಳ್ಳನುಗ್ಗಿರುವ ಕಳ್ಳರು ದೇವರಿಗೆ ಕರ್ಪೂರ ಹಚ್ಚಿ ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿ ನಂತರ ಅಲ್ಲಿದ್ದ ಹುಂಡಿಯನ್ನು ಕದ್ದೊಯ್ದಿದ್ದಾರೆ.ದೇವರ ಶಿಲಾಮೂರ್ತಿಗೆ ಯಾವುದೇ ಆಭರಣ ಹಾಕಿರಲಿಲ್ಲವಾದ್ದರಿಂದ ಅಲ್ಲಿದ್ದ ಹುಂಡಿ ಮಾತ್ರ ಕಳವು ಮಾಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಹುಂಡಿ ಹಣದ ಏಣಿಕೆಯಾಗಿರಲಿಲ್ಲಾ.ಐವತ್ತು ಸಾವಿರದಷ್ಟು ಹಣ ಹುಂಡಿಯಲ್ಲಿದ್ದಿರಬಹುದೆಂದು ಅಂದಾಜಿಸಲಾಗಿದ್ದು ಬೆಳಗಿನ ಜಾವ ಪೂಜೆಗೆ ಹೋದ ಸಂದರ್ಭದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ.ದೇವಾಲಯದ ಅಧ್ಯಕ್ಷ ಟಿ.ಕೆ.ಮಂಜುನಾಥ್ ಹುಳಿಯಾರು ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಹದಿನೈದು ದಿನದಲ್ಲಿ ಹುಳಿಯಾರಿನಲ್ಲಿ ಸಂಭವಿಸಿದ ಹುಂಡಿಕಳವಿನ ಎರಡನೇ ಪ್ರಕರಣ ಇದಾಗಿದ್ದು ದೇವಾಲಯಗಳ ಆಡಳಿತ ಮಂಡಳಿಗಳು ಘಟನೆಯಿಂದ ತಲ್ಲಣಗೊಂಡಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ