ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿಕ್ಕಬಿದರೆ ಜಾತ್ರೆಯಲ್ಲಿ ಕೆಂಡ ಹಾಯುವ ಮೂಲಕ ಭಕ್ತಿಯ ಪ್ರದರ್ಶನ

ಹುಳಿಯಾರು ಸಮೀಪದ ಚಿಕ್ಕಬಿದರೆಯಲ್ಲಿ ಕರಿಯಮ್ಮನ ಜಾತ್ರಾ ಮಹೋತ್ಸವದಲ್ಲಿ ಕಳಸದೊಂದಿಗೆ ದೇವರುಗಳನ್ನು ನಡೆಮುಡಿಯಲ್ಲಿ ಕರೆತರಲಾಯಿತು. ಹುಳಿಯಾರು: ಸಮೀಪದ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಏ.೨೮ರ ಗುರುವಾರದಂದು ಧ್ವಜಾರೋಹಣ.ಕಂಕಣಧಾರಣೆ,ಮಧುವಣಗಿತ್ತಿ ಸೇವಾ ಕಾರ್ಯದೊಂದಿಗೆ ಚಾಲನೆಗೊಂಡಿದೆ.                  ಶುಕ್ರವಾರದಂದು ದೊಡ್ಡಬಿದರೆ ಕರಿಯಮ್ಮ ದೇವಿ, ಪೋಚಕಟ್ಟೆ ಕರಿಯಮ್ಮದೇವಿ ಹಾಗೂ ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಭೇಟಿ ಕಾರ್ಯ ನಡೆಯಿತು .ಸಂಜೆ ಗ್ರಾಮಸ್ಥರಿಂದ ಆರತಿ ಬಾನ ನಡೆದು ಮಡಿಲಕ್ಕಿ ಸೇವೆ ಸಲ್ಲಿಸಲಾಯಿತು..                   ಶನಿವಾರ ಬೆಳಿಗ್ಗೆ ಕೆರೆ ಕಳಸ ಸ್ಥಾಪನೆ ನಡೆದು ಗಂಗಾಪೂಜೆ ಮಾಡಲಾಯಿತು. ಕಳಸದೊಂದಿಗೆ ಎಲ್ಲಾ ದೇವರುಗಳನ್ನು ನಡೆಮುಡಿಯಲ್ಲಿ ಕರೆತರಲಾಯಿತು.ನಂತರ ಕೆಂಡಹಾಯುವ ಅಗ್ನಿಕುಂಡ ಕಾರ್ಯಕ್ರಮ ನಡೆಯಿತು.ಸೂಕ್ತ ಮುಂಜಾಗ್ರತಾ ಏರ್ಪಾಡಿನೊಂದಿಗೆ ನಡೆದ ಕೆಂಡ ಹಾಯುವ ಕಾರ್ಯಕ್ರಮದಲ್ಲಿ ಮೊದಲು ಕಳಸ ಹೊತ್ತ ಬಾಲಕಿಯೊಂದಿಗೆ ಏಳುಹಳ್ಳಿಕರಿಯಮ್ಮನವರು ,ಆ ನಂತರ ಉಳಿದ ದೇವರುಗಳು ಹಾಗೂ ಸೀಮಿತ ಸಂಖ್ಯೆಯ ಭಕ್ತಾಧಿಗಳು ಅಮ್ಮನವರ ಜೈಕಾರದೊಂದಿಗೆ ಕೆಂಡ ಹಾದು ಭಕ್ತಿ ಪ್ರದರ್ಶಿಸಿದರು. ತದನಂತರ ಘಟಪೂಜೆ ಮಾಡಿ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.                                                                    

ವೈಭವಯುತ ದುರ್ಗಮ್ಮನ ಬ್ರಹ್ಮರಥೋತ್ಸವ

ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ೪೬ನೇ ವರ್ಷ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.                           ರಥೋತ್ಸವದ ಅಂಗವಾಗಿ ಶುಕ್ರವಾರ ಮುಂಜಾನೆ ರಥಕ್ಕೆ ಪುಣ್ಯಾಹ,ದಿಗ್ಬಲಿ ಸೇರಿದಂತೆ ವಿವಿಧ ಪೂಜೆಗಳು ನಡೆಯಿತು. ನಂತರ ರಥವನ್ನು ವಿವಿಧ ಹೂ,ಹಾರ,ಬಣ್ಣಬಣ್ಣದ ಬಾವುಟದಿಂದ ಅಲಂಕರಿಸಲಾಯಿತು. ಬೆಳಿಗ್ಗೆ ೧೧ರ ವೇಳೆಗೆ ಸೋಮನ್ನೊಂದಿಗೆ ಬೀರದೇವರಗುಡಿಯಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಂಡು ಪಾನಕದ ಗಾಡಿಯನ್ನು ಸೋಮನಕುಣಿತದೊಂದಿಗೆ ಕರೆತಂದು ಸೋಮನನ್ನು ಗದ್ದುಗೆ ಮಾಡಲಾಯಿತು . ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.                    ದೇವಾಲಯದಲ್ಲಿ ದುರ್ಗಮ್ಮನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿದ ನಂತರ ಸರ್ವಾಲಂಕೃತ ದುರ್ಗಮ್ಮದೇವಿಯನ್ನು ಹುಳಿಯಾರಮ್ಮ, ತಿರುಮಲಾಪುರ ಹಾಗೂ ಹೊಸಹಳ್ಳಿಯ ಕೊಲ್ಲಾಪುರದಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ ದೇವರುಗಳೊಂದಿಗೆ ಹೊರಡಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿ,ಪಾನಕದ ಗಾಡಿಗಳಿಗೆ ಫೂಜೆಸಲ್ಲಿಸಲಾಯಿತು. ರಥದ ಬಳಿ ಆಗಮಿಸಿ ರಥಕ್ಕೆ ಪೂಜೆ ಸಲ್ಲಿಸಿ ಸಾವಿರಾರು ಭಕ್ತರ ಜೈಕಾರದೊಂದಿಗೆ ದುರ್ಗಮ್ಮದೇವಿಯನ್ನು ಸಜ್ಜುಗೊಂಡಿದ್ದ ರಥದ

ಇಂದು(ಶುಕ್ರವಾರದಂದು) ದೇವಿ ಮಹಾತ್ಮೆ ನಾಟಕ

           ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ ೪೬ನೇ ವರ್ಷದ ವೈಭವಯುತ ಜಾತ್ರಾಮಹೋತ್ಸವ ಪ್ರಯುಕ್ತ ಶ್ರೀದೇವಿ ಮಹಾತ್ಮೆ ಕೃಪಾಪೋಷಿತಾ ನಾಟಕ ಮಂಡಳಿಯವರು ೨೮ ನೇ ವರ್ಷದ ದೇವಿ ಮಹಾತ್ಮೆ ನಾಟಕವನ್ನು ಅಭಿನಯಿಸಲಿದ್ದಾರೆ.                      ಏ.೨೯ ರ ಶುಕ್ರವಾರ ರಾತ್ರಿ ೯ ಗಂಟೆಗೆ ದೇವಸ್ಥಾನದ ಮುಂಭಾಗ ದುರ್ಗಾಪರಮೇಶ್ವರಿ ಡ್ರಾಮ ಸೀನರೀಸ್ ನವರ ಭವ್ಯ ರಂಗಸಜ್ಜಿಕೆಯಲ್ಲಿ ದೇವಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ನಾಟಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಧರ್ಮದರ್ಶಿ ಶಿವಕುಮಾರ್ ಉದ್ಘಾಟಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಕಾಂಗ್ರೆಸ್ ಮುಖಂಡ ಸಾಸಲು ಸತೀಶ್,ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ , ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ಮತ್ತಿತರರು ಭಾಗವಹಿಸಲಿದ್ದಾರೆ.

ಶ್ರದ್ದಾಭಕ್ತಿಯಿಂದ ನಡೆದ ದುರ್ಗಮ್ಮನ ಕಳಸ

ಕಳಸಹೊತ್ತು ಹರಕೆ ತೀರಿಸಿದ ಕುಮಾರಿಯರು ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿಯ ಕಳಸೋತ್ಸವಕ್ಕೆ ಆಗಮಿಸಿದ್ದ ವಿವಿಧ ಗ್ರಾಮದೇವತೆಗಳು ------------------------------- ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿದೇವಿಯ ೪೬ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕಳಸ ಕಾರ್ಯಕ್ರಮದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕಳಸ ಹೊತ್ತು ಹರಕೆ ತೀರಿಸಿದರು. ಬುಧವಾರ ರಾತ್ರಿ ದೇವರುಗಳ ಕೂಡುಭೇಟಿ ನಡೆದು ದುರ್ಗಮ್ಮನವರೊಂದಿಗೆ ಹುಳಿಯಾರಮ್ಮ, ತಿರುಮಲಾಪುರ ಹಾಗೂ ಹೊಸಹಳ್ಳಿಯ ಕೊಲ್ಲಾಪುರದಮ್ಮ, ಹೊಸಹಳ್ಳಿಪಾಳ್ಯದ ಅಂತರಘಟ್ಟೆಅಮ್ಮ, ಕೆಂಚಮ್ಮ ನವರೊಂದಿಗೆ ಕೆರೆಯಲ್ಲಿನ ಬಾವಿಹತ್ತಿರ ಗದ್ದುಗೆ ಮಾಡಲಾಗಿತ್ತು. ಮುಂಜಾನೆ ಪಟ್ಟದಕಳಸ ಸ್ಥಾಪನೆ ಹಾಗೂ ಗಂಗಾಸ್ನಾನ ನಡೆಸಲಾಯಿತು.ಮಹಾಮಂಗಳಾರತಿ ನಡೆದು ಪಲ್ಲಾರ ವಿತರಿಸಿದ ನಂತರ ಸರ್ವಾಲಂಕೃತ ದುರ್ಗಮ್ಮನವರೊಂದಿಗೆ ಪಟ್ಟದಕಳಸ ಸಮೇತ ನಡೆಮುಡಿ ಪ್ರಾರಂಭಗೊಂಡಿತು. ಬೆಳಗಿನ ಜಾವದಿಂದಲೇ ಕೆರೆ ಬಾವಿ ಸಮೀಪ ಹೆಣ್ಣುಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಪಟ್ಟದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಊರಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಹಾಗೂ ಇತರೆ ಕಾರಣಗಳಿಗೆ ಹರಕೆ ಹೊತ್ತವರು ತಮ್ಮ ಹೆಣ್ಣು ಮಕ್ಕಳಿಗೆ ಕಳಸ ಹೊರಿಸುವುದು ಇಲ್ಲಿನ ಸಂಪ್ರದಾಯವಾಗಿದ್ದು ಅದರಂತೆ ಕಳಸಹೊತ್ತ ಹೆಣ್ಣುಮಕ್

ಇಂದಿನಿಂದ(ಏ.28ರ ಗುರುವಾರದಿಂದ) ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಶ್ರೀ ಕರಿಯಮ್ಮದೇವಿಯವರ ಜಾತ್ರಾಮಹೋತ್ಸವ ಆರಂಭ

ಹುಳಿಯಾರು ಸಮೀಪದ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಗ್ರಾಮದೇವತೆ ಶ್ರೀ ಕರಿಯಮ್ಮದೇವಿಯವರ ವೈಭವಯುತ ಜಾತ್ರಾಮಹೋತ್ಸವ ಏ.28ರ ಗುರುವಾರದಿಂದ ಪ್ರಾರಂಭಗೊಂಡು ಮೇ.3ರ ಮಂಗಳವಾರದವರೆಗೆ ಒಟ್ಟು ಆರು ದಿನಗಳ ಕಾಲ ಜರುಗಲಿದೆ. ಏ..28ರ ಗುರುವಾರ ಸಂಜೆ ಧ್ವಜಾರೋಹಣ ಕಂಕಣಧಾರಣೆ,ಅಂಕುರಾರ್ಪಣೆ ,ಅಮ್ಮನವರ ಮಧುವಣಗಿತ್ತಿ ಕಾರ್ಯ ಮತ್ತು ಚಿಕ್ಕಬಿದರೆ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ನಡೆಯಲಿದೆ. ಏ.29ರ ಶುಕ್ರವಾರ ದೊಡ್ಡಬಿದರೆ ಕರಿಯಮ್ಮ ದೇವಿ, ಪೋಚಕಟ್ಟೆ ಕರಿಯಮ್ಮದೇವಿ ಹಾಗೂ ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳ ಆಗಮನ.ಸಂಜೆ ಬಾನ ಹಾಗೂ ಮಡಿಲಕ್ಕಿ ಸೇವೆ. ಏ.30ರ ಶನಿವಾರ ಬೆಳಿಗ್ಗೆ ಚಿಕ್ಕಬಿದರೆ ಕೆರೆಯ ಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು.ನಂತರ ಅಗ್ನಿಕುಂಡ ಪ್ರವೇಶ,ಘಟಪೂಜೆ ಹಾಗೂ ಮಹಾಮಂಗಳಾರತಿ, ನಂತರ ಭಕ್ತಾದಿಗಳಿಂದ ಅನ್ನಸಂತರ್ಪಣೆ ನಡೆಯಲಿದೆ. ಮೇ1ರ ಭಾನುವಾರ " ಸಿಡಿ ಮಹೋತ್ಸವ " ಆರತಿ,ಪಾನಕ ಗಾಡಿ ಉತ್ಸವ. ನಂತರ ಕಲ್ಲಹಳ್ಳಿ ಗ್ರಾಮಸ್ಥರಿಂದ ಅನ್ನಸಂತರ್ಪಣೆ ನಡೆಯಲಿದೆ. ಮೇ..2ರ ಸೋಮವಾರ ಬೆಳಿಗ್ಗೆ ಅಮ್ಮನವರ ವೈಭವಯುತ " ಬ್ರಹ್ಮರಥೋತ್ಸವ "ನಡೆದು ನಂತರ ಚಿಕ್ಕಬಿದರೆ ಗ್ರಾಮಸ್ಥರಿಂದ ಹಾಗೂ ವಾಯುಪುತ್ರ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ ನಡೆಯಲಿದೆ. ತಾ.3ರ ಮಂಗಳವಾರ ಉದ್ಭವ ಶ್ರೀ ದುರ್ಗಮ್ಮನವರ ಆರತಿಬಾನ ಸೇವೆ

ತೋಟಕ್ಕೆ ಬೆಂಕಿ:೬೫ ತೆಂಗಿನ ಮರ ಆಹುತಿ

ಹುಳಿಯಾರು ಸಮೀಪದ ತೋಟಕ್ಕೆ ಬಿದ್ದ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿ ಶಾಮಕ ದಳದವರು. ಹುಳಿಯಾರು: ಆಕಸ್ಮಿಕ ಬೆಂಕಿ ಪ್ರಕರಣದಲ್ಲಿ ಪಟ್ಟಣದ ಕೇಶವಾಪುರದ ತೋಟವೊಂದಕ್ಕೆ ಬೆಂಕಿ ತಗುಲಿ ೬೫ ತೆಂಗಿನ ಮರಗಳು ಆಹುತಿಯಾದ ಘಟನೆ ಬುಧವಾರ ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ಜರುಗಿದೆ.                    ತೋಟದ ಮಾಲಿಕ ಎಮ್ಮೆಸೀನಪ್ಪನವರ ಮಗ ಪ್ರಶಾಂತ್ ಹಾಗೂ ಅಕ್ಕಪಕ್ಕದ ತೋಟದವರು ಕೂಡಲೆ ನೀರು ಹಾಯಿಸಿ ಬೆಂಕಿ ನಂದಿಸಲು ಮುಂದಾದರು.ಅಲ್ಲದೆ ಅಗ್ನಿ ಶಾಮಕದಳದವರೂ ಕೂಡ ವಿಳಂಬವಿಲ್ಲದೆ ಆಗಮಿಸಿದ್ದರಿಂದ ಬೆಂಕಿ ಹತೋಟಿಗೆ ಬಂದು ಹೆಚ್ಚಿನ ಅನಾಹುತ ತಪ್ಪಿದಂತಾಯಿತು.ಸುಮಾರು ಅರವತೈದು ಫಲಭರಿತ ತೆಂಗಿನಮರ ಹಾಗೂ ನೀರಿನ ಪೈಪ್,ಕೇಬಲ್ ಗಳು ಸುಟ್ಟು ಹೋಗಿದೆ.

ಕಂಚೀಪುರದಲ್ಲಿ ಕಂಚೀವರದರಾಜ ಸ್ವಾಮಿಯವರ ರಥೋತ್ಸವ

ಗುರುವಾರ ಮುಂಜಾನೆ 1.55 ರಿಂದ 3.38ರವರೆಗೆ ಕಂಚೀಪುರದಲ್ಲಿ ಕಂಚೀವರದರಾಜ ಸ್ವಾಮಿಯವರ ರಥೋತ್ಸವ ------------------------------------------- ದುಡ್ಡಿನ ತೇರು ಎಂದೆ ಪ್ರಸಿದ್ಧಿ :ಹೊನ್ನಿನ ತೇರಿಗೆ ಕ್ಷಣಗಣನೆ ---------------------- ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಪುರಾಣಪ್ರಸಿದ್ಧ ಶ್ರೀ ಕಂಚಿ ವರದರಾಜ ಸ್ವಾಮಿಯವರ ರಥೋತ್ಸವಕ್ಕೆ ಕ್ಷಣಗಣನೆ ನಡೆದಿದ್ದು ಗುರುವಾರ ಮುಂಜಾನೆ 1.55 ರಿಂದ 3.36ರವರೆಗೆ ಸ್ವಾಮಿಯವರ ರಥೋತ್ಸವ ಅಸಂಖ್ಯಾತ ಭಕ್ತಾಧಿಗಳ ಸಮ್ಮುಖದಲ್ಲಿ ಜರುಗಲಿದೆ.ಜಾತ್ರಾ ಮಹೋತ್ಸವ ಏ19 ರಿಂದಲೇ ಪ್ರಾರಂಭವಾಗಿದ್ದು ಏ.30 ರವರೆಗೆ ನಡೆಯಲಿದ್ದು ಪ್ರಯುಕ್ತ ನಿತ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಮಿಯವರ ರಥೋತ್ಸವ ರಾಜ್ಯದಲ್ಲಿಯೇ ವಿಶಿಷ್ಟವಾಗಿದ್ದು ಹೊನ್ನುಮಳೆ ರಥೋತ್ಸವ ಎಂದು ಕರೆಯಲಾಗುತ್ತದೆ.ಇತರೆ ರಥೋತ್ಸವಕ್ಕಿಂತ ಇದು ವಿಭಿನ್ನವಾಗಿದ್ದು ಎಲ್ಲಡೆ ನಡೆಯುವ ರಥೋತ್ಸವದಲ್ಲಿ ಸಾಮಾನ್ಯವಾಗಿ ಭಕ್ತರು ರಥಕ್ಕೆ ಬಾಳೆ ಹಣ್ಣು ತೂರುವ ಮೂಲಕ ಭಕ್ತಿ ಅರ್ಪಿಸುವುದು ವಾಡಿಕೆಯಾಗಿದ್ದರೆ, ಇಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರು ದೇವರಿಗೆ ದುಡ್ಡನ್ನು ತೂರುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದು ಸಂಪ್ರದಾಯವಾಗಿದೆ. ಶ್ರೀಕಂಚೀವರದರಾಜ ಸ್ವಾಮಿಯವರಿಗೆ ಭಕ್ತರು ತಮ್ಮ ಇಷ್ಟಾನುಸಾರ ಹರಕೆ ಕಟ್ಟಿ ಕಾಸನ್ನು ತೂರಿದರೆ ಸರ್ವಕಷ್ಟಗಳು

ಅಪಘಾತ :ಸೈಕಲ್ ಸವಾರ ಸಾವು

ಹುಳಿಯಾರು:  ಪಟ್ಟಣದ ಬಿಹೆಚ್ ರಸ್ತೆಯ ಇಂಡೇನ್ ಗ್ಯಾಸ್ ಗೊಡೌನ್ ಮುಂಭಾಗ ನಡೆದ ಅಪಘಾತದಲ್ಲಿ ಸೈಕಲ್ ಸವಾರ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ೯ ರ ಸಮಯದಲ್ಲಿ ಜರುಗಿದೆ.ಮೃತನನ್ನು ಈಶ್ವರಯ್ಯ(೫೨)ಬಿನ್ ನಂಜಯ್ಯ ಎಂದು ಗುರ್ತಿಸಲಾಗಿದ್ದು ಈತ ಪಟ್ಟಣದ ದಿನಸಿಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ.ರಾತ್ರಿ ಕೆಲಸ ಮುಗಿಸಿಕೊಂಡು ತನ್ನ ಊರಾದ ಕಂಪನಹಳ್ಳಿಗೆ ಸೈಕಲ್ ಮೇಲೆ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಪೆಟ್ಟು ಬಿದ್ದು ಬೆಂಗಳೂರಿನ ನಿಮಾನ್ಸ್ ಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾನೆ.ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

ಕರಡಿಗಳ ದಾಳಿ:ತೀವ್ರ ಗಾಯಗೊಂಡ ರೈತ

ಹುಳಿಯಾರು: ಬಹಿರ್ದೆಸೆಗೆಂದು ಕಟ್ಟೆಯ ಬಳಿ ಹೋಗಿದ್ದ ರೈತನ ಮೇಲೆ ಮರಿಯೊಂದಿಗಿದ್ದ ತಾಯಿ ಕರಡಿ ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಹುಳಿಯಾರು ಸಮೀಪದ ನಂದಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.                    ಗಾಯಾಳುವನ್ನು ನಂದಿಹಳ್ಳಿಯ ವಾಸಿ ರೈತ ಬಸವರಾಜು (೩೫) ಎನ್ನಲಾಗಿದ್ದು ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮುಂಜಾನೆ ಎಂದಿನಂತೆ ಬಹಿರ್ದೇಸೆಗೆ ತೆರಳಿದ್ದಾಗ ೨ ಮರಿ ಕರಡಿಗಳ ಜೊತೆಯಲ್ಲಿದ್ದ ತಾಯಿ ಕರಡಿ ಈತನ ಮೇಲೆ ಎರಗಿದ್ದು ದಾಳಿಯಿಂದ ಎಡಭಾಗದ ಸೊಂಟ ಮತ್ತು ಎಡಗೈಗೆ ಸಾಕಷ್ಟು ಗಾಯಗಳಾಗಿದೆ.ಈತನ ಚೀರಾಟ ಕೇಳಿ ಅಕ್ಕಪಕ್ಕದ ಜಮೀನುಗಳಲ್ಲಿದ್ದ ಗ್ರಾಮಸ್ಥರು ಓಡಿಬಂದು ಕರಡಿಗಳನ್ನು ಬೆದರಿಸಿ ಬಸವರಾಜುವನ್ನು ರಕ್ಷಿಸಿದ್ದಾರೆ.ಗ್ರಾಮಸ್ಥರು ಕೂಡಲೇ ಗಾಯಾಳು ಬಸವರಾಜುವನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಮನವಿ: ನಂದಿಹಳ್ಳಿ ಗ್ರಾಮದ ಸುತ್ತಮುತ್ತಲಿನ ಕೆರೆ, ಕಟ್ಟೆಗಳಲ್ಲಿ ಬೆಳೆದು ನಿಂತಿರುವ ಪೊದೆಗಳು ಕರಡಿಯ ವಾಸಸ್ಥಾನವಾಗಿದ್ದು ರಾತ್ರಿ ವೇಳೆಯಲ್ಲಿ ಆಹಾರ ಅರಸಿ ಗ್ರಾಮಗಳತ್ತ ಬರುತ್ತಿವೆ. ಈ ಹಿಂದೆಯೂ ಅನೇಕರು ಕರಡಿ ದಾಳಿಗೀಡಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಗಮನಹರಿಸಿ ಕರಡಿ ಸಮಸ್ಯೆಯನ್ನು ನಿವಾರಿಸಬೇಕಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮುಜರಾಯಿ ಭತ್ಯೆ ದುರುಪಯೋಗ :ಆರೋಪ

(ಸುದ್ದಿ:ಚಿದಾನಂದ್,ವರದಿಗಾರರು,ಚಿನಾಹಳ್ಳಿ)                ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಂಚೆಕಟ್ಟೆ ಗ್ರಾಮದಲ್ಲಿ ದೇವಸ್ಥಾನವಾಗಲಿ, ದೇವರಾಗಲಿ ಇಲ್ಲ. ಆದರೂ ದೇವರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಪ್ರತಿ ತಿಂಗಳು ಅರ್ಚಕರ ಭತ್ಯೆಯನ್ನು ಸರ್ಕಾರದಿಂದ ಪಡೆಯುತ್ತಿದ್ದಾರೆ, ಈ ಬಗ್ಗೆ ತಹಶೀಲ್ದಾರ್‍ ಅವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಬುಳ್ಳೇನಹಳ್ಳಿ ನಂಜುಂಡಪ್ಪ ಆರೋಪಿಸಿದ್ದಾರೆ.                       ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ಹೋಬಳಿ ಮಂಚೆಕಟ್ಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವಿದೆ, ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ ಎಂದು ಭತ್ಯೆಯನ್ನು ಪಡೆಯುತ್ತಿದ್ದಾರೆ ಆದರೆ ಮಂಚೆಕಟ್ಟೆ ಜನ ವಸತಿ ಇಲ್ಲದ, ಕಂದಾಯ ಗ್ರಾಮ, ಬೇಚರ ಗ್ರಾಮವಾದ ಮಂಚೆಕಟ್ಟೆಯಲ್ಲಿ ದೇವಸ್ಥಾನವಾಗಲಿ, ಬಸವೇಶ್ವರ ದೇವರಾಗಲಿ ಇಲ್ಲ ಆದರೂ ಅರ್ಚಕರೋರ್ವರು ಪ್ರತಿ ತಿಂಗಳು ಭತ್ಯೆಯನ್ನು ಪಡೆಯುತ್ತಿದ್ದಾನೆ ಎಂದು ಆರೋಪಿಸಿರುವ ಅವರು, ಈ ರೀತಿ ಸರ್ಕಾರಕ್ಕೆ ಮೋಸ ಮಾಡಿ ಹಣ ಪಡೆಯುತ್ತಿರುವವರ ಮೇಲೆ ಸೂಕ್ತ ದಂಡ ವಿಧಿಸಿ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಬುಳ್ಳೇನಹಳ್ಳಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದಾರೆ.

ಬೆಳಗುಲಿ ದೊಡ್ಡಜಾತ್ರೆಯ ಅಗ್ನಿಕೊಂಡೊತ್ಸವ

ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಬೆಳಗುಲಿಯಲ್ಲಿ ಹದಿನೈದು ವರ್ಷಗಳ ಬಳಿಕ  ಹೊನ್ನಮರಡಿ ರಂಗನಾಥಸ್ವಾಮಿಯ ದೊಡ್ಡ ಜಾತ್ರೆ ಏ.15,ಶುಕ್ರವಾರ  ಧ್ವಜಾರೋಹಣ ದೊಂದಿಗೆ  ಆರಂಭಗೊಂದು ಏ.25ರ ಸೋಮವಾರದವರೆಗೆ ಸತತ 11 ದಿನಗಳ ಕಾಲ ನಡೆಯಿತು. ಏ.22ರಶುಕ್ರವಾರ ಬ್ರಹ್ಮ ರಥೋತ್ಸವ ನಡೆಯಿತು. ಏ.25ರಂದು ನಡೆದ ಕೆಂಡೋತ್ಸವ ನಡೆಯಿತು. 15 ವರ್ಷಗಳ ಬಳಿಕ ನಡೆದ ದೊಡ್ಡ ಜಾತ್ರೆಗೆ ಬೆಳಗುಲಿ, ಪಾಪನಕೋಣ, ಬರಗೂರು, ಹೊಸಕೆರೆ, ತಾರೀಕಟ್ಟೆ, ತಾರೀಕಟ್ಟೆ ತಾಂಡ್ಯ, ಅವಳಗೆರೆ, ಅವಳಗೆರೆ ಗೊಲ್ಲರಹಟ್ಟಿ, ಎರೆಕಟ್ಟೆ, ಅಂಕಸಂದ್ರ, ಬಂಗಾರಗೆರೆ, ರಂಗೇನಹಳ್ಳಿ, ಓಟೀಕೆರೆ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು ಅಲ್ಲದೆ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಭಾಗಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 

ಯರೇಕಟ್ಟೆ ತೀರ್ಥರಾಮಲಿಂಗೇಶ್ವರ ಬ್ರಹ್ಮರಥೋತ್ಸವ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರ-ಯರೇಕಟ್ಟೆ ವ್ಯಾಪ್ತಿಯ ಶ್ರೀ ತೀರ್ಥರಾಮಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಏ,25ರಂದು ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ತಾಲ್ಲೂಕಿನ ತೀರ್ಥಪುರ, ಕಾತ್ರಿಕೆಹಾಳ್, ದೊಡ್ಡರಾಂಪುರ, ಚಿಕ್ಕರಾಂಪುರ, ಸಿಂಗದಹಳ್ಳಿ, ಜಾಣೇಹಾರ್, ಮದನಮಡು, ಕೆಂಪರಾಯನಹಟ್ಟಿ, ಕಂದಿಕೆರೆ, ಸಾದರಹಳ್ಳಿ, ತಿಮ್ಮನಹಳ್ಳಿ, ಸಿದ್ಧನಕಟ್ಟೆ ಸೇರಿದಂತೆ ನಾನಾ ಹಳ್ಳಿಗಳು, ಸುತ್ತಮುತ್ತಲ ತಾಲ್ಲೂಕುಗಳಾದ ಗುಬ್ಬಿ, ತುರುವೇಕೆರೆ, ಶಿರಾ ಹಾಗೂ ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಹೀಗೆ ರಾಜ್ಯದ ನಾನಾ ಭಾಗಗಳಿಂದ ಭಾಗದಿಂದ ಸಾವಿರಾರು ಭಕ್ತರು ಬಂದಿದ್ದ ಭಕ್ತರು ರಥೋತ್ಸವವನ್ನು ಕಣ್ಣು ತುಂಬಿಕೊಂಡರು.

ಕುರಿಗಳ ಸಾವಿಗೆ ಅಂತ್ರಾಕ್ಸ್ ಕಾರಣವಲ್ಲ

              ಚಿಕ್ಕನಾಯಕನಹಳ್ಳಿ ತಾಲ್ಲೂಕ್ ದಸೂಡಿಯ ಬಳ್ಳಪ್ಪನಹಟ್ಟಿಯ ಸಮೀಪದ ಬಿಡಾರದಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ ದಿಢೀರ್ ಸಾವನ್ನಪ್ಪಿದ ಕುರಿಗಳಿಗೆ ಅಂತ್ರಾಕ್ಸ್ ರೋಗ ಕಾರಣವಲ್ಲ, ಬದಲಿಗೆವಿಷಪೂರಿತ ಗಿಡಗಳನ್ನು ಸೇವಿಸಿದ್ದೆ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ಪಶುರೋಗ ತನಿಖಾ ಪ್ರಯೋಗಾಲಯ ವಿಜ್ಞಾನಿಗಳು ದೃಢಪಡಿಸಿದ್ದಾರೆಂದು ಚಿಕ್ಕನಾಯಕನಹಳ್ಳಿ ಸಹಾಯಕ ನಿರ್ದೇಶಕ ಡಾ.ಬಿ.ಕೆ.ನಾಗರಾಜು ತಿಳಿಸಿದ್ದಾರೆ.                          ಈ ಮೊದಲು ಕುರಿಗಳ ಸಾವಿಗೆ ಅಂತ್ರಾಕ್ಸ್ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ ಮೇವಿನ ,ನೀರಿನ,ಕುರಿಯ ಅಂಗಾಂಗಗಳ ಸ್ಯಾಂಪಲ್ ರಿಪೋರ್ಟ್ ಹಾಗೂ ಮರಣೋತ್ತರಪರೀಕ್ಷೆಯ ವರದಿ ಆಧಾರದ ಮೇಲೆ ಕುರಿಗಳು ವಿಷಪೂರಿತ ಗಿಡಗಳನ್ನು ತಿಂದಿದ್ದರಿಂದಲೇ ಮರಣಹೊಂದಿದೆ ಎಂದರು                       ವಿವರ :ಹಿರಿಯೂರು ತಾಲ್ಲೂಕು ಬಾಲದೇವರಹಟ್ಟಿಯ ಕುಂಟಪ್ಪ ಅವರ ಬಳಿ ೨೫೦ ಕುರಿಗಳಿದ್ದು, ಇವರು ವಲಸೆ ಬಂದು ರಾಮಪ್ಪನ ಕೆರೆಗೆ ಕುರಿಗಳನ್ನು ಮೇಯಿಸಲು ಬಿಟ್ಟಿದ್ದಾರೆ. ಆಗ ಕುರಿಗಳು ಕೆರೆ ದಡದಲ್ಲಿ ಬೆಳೆದಿದ್ದ ವಿಷಪೂರಿತ ಗಿಡಗಳನ್ನು ತಿಂದಿರುತ್ತವೆ. ಪರಿಣಾಮ ಏ.೨೪ ರಂದು ೩೫ ಕುರಿಗಳು ಮರಣಹೊಂದಿರುತ್ತವೆ. ಒಟ್ಟು ೪೬ ಕುರಿಗಳು ವಿಷಪೂರಿತ ಸೇವನೆಯಿಂದ ಮರಣ ಹೊಂದಿದ್ದು, ಆಂತ್ರಾಕ್ಸ್ ರೋಗ ಇದಕ್ಕೆ ಕಾರಣವಲ್ಲ. ೪೨ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಕುರಿಗಾಹಿ ಸುರಕ್ಷಾ ಯೋಜನೆಯಡಿಯಲ್ಲಿ

ಎರಡೇ ದಿನದಲ್ಲಿ ನೂರಕ್ಕೂ ಮೀರಿ ಕುರಿಗಳ ಸಾವು :ಆತಂಕದಲ್ಲಿ ಕುರಿಗಾಹಿಗಳು

ಹುಳಿಯಾರು: ಚಿಕ್ಕನಾಯಕನಹಳ್ಳಿ ಹಾಗೂ ಹಿರಿಯೂರು ಗಡಿ ಭಾಗವಾದ ಪುರದಯ್ಯನಪಾಳ್ಯದ ಬಿಡಾರದಲ್ಲಿ ಶನಿವಾರ ರಾತ್ರಿಯಿಂದ ಸುಮಾರು ಐವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ದಿಡೀರ್ ಘಟನೆಯಿಂದಾಗಿ ಕುರಿಗಾಹಿಗಳು ಆತಂಕಗೊಂಡಿದ್ದು ಆಂತ್ರಾಕ್ಸ್ ರೋಗವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.              ಕುರಿಗಾಹಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ದಿಂಡಾವರ ಬಾಲದೇವರಹಟ್ಟಿಯವರಾಗಿದ್ದು ತಮ್ಮ ಜೀವನ ನಿರ್ವಹಣೆಗೆ ತಿಂಗಳ ಹಿಂದೆ ವಲಸೆ ಬಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಹತ್ತಿರದ ಬಳ್ಳಪ್ಪನಹಟ್ಟಿಯ ಸಮೀಪದಲ್ಲಿ ಬಿಡಾರ ಹಾಕಿದ್ದರು.                  ಶನಿವಾರ ರಾತ್ರಿ ಇದ್ದಕ್ಕಿಂದ್ದಂತೆ ಕುರಿಗಳ ಬಾಯಲ್ಲಿ ರಕ್ತ ಬಂದು ಅರ್ಧ ಗಂಟೆಯೊಳಗೆ ಕೆಲವು ಕುರಿಗಳು ಸತ್ತಿದ್ದರೆ ಇನ್ನು ಕೆಲವು ಹೊಟ್ಟೆ ಉಬ್ಬರದಿಂದ ಸಾಯುತ್ತಿದ್ದು ಪಶು ವೈದ್ಯರಿಗೆ ಶನಿವಾರ ರಾತ್ರಿಯೆ ವಿಷಯ ಮುಟ್ಟಿಸಿದ್ದಾಗಿ ,ಇದು ಆಂತ್ರಾಕ್ಸ್‌ ಕಾಯಿಲೆ ಎಂದು ಪಶು ವೈದ್ಯರು ತಿಳಿಸಿರುವುದಾಗಿ ಕುರಿಗಾಹಿಗಳಾದ ದಾಸಪ್ಪ . ಜಯಣ್ಣ , ಹಾಗೂ ಕರಿಯಣ್ಣ ತಿಳಿಸಿದ್ದಾರೆ.                  ಶನಿವಾರ ರಾತ್ರಿ ಸುಮಾರು ೫೦ ಕುರಿಗಳು ಸಾವನ್ನಪ್ಪಿದರೆ ಭಾನುವಾರದಂದು ಸುಮಾರು 20 ಕುರಿಗಳು ಸತ್ತಿದ್ದು ಮಂದೆಯಲ್ಲಿ 50 ರಿಂದ 60 ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿದೆ ಎನ್ನಲಾಗಿದೆ.                 ಭಾನುವಾರ

ಏ.೨೪ ರ ಭಾನುವಾರದಿಂದ ತೊರೆಸೂರಗೊಂಡನಹಳ್ಳಿಯಲ್ಲಿ ಬಸವೇಶ್ವರ ಹಾಗೂ ಚೌಡಮ್ಮನ ಜಾತ್ರೆ

ತೊರೆಸೂರಗೊಂಡನಹಳ್ಳಿಯ ಆದಿಶಕ್ತಿ ಚೌಡಮ್ಮನವರು ಹಾಗೂ ಬಸವೇಶ್ವರ ಸ್ವಾಮಿ ಹುಳಿಯಾರು:ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿ ಹಾಗೂ ಆದಿಶಕ್ತಿ ಚೌಡಮ್ಮನ ಜಾತ್ರಾ ಮಹೋತ್ಸವ  ಏ.೨೪ ರ ಭಾನುವಾರದಿಂದ ೨೭ರ ಬುಧವಾರದವರೆಗೆ ನಡೆಯಲಿದೆ. ೨೪ ರ ಭಾನುವಾರ ಸಂಜೆ ಧ್ವಜಾರೋಹಣ ಹಾಗೂ ಬಸವೇಶ್ವರ ಸ್ವಾಮಿ ಮೂಲಸ್ಥಾನಕ್ಕೆ ರುದ್ರಾಭಿಷೇಕದ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. ೨೫ ರ ಸೋಮವಾರದಂದು ಬೆ.೯ಕ್ಕೆ ಬಸವೇಶ್ವರ ಸ್ವಾಮಿಯ ಹೊಳೆಸೇವೆ ನಡೆದು ಅಗ್ನಿಕೊಂಡ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ,ಸಂಜೆ ಬಸವೇಶ್ವರ ಸ್ವಾಮಿಯವರ ರಥೋತ್ಸವ ನಂತರ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.ಅದೇ ದಿನ ರಾತ್ರಿ ಅಮ್ಮನವರ ಮದುವಣಗಿತ್ತಿ ಶಾಸ್ತ್ರ ಮತ್ತು ಮದ್ದಿನ ಸೇವೆ ಹಮ್ಮಿಕೊಳ್ಳಲಾಗಿದೆ. ೨೬ ರ ಮಂಗಳವಾರ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯವರ ಹೊಳೆಸೇವೆ,ನಡೆಮುಡಿಯೊಂದಿಗೆ ಕಳಸೋತ್ಸವ ನಡೆಯಲಿದೆ.ಸಂಜೆ ಆರತಿಬಾನ ,ರಾತ್ರಿ ಅಮ್ಮನವರ ಪುಷ್ಪಾಲಂಕಾರದ ವಾನದ ಉತ್ಸವ ಹಾಗೂ ಸೋಮನ ಕುಣಿತ ಜರುಗಲಿದೆ. ೨೭ರ ಬುಧವಾರ ಸಂಜೆ ಓಕಳಿ ಸೇವೆ ನಡೆದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ.

ಏ.೨೩ರ ಶನಿವಾರದಿಂದ ಹುಳಿಯಾರು ದುರ್ಗಮ್ಮನ ಜಾತ್ರೆ

ಹುಳಿಯಾರು: ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ ೪೬ನೇ ವರ್ಷದ ವೈಭವಯುತ ಜಾತ್ರಾಮಹೋತ್ಸವ ಏ.೨೩ ರ ಶನಿವಾರದಿಂದ ಪ್ರಾರಂಭಗೊಂಡು ಮೇ.೧ ರ ಭಾನುವಾರದವರೆಗೆ ಒಂಭತ್ತು ದಿನಗಳ ಕಾಲ ಜರುಗಲಿದೆ.            ೨೩ ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ ೨೪ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯದ ಭಕ್ತಾಧಿಗಳಿಂದ ಅಮ್ಮನವರ ಮಡಿಲಕ್ಕಿ ಸೇವೆ ,೨೫ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ಹಾಗೂ ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ನಡೆಯಲಿದೆ.                     ೨೬ ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ, ತಾ.೨೭ರ ಬುಧವಾರ ರಾತ್ರಿ ಹುಳಿಯಾರಿನ ಹುಳಿಯಾರಮ್ಮ, ಕೆಂಚಮ್ಮ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಕೆರೆಗೆ ದಯಮಾಡಿಸುವುದು. ತಾ.೨೮ರ ಗುರುವಾರ ಮುಂಜಾನೆ ೫ಕ್ಕೆ ಕೆರೆಯ ಬಾವಿಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ತಾ.೨೯ರ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಬ್ರಹ್ಮರಥೋತ್ಸವ ನಡೆದು ನಂತರ ವ

ಮಾರುತಿ ವ್ಯಾನ್ ಮರಕ್ಕೆ ಡಿಕ್ಕಿ :ಬಾಲಕಿ ಸಾವು

ಹುಳಿಯಾರು: ದೇವಸ್ಥಾನಕ್ಕೆ ಹೋಗಿ ಹಿಂದಿರುತ್ತಿದ್ದ ವೇಳೆ ಚಾಲಕನ ಅಜಾಗರೂಕತೆಯಿಂದ ಮಾರುತಿ ಓಮ್ನಿ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಕುಟುಂಬ ಸದಸ್ಯರ ಪೈಕಿ ಐದು ವರ್ಷದ ಬಾಲಕಿ ಗುಣಶೀಲ ಸ್ಥಳದಲ್ಲೆ ಮೃತಪಟ್ಟು ಮತ್ತಿಬ್ಬರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ ಘಟನೆ ಸಮೀಪದ ಕೆರೆಸೂರಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸುಮಾರು ೧೦ ಗಂಟೆಯ ವೇಳೆ ಜರುಗಿದೆ.               ಕಂದಿಕೆರೆಯ ರೇವಣಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಹೊಸಹಳ್ಳಿ ಪಾಳ್ಯದ ಜಗದೀಶ್ ಕುಟುಂಬ, ವಾಪಸ್ಸು ಸಂಬಂಧಿಕರನ್ನು ಮರಾಠಿ ಪಾಳ್ಯಕ್ಕೆ ಬಿಟ್ಟು ಸ್ವಗ್ರಾಮ ಹೊಸಹಳ್ಳಿ ಪಾಳ್ಯಕ್ಕೆ ತೆರಳುತ್ತಿದ್ದ ವೇಳೆ ಕೆರೆಸೂರಗೊಂಡನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ.ಕಾರಿನಲ್ಲಿದ್ದ ಐವರಲ್ಲಿ ಬಾಲಕಿ ಮೃತಪಟ್ಟು ಬಾಲಕಿಯ ಅಜ್ಜಿ ಸಿದ್ರಮಕ್ಕನಿಗೆ ಕಾಲು ಮುರಿದು ತಲೆ ಭಾಗಕ್ಕೆ ಪೆಟ್ಟು ಬಿದ್ದಿದೆ.ರಾಮಯ್ಯ ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ೧೦೮ ಸಮಸ್ಯೆ: ಘಟನೆ ಜರುಗಿದಾಗ ಗ್ರಾಮಸ್ಥರು ೧೦೮ ವಾಹನಕ್ಕೆ ಕರೆ ಮಾಡಿದರೆ ಹುಳಿಯಾರಿನ ೧೦೮ ವಾಹನ ಕೆಟ್ಟುಹೋಗಿದೆ, ಹಂದನಕೆರೆ ವಾಹನ ಕಳುಹಿಸುವುದಾಗಿ ತಿಳಿಸಿ ನಂತರ ಅಲ್ಲೂ ಸಿಗದೆ ಚಿಕ್ಕನಾಯಕನಹಳ್ಳಿಯಿಂದ ೧೦೮ ವಾಹನ ಬರುವುದರಲ್ಲಿ ತಡವಾಗಿ ತೀವ್ರ ರಕ್ತಸ್ರಾವದಿಂದ ಬಾಲಕಿ ಮೃತಪಟ್ಟಿದ್ದು ಗಾಯಾಳು ಅಜ್ಜಿಯನ್ನು ಬೇರೆ ವಾಹನದಲ್ಲಿ ಕಳುಹಿಸಿಕೊಡಲಾಯಿತು.

ದಸೂಡಿ ಆಂಜನೇಯನ ವಿಜೃಂಭಣೆಯ ಬ್ರಹ್ಮರಥೋತ್ಸವ

     ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರಿ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವವು ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.          ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಯವರ ಧಾರ್ಮಿಕ ಕೈಂಕರ್ಯಗಳು ನಡೆಯಿತು.ಸ್ವಾಮಿಯ ಪೂಜೆಯಿಂದ ಹಿಡಿದು, ಪತ್ತು, ನಗಾರಿ, ಧ್ವಜ, ಸೂರ್ಯಪಾನ, ಚಂದ್ರಪಾನ, ಚಾಮರ, ಮಕರ ತೋರಣ ಹೀಗೆ ಎಲ್ಲಾ ವಿಧದ ಬಿರುದಾವಳಿಗಳನ್ನು ಬ್ರಾಹ್ಮಣ ವರ್ಗದವರೇ ಹಿಡಿಯುವುದು ಇಂದಿನ ವಿಶೇಷವಾಗಿದ್ದು ಆಂಜನೇಯಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗೌಡಗೆರೆಯ ದುರ್ಗಮ್ಮದೇವರು ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿಕೊಂಡು ಸಕಲ ವಾದ್ಯಮೇಳದೊಂದಿಗೆ ದೇವಾಲಯವನ್ನು ಪ್ರದಕ್ಷಿಣೆ ಹಾಕಿಬಂದ ನಂತರ ಕೆಂಚರಾಯಸ್ವಾಮಿ,ದೂತರಾಯ ಸ್ವಾಮಿ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ರಥದ ಬಳಿ ಕರೆತರಲಾಯಿತು.ಜೈಕಾರದೊಂದಿಗೆ ಶುಭಲಗ್ನದಲ್ಲಿ ಆಂಜನೇಯ ಸ್ವಾಮಿಯವರನ್ನು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂದೆ ನೆಟ್ಟಿದ್ದ ಕದಳಿ ಮರವನ್ನು ತುಂಡರಿಸಿದ ನಂತರ ಫಲಪುಷ್ಪಾದಿಗಳಿಂದ, ರಂಗಿನ ಬಾವುಟ, ತಳಿರು ತೋರಣಗಳಿಂದ ಸಕಲ ಬಿರುದಾವಳಿಗಳಿಂದ ಅಲಂಕೃತಗೊಂಡ ರಥವನ್ನು ಮಂಗಳವಾದ್ಯ ವೇದ

ಇಂದು ದಸೂಡಿ ಆಂಜನೇಯಸ್ವಾಮಿ ಜಾತ್ರೆ ಬ್ರಹ್ಮ ರಥೋತ್ಸವ

ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶೀ ಆಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವ .ತಾ.18ರ ಸೋಮವಾರ ನಡೆಯಲಿದೆ. ನಂತರ ಬ್ರಾಹ್ಮಣರ ಸಂತರ್ಪಣೆ,ಭಕ್ತಾಧಿಗಳಿಗೆ ಲಘು ಉಪಹಾರ,ಪಾನಕಾಪನಿವಾರ ಸೇವೆ ನಡೆಯಲಿದೆ. ರಾತ್ರಿ ೯ ಕ್ಕೆ ಮಾರುತಿ ಯುವಕ ಸಂಘದಿಂದ "ಹಾರಿಹೋದ ಬಣ್ಣದ ಚಿಟ್ಟೆ" ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವಕ್ಕೆ ಆಗಮಿಸಬೇಕೆಂದು ಶ್ರೀ ಸೇನೆ ದಸೂಡಿ ಸದಸ್ಯರು ಕೋರಿದಾರೆ.

ಮಡಿವಾಳರ ಅಭಿವೃದ್ಧಿಗೆ ಶ್ರಮಿಸುವೆ:ಜಯಚಂದ್ರ

ದೊಡ್ಡೆಣ್ಣೆಗೆರೆಯಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಜನಾಂಗದ ಸಮಾವೇಶದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ , ಚಿತ್ರದುರ್ಗದ ಮಡಿವಾಳ ಮಠದ ಬಸವ ಮಾಚಿದೇವ ಸ್ವಾಮೀಜಿ,ಸಂಸದ ಮುದ್ದಹನುಮೇಗೌಡ,ಶಾಸಕ ಸಿ.ಬಿ.ಸುರೇಶ್ ಬಾಬು ,ಜಿಲ್ಲಾಧ್ಯಕ್ಷ ತಿಮ್ಮಯ್ಯ,ತಾಲ್ಲೂಕ್ ಅಧ್ಯಕ್ಷ ಸಿ.ಎಸ್.ನಟರಾಜು ಇದ್ದರು ಹುಳಿಯಾರು: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.ಈ ನಿಟ್ಟಿನಲ್ಲಿ ಮಡಿವಾಳ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಡಾ.ಅನ್ನಪೂರ್ಣ ನೀಡಿರುವ ವರದಿ ಜಾರಿಗೆ ಪರಿಶೀಲಿಸಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ತಿಳಿಸಿದರು. ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆಯಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಜನಾಂಗದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಸಂಘಟನೆ ಕೊರತೆಯಿಂದ ಸಮುದಾಯ ಯಾವುದೇ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ,ಮಡಿವಾಳ ಸಮಾಜವನ್ನು ಉತ್ತಮ ಸ್ಥಾನಕ್ಕೆ ತರುವುದಕ್ಕೆ ಶ್ರಮಿಸುವೆ ಎಂದ ಅವರು ಡಾ.ಅನ್ನಪೂರ್ಣ ವರದಿಯನ್ನು ಇಲಾಖೆ ಒಪ್ಪಿಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತೇನೆ.ನಂತರ ಇಲಾಖೆ ಸಚಿವರು,ಅಧಿಕಾರಿಗಳು ಹಾಗೂ ಡಾ.ಅನ್ನಪೂರ್ಣ ಅವರೊಂದಿಗೂ ಚರ್ಚಿಸಿ ಸಾಧಕ ಬಾಧಕಗಳನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಮಡಿವಾಳ ಸಮಾಜದ ಏಳಿಗೆಗೆ ಅಗತ್ಯ ಅಂ

ಹುಳಿಯಾರು ಮುಕ್ತಿಧಾಮಕ್ಕೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಜಯಚಂದ್ರ ಸೂಚನೆ

ಹುಳಿಯಾರು: ಪಟ್ಟಣದಲ್ಲಿರುವ ಮುಕ್ತಿಧಾಮಕ್ಕೆ ಮೂಲಭೂತ ಸೌಕರ್ಯ,ಅಗತ್ಯ ಚಿತಾಗಾರ ಹಾಗೂ ಶವ ಸಾಗಿಸಲು ವಾಹನ ಸೌಕರ್ಯಕ್ಕೆಂದು ತಾವೀಗಾಗಲೇ ಹದಿನೈದು ಲಕ್ಷ ಅನುದಾನವನ್ನು ಬಿಡುಗಡೆಮಾಡಿದ್ದು ಸಮುದಾಯದವರು ಇದರ ಸಧ್ಬಳಕೆ ಮಾಡಿಕೊಳ್ಳುವಂತೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಸೂಚಿಸಿದರು.                 ಪಟ್ಟಣದ ಮುಕ್ತಿಧಾಮದ ಸಮಸ್ಯೆ ಬಗ್ಗೆ ಸಮಿತಿಯವರು ಮಾಡಿದ್ದ ಮನವಿ ಮೇರೆಗೆ ಸ್ವತಹ ಮುಕ್ತಿಧಾಮಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿದ ತರವಾಯ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ರುದ್ರಭೂಮಿ ಅಭಿವೃದ್ಧಿಗಾಗಿ ೧೫ ಲಕ್ಷ ರೂಪಾಯಿ ಬಿಡುಗಡೆಗೊಳಿಸಿರುವುದಾಗಿ ಹಾಗೂ ಶೀಘ್ರವೇ ಶವ ಸಾಗಿಸುವ ವಾಹನದ ಸೌಕರ್ಯ ಕೂಡ ಕಲ್ಪಿಸಿಕೊಡುವುದಾಗಿ ತಿಳಿಸಿದರು.               ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದ ಅವರು ಇಲ್ಲಿನ ನೀರಿನ ವ್ಯವಸ್ಥೆಗಾಗಿ ಸಿಸ್ಟನ್ ಗೆಂದು ಮತ್ತು ನಿರ್ವಹಣೆಗೆಂದು ೨.೫ ಲಕ್ಷದ ಅನುದಾನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.                  ಸ್ಮಶಾನದಲ್ಲಿ ಶವ ಸುಡಲಿರುವ ಚಿತಾಗಾರವನ್ನು ಕಳ್ಳರು ಕದೊಯ್ದಿದ್ದು ಸಿಲಿಕಾನ್ ಚೇಂಬರ್ ವ್ಯವಸ್ಥೆ ಮಾಡಿಕೊಡಬೇಕೆಂಬ ಮನವಿಗೆ ಸ್ಪಂದಿಸಿದ ಅವರು ಪರಿಸರ ಕೂಡ ಹಾಳಾಗದ ರೀತಿ ವಿದ್ಯುತ್‌ ಚಿತಾಗಾರಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದರು.      

ಇಂದು(ಭಾನುವಾರ )ಹೆಚ್.ಸಿ.ಎಲ್.೪ ಕ್ರಿಕೇಟ್ ಪಂದ್ಯಾವಳಿ

ಹುಳಿಯಾರು:ಇಪ್ಪತ್ತು ಸಾವಿರ ಪ್ರಥಮ ಬಹುಮಾನದ ಹೆಚ್.ಸಿ.ಎಲ್-೪ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಎಂಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ೯ಕ್ಕೆ ನಡೆಯಲಿದೆ.ಸ್ಮಾರ್ಟ್ ಅಚೀವರ್ಸ್,ಚಕ್ರವರ್ತಿ ಇಲೆವನ್,ಹೊಯ್ಸಳ ಸ್ಮಾಷರ್ಸ್,ರೆಡ್ ಫೋರ್ಸ್,ಮಯೂರ ಎಲೆವನ್,ಬ್ಲೂ ಕ್ಯಾಪ್ಸ್,ಹುಳಿಯಾರು ವಾರಿಯರ್ಸ್,ರಾಯಲ್ ಕಿಂಗ್ ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು ಐ.ಪಿ.ಅಲ್.ಮಾದರಿಯಲ್ಲಿ ಒಟ್ಟು ಎಂಟು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.ಶಾಸಕ ಸಿ.ಬಿ.ಸುರೇಶ್ ಬಾಬು ಪಂದ್ಯವನ್ನು ಉದ್ಘಾಟಿಸಲಿದ್ದು ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಲಿದ್ದಾರೆ.          ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಗ್ರಾಪಂ ಉಪಾಧ್ಯಕ್ಷ ಗಣೇಶ್,ಕಕೆಂಕೆರೆ ನವೀನ್,ಪಿಎಸೈ ಪ್ರವೀಣ್ ಕುಮಾರ್,ಭೈರೇಶ್,ವೆಂಕಟೇಶ್,ರಂಗನಾಥ್ ಪರೋರೆ, ಪ್ರೇಮಲೀಲಾ,ಮುಖ್ಯ ಶಿಕ್ಷಕರಾದ ಶಂಕರಯ್ಯ ಹಾಗೂ ನಂದಾವಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಸೂಡಿಯಲ್ಲಿ ಸಂಭ್ರಮದ ರಾಮನವಮಿ

ಹುಳಿಯಾರು:ದಸೂಡಿಯಲ್ಲಿ ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು ಶುಕ್ರವಾರದಂದು ರಾಮನವಮಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.                   ಹನುಮಪ್ಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಮುಂಜಾನೆಯಿದ ಅಭಿಷೇಕ ಅರ್ಚನೆ ನಡೆದು "ಮರ್ಯಾದಾ ಪುರುಷೋತ್ತಮ" ಶ್ರೀರಾಮಚಂದ್ರನ ಅಖಂಡ ಭಜನೆ ಮಾಡುವ ಮೂಲಕ ಶ್ರೀರಾಮ ದೇವರನ್ನು ದಸೂಡಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.ಶ್ರೀ ಮಾರುತಿ ಭಜನಾ ಮಂಡಲಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆಗಮಿಸಿದ್ದ ಭಕ್ತರಿಗೆ ರಾಮನವಮಿಯ ವಿಶೇಷ ಪಾನಕ ಪನಿವಾರ ವಿತರಿಸಲಾಯಿತು. ರಾಕ್ಷಸ ಕುಲ ಸಂಹಾರಕ ಹನುಮನಿಗೆ ರಾತ್ರಿ ಇಂದ್ರಜಿತು ವಾಹನೋತ್ಸವವನ್ನು ಮಾಡುವ ಮೂಲಕ ದಸೂಡಿ ಹನುಮನನ್ನು ರಂಜಿಸಲಾಯಿತು. ದೇವಾಲಯ ಸಮಿತಿಯವರು ,ಶ್ರೀ ಸೇನೆ ದಸೂಡಿಯ ಸದಸ್ಯರುಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂದು ಸ್ವಾಮಿ ಕೃಪೆಗೆ ಪಾತ್ರರಾದರು.

ಹುಳಿಯಾರು :ಎಲ್ಲೆಲ್ಲೂ ರಾಮನವಮಿ ಸಂಭ್ರಮ

ಹುಳಿಯಾರು : ಪಟ್ಟಣದ ವಿವಿಧ ದೇವಾಲಯಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಸೀಗೆಬಾಗಿ,ಹೊಸಹಳ್ಳಿ, ಕೆಂಕೆರೆ, ತಿರುಮಲಾಪುರ,ದಸೂಡಿ,ನಂದಿಹಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ಶುಕ್ರವಾರದಂದು ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಎಲ್ಲಾ ದೇವಾಲಯಗಳಲ್ಲೂ ಪೂಜಾ ಕೈಂಕರ್ಯಗಳನ್ನು ನಡೆಸಿ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ ,ಕೋಸಂಬರಿ ವಿತರಿಸಲಾಯಿತು. ಪಟ್ಟಣದ ಅಂಜನೇಯಸ್ವಾಮಿ ಸನ್ನಿಧಿ, ಅನಂತಶಯನ ರಂಗನಾಥಸ್ವಾಮಿ ಸನ್ನಿಧಿ, ಗಾಂಧಿಪೇಟೆಯ ಶನೇಶ್ವರಸ್ವಾಮಿ ದೇವಾಲಯ, ಕಾಳಿಕಾಂಭ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮನ ದೇವಾಲಯದಲ್ಲಿಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದ ಅಂಗವಾಗಿ ಶುಕ್ರವಾರ ಬೆಳಗಿನಿಂದಲೇ ವಿಶೇಷ ಅರ್ಚನೆ, ಪೂಜೆ ಕೈಂಕರ್ಯ ನಡೆದವು. ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಮುಂಜಾನೆ ರಾಮಚಂದ್ರಭಟ್ಟರಿಂದ ಅರ್ಚನೆ,ಅಭಿಷೇಕ ನಡೆದು ರಾಮತಾರಕ ಮಂತ್ರ ಜಪಿಸಲಾಯಿತು.ಭಕ್ತಾಧಿಗಳಿಂದ ರಾಮಭಜನೆ ನಡೆಯಿತು.ಲಿಂಗಪ್ಪನಪಾಳ್ಯದ ರಾಮದೇವರು,ಹುಳಿಯಾರು ಗ್ರಾಮದೇವತೆಗಳಾದ ಹುಳಿಯಾರಮ್ಮ,ದುರ್ಗಮ್ಮ,ರಂಗನಾಥಸ್ವಾಮಿ,ಶನಿದೇವರ ಉತ್ಸವಮೂರ್ತಿಗಳ ಆಗಮನದ ನಂತರ ಮಹಾಮಂಗಳಾರತಿ ನಡೆಸಲಾಯಿತು. ಶ್ರೀ ಆಂಜನೇಯ ಸ್ವಾಮಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ,ಕಡಲೆಕಾಳು ಉಸ್ಲಿ ವಿತರಿಸಲಾಯಿತು. ಈ ವ

ಮಾರುತಿ ಸಂಗೀತ ಶಾಲೆಯ ಶಿಬಿರ ಇಂದಿನಿಂದ

ಹುಳಿಯಾರು: ಪಟ್ಟಣದ ಮಾರುತಿ ಸಂಗೀತ ಶಾಲೆಯಿಂದ ಏ.೧೫ರಿಂದ ಹತ್ತುದಿನಗಳ ಕಾಲದವರೆಗೆ ಗಾಂಧಿಭವನದಲ್ಲಿ ಬೆಳಿಗ್ಗೆ ೯ ರಿಂದ ೧೧ ರವರೆಗೆ ಸಂಗೀತ ಶಿಬಿರ ಹಮ್ಮಿಕೊಳ್ಳಲಾಗಿದೆ.            ಶಿಬಿರದಲ್ಲಿ ಭಕ್ತಿಗೀತೆ,ಭಾವಗೀತೆ,ವಚನಗಳು ಹಾಗೂ ದಾಸರ ಪದಗಳನ್ನು ಹೇಳಿಕೊಡಲಾಗುವುದು. ಹುಳಿಯಾರು ಮತ್ತು ಸುತ್ತಮುತ್ತಲ ಗ್ರಾಮಗಳ ಸಂಗೀತಾಸಕ್ತರು ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಬಡಗಿ ರಾಮಣ್ಣ ಕೋರಿದ್ದಾರೆ.

ಹುಳಿಯಾರು:ಅದ್ದೂರಿ ಶ್ರೀರಾಮನವಮಿ:ಸಂಗೀತ ರಸಸಂಜೆ

ಹುಳಿಯಾರು: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೭ ನೇ ವರ್ಷದ ರಾಮನವಮಿಯನ್ನು ಶುಕ್ರವಾರದಂದು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಿಶೇಷಪೂಜೆ ಹಾಗೂ ಕಿರುತೆರೆ ನಟನಟಿಯರಿಂದ ನೃತ್ಯ-ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.                 ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಚಾರಿಟಬಲ್ ಟ್ರಸ್ಟ್ ಮತ್ತು ಜೈ ಮಾರುತಿ ಯುವಕ ಸೇವಾ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಲಗೂರು ಶ್ರೀಕ್ಷೇತ್ರದ ಶ್ರೀಬಿಂದು ಮಾಧವ ಶರ್ಮಾ ಸ್ವಾಮೀಜಿ ಮತ್ತು ಮಾಡಾಳು ನಿರಂಜನ ಪೀಠದ ಶ್ರೀಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಮುಂಜಾನೆ ಪೂಜಾ ಕಾರ್ಯಕ್ರಮ ನೆರವೇರಲಿದೆ.                    ಸ್ವಾಮಿಯ ಅಭಿಷೇಕದ ನಂತರ ದುರ್ಗಾಪರಮೇಶ್ವರಿ, ಹುಳಿಯಾರಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಆಗಮನದೊಂದಿಗೆ ಮಾಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನಡೆದು ಪಾನಕ ಮಜ್ಜಿಗೆ ಪನಿವಾರ ಸೇವೆ ನಡೆಯಲ್ಲಿದೆ.                   ಎಸ್.೨ ಇವೆಂಟ್ಸ್ ಬೆಂಗಳೂರು ಇವರ ವತಿಯಿಂದ ಸಂಜೆ ೭.೩೦ಕ್ಕೆ ಸಂಗೀತ ರಸಸಂಜೆ ಹಾಗೂ ಕಿರುತೆರೆ ನಟ-ನಟಿಯರಾದ ಪುಟ್ಟಗೌರಿ ಧಾರವಾಹಿಯ ಮಹೇಶ್,ಗೌರಿ,ಹಿಮ,ಅಮೃತವರ್ಷಿಣಿಯ ಅಮೃತ,ಗಾಯಕಿಯರಾದ ಇಂಧು ನಾಗರಾಜ್ ಹಾಗೂ ಪ್ರಾರ್ಥನಾ ,ಗಾಯಕಯರಾದ ಸಂತೋಷ್ ವೆಂಕಿ ಹಾಗೂ ಸಂತೋಷ್ ದೇವ್ ಅವರುಗಳ ನೃತ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆ

ಏ.೧೫ರಿಂದ ನಂದಿಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ

ಹುಳಿಯಾರು ಸಮೀಪದ ನಂದಿಹಳ್ಳಿಯಲ್ಲಿ ಏ.೧೫ರ ಶುಕ್ರವಾರದಿಂದ ೧೮ ರ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ಜಾತ್ರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.                  ಶುಕ್ರವಾರ ಬೆಳಿಗ್ಗೆ ರಾಮನವಮಿ ಪ್ರಯುಕ್ತ ಆಂಜನೇಯ ಸ್ವಾಮಿಯವರ ವಿಶೇಷಪೂಜೆ, ಕುಂಕುಮಾರ್ಚನೆ, ರುದ್ರಾಭಿಷೇಕ,ಮಹಾಮಂಗಳಾರತಿ,ಧ್ವಜಾರೋಹಣ,ಊರಿನ ಪ್ರಮುಖ ಬೀದಿಗಳಲ್ಲಿ ಭಜನೆ ನಡೆಯಲಿದೆ.ಸಂಜೆ ಆಂಜನೇಯಸ್ವಾಮಿಯವರ ಉತ್ಸವ,ಬಿಲ್ಲುಗೂಡೂ ಸೇವೆ,ಪಾನಕ ಪ್ರಸಾದ ವಿನಿಯೋಗವಾಗಲಿದೆ.ರಾತ್ರಿ ನಂದಿಬಸವೇಶ್ವರ ಕಲಾ ಸಂಘದವರಿಂದ ರಾಜಾ ಸತ್ಯವ್ರತ ನಾಟಕ ಪ್ರದರ್ಶನ ನಡೆಯಲಿದೆ.               ಶನಿವಾರದಂದು ನಂದಿಹಳ್ಳಿ ನಂದಿಬಸವೇಶ್ವರ ಸ್ವಾಮಿ,ಆಂಜನೇಯಸ್ವಾಮಿ,ಶನೇಶ್ವರಸ್ವಾಮಿ, ನಂದಿಹಳ್ಳಿ ರಾಯರಹಟ್ಟಿಯ ಕ್ಯಾತಲಿಂಗೇಶ್ವರ ಸ್ವಾಮಿ,ನಿರುವಗಲ್ ಹುಲ್ಕಲ್ ಬೆಟ್ಟದ ದುರ್ಗಮ್ಮ,ತೊರೆಮನೆ ಅಂತರಘಟ್ಟೆ ಕರಿಯಮ್ಮ ದೇವರುಗಳ ಆಗಮನ ಮತ್ತು ಕೂಡುಭೇಟಿ ಹಾಗೂ ನೂರೊಂದೆಡೆ ಸೇವೆ ,ಗುರುಪರುವಿನೊಂದೆಗೆ ಅನ್ನಸಂತರ್ಪಣೆ ನಡೆಯಲಿದೆ.             ಭಾನುವಾರದದಂದು ಸ್ವಾಮಿಯವರ ಬೆಳ್ಳಿಪಾಲಿಕೆಯ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಸಾಯಂಕಾಲ ದೋಣಿಸೇವೆ ಮುತ್ತಿನ ಮಂಟಪೋತ್ಸವ ನಡೆಯಲಿದೆ.                   ೧೮ರ ಸೋಮವಾರದಂದು ಬೆಳಿಗ್ಗೆ ೯ಕ್ಕೆ ರಥೋತ್ಸವ ನಡೆಯಲಿದೆ.ಸಂಜೆ ದೇವರುಗಳ ಬೀಳ್ಕೊಡುಗೆಯೊಂದಿಗೆ ಜಾತ್ರಾಮಹೋತ್ಸವ ಕೊನೆಗೊಳ್ಳಲಿದೆ.

ಶುಕ್ರವಾರ ಶನಿಪ್ರಭಾವ ನಾಟಕ

ಹುಳಿಯಾರು: ಸಮೀಪದ ನಂದಿಹಳ್ಳಿಯ ನಂದಿಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ನಂದಿಬಸವೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಶುಕ್ರವಾರ ರಾತ್ರಿ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.ಶ್ರೀ ಶನೇಶ್ವರ ಡ್ರಾಮಾ ಸೀನರೀಸ್ ನವರ ಅಲಂಕೃತ ಭವ್ಯ ರಂಗ ಸಜ್ಜಿಕೆಯಲ್ಲಿ ರಾಜಣ್ಣನವರ ಸಂಗೀತ ನಿರ್ದೇಶನದಲ್ಲಿ ನಡೆಯಲಿರುವ ನಾಟಕ ಸಮಾರಂಭದ ಅಧ್ಯಕ್ಷತೆಯನ್ನು ತಿರುಮಲಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷ ದೇವರಾಜು ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಲಿದ್ದಾರೆ.              ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಕಿರಣ್ ಕುಮಾರ್ ಮತ್ತು ಜೆ.ಸಿ.ಮಧುಸ್ವಾಮಿ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್,ಜಿಪಂ ಸದಸ್ಯ ಸಿದ್ದರಾಮಯ್ಯ,ತಾಪಂ ಸದಸ್ಯೆ ಕಲ್ಯಾಣಿಭಾಯಿ ರಘುನಾಯ್ಕ,ಗ್ರಾಪಂ ಉಪಾಧ್ಯಕ್ಷ ಮೋಹನ್ ಕುಮಾರ್ ,ನಂದಿಹಳ್ಳಿ ಶಿವಣ್ಣ ಸೇರಿದಂತೆ ಗ್ರಾಮಪಂಚಾಯ್ತಿ ಸದಸ್ಯರುಗಳು,ಗ್ರಾಮದ ಪ್ರಮುಖರು ಭಾಗವಹಿಸಲಿದ್ದಾರೆ.ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ನಾಟಕಮಂಡಳಿಯವರು ಕೋರಿದ್ದಾರೆ.

ತಿರುಮಲಾಪುರ ಗ್ರಾಮಪಂಚಾಯ್ತಿಯಲ್ಲಿ ಅಂಬೇಡ್ಕರ್ ಜಯಂತಿ

ಹುಳಿಯಾರು ಹೋಬಳಿಯ ತಿರುಮಲಾಪುರ ಗ್ರಾಮಪಂಚಾಯ್ತಿಯಲ್ಲಿ ಗುರುವಾರದಂದು ಅಂಬೇಡ್ಕರ್ ಜಯಂತಿ ಆಚರಿಸಿ ಮಕ್ಕಳಿಗೆ ಸಿಹಿ ಹಂಚಲಾಯಿತು.ಗ್ರಾಪಂ ಅಧ್ಯಕ್ಷ ದೇವರಾಜು ,ಕಾರ್ಯದರ್ಶಿ ಕಲ್ಲಹಳ್ಳಿ ರಮೇಶ್,ಶಿಕ್ಷಕ ಚಂದ್ರಶೇಖರ್ ಮತ್ತಿತರರಿದ್ದರು

ಹುಳಿಯಾರು:ಅದ್ದೂರಿ ಶ್ರೀರಾಮನವಮಿ: ವಿಶೇಷ ಪೂಜೆ :ಸಂಗೀತ ರಸಸಂಜೆ

ಹುಳಿಯಾರು: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೭ ನೇ ವರ್ಷದ ರಾಮನವಮಿಯನ್ನು ಶುಕ್ರವಾರದಂದು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಿಶೇಷಪೂಜೆ ಹಾಗೂ ಕಿರುತೆರೆ ನಟನಟಿಯರಿಂದ ನೃತ್ಯ-ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಚಾರಿಟಬಲ್ ಟ್ರಸ್ಟ್ ಮತ್ತು ಜೈ ಮಾರುತಿ ಯುವಕ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಬೆಲಗೂರು ಶ್ರೀಕ್ಷೇತ್ರದ ಶ್ರೀಬಿಂದು ಮಾಧವ ಶರ್ಮಾ ಸ್ವಾಮೀಜಿ ಮತ್ತು ಮಾಡಾಳು ನಿರಂಜನ ಪೀಠದ ಶ್ರೀಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಮುಂಜಾನೆ ಪೂಜಾ ಕಾರ್ಯಕ್ರಮ ನೆರವೇರಲಿದೆ.            ಬೆ.೬ಕ್ಕೆ ಆಂಜನೇಯಸ್ವಾಮಿಗೆ ಅಭಿಷೇಕ ನಂತರ ದುರ್ಗಾಪರಮೇಶ್ವರಿ, ಹುಳಿಯಾರಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಆಗಮನದೊಂದಿಗೆ ಮಾಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ, ಪಾನಕ ಮಜ್ಜಿಗೆ ಪನಿವಾರ ಸೇವೆ ನಡೆಯಲ್ಲಿದೆ.            ಸಂಜೆ ೭.೩೦ಕ್ಕೆ ಸಂಗೀತ ರಸಸಂಜೆ ಹಾಗೂ ಕಿರುತೆರೆ ನಟ-ನಟಿಯರಿಂದ ನೃತ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.        ನಿರೂಪಕಿ ಸುಷ್ಮಾ ಅಶ್ವಿನ್ ನಿರೂಪಣೆಯಲ್ಲಿ ಪುಟ್ಟಗೌರಿ ಧಾರವಾಹಿಯ ಮಹೇಶ್,ಗೌರಿ,ಹಿಮ,ಅಮೃತವರ್ಷಿಣಿಯ ಅಮೃತ,ಗಾಯಕಿಯರಾದ ಇಂಧು ನಾಗರಾಜ್ ಹಾಗೂ ಪ್ರಾರ್ಥನಾ ,ಗಾಯಕಯರಾದ ಸಂತೋಷ್ ವೆಂಕಿ ಹಾಗೂ ಸಂತೋಷ್ ದೇವ್ ನೃತ್ಯಕ್ಕೆ ಹೆಜ್ಜೆ ಹಾಕಲಿದ್ದಾರೆ.

ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಊರಹಬ್ಬ

ಹುಳಿಯಾರು: ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಬಂತೆಂದರೆ ಅದೇನೋ ಸಂಭ್ರಮ.ಕುರುಬ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿರುವ ಈ ಪುಟ್ಟ ಗ್ರಾಮದಲ್ಲಿ ರಾಮನವಮಿ ಕೇವಲ ಪಾನಕ ಕೋಸುಂಬರಿ ವಿತರಿಸುವುದರೊಂದಿಗೆ ಕೊನೆಗೊಳ್ಳುವುದಿಲ್ಲ. ಇಲ್ಲಿ ಬರೋಬ್ಬರಿ ಒಂಬತ್ತು ದಿನಗಳ ಕಾಲ ನಡೆಯೋ ಆಚರಣೆಯನ್ನು ವಸಂತ ನವರಾತ್ರಿ ಎನ್ನುತ್ತಾರೆ. ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಬರುವ ರಾಮನವಮಿಯನ್ನು ಊರಿನ ಮಂದಿಯೆಲ್ಲಾ ಒಟ್ಟಾಗಿ ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಈ 9 ದಿನಗಳ ಕಾಲದ ಆಚರಣೆಗೆ ತೆರೆಬೀಳಲಿದೆ. ಸಾಮಾನ್ಯವಾಗಿ ಶರನ್ನವರಾತ್ರಿ ದುರ್ಗಾಪೂಜೆಗೆ ಮೀಸಲಾದರೆ ಇಲ್ಲಿ ಆಚರಣೆಯಲ್ಲಿರುವ ವಸಂತ ನವರಾತ್ರಿ ಶ್ರೀರಾಮನಿಗೆ ಮೀಸಲು. ಹೊಸ ಸಂವತ್ಸರದ ಅಂದರೆ ಯುಗಾದಿಯ ಮೊದಲ ದಿನದಿಂದ ಪ್ರಾರಂಭಿಸಿ ರಾಮನು ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ರಾಮನ ಪೂಜೆ ಸಲ್ಲಿಸಿದ ನಂತರ ಅಂತ್ಯಗೊಳ್ಳುತ್ತದೆ.                       ಯುಗಾದಿಯಿಂದ ಒಂಬತ್ತನೆ ದಿನ ಬರುವುದೇ ಶ್ರೀ ರಾಮ ನವಮಿ.2೦೦ ಮನೆಗಳ ಗ್ರಾಮವಾದ ಲಿಂಗಪ್ಪನಪಾಳ್ಯದಲ್ಲಿ ಎಲ್ಲ ಹಬ್ಬಗಳನ್ನು ಆಚರಿಸುತ್ತಾರಾದರೂ ರಾಮನವಮಿ ಮಾತ್ರ ವಿಶೇಷವಾಗಿ ಆಚರಿಸುತ್ತಾರೆ. ಇಡೀ ಗ್ರಾಮದ ಮಂದಿಯೆಲ್ಲ ಶ್ರೀರಾಮನ ಭಕ್ತರಾಗಿದ್ದು ಶ್ರೀರಾಮನ ಆರಾಧನೆಗಾಗಿ ರಾಮಮಂದಿರ ಕೂಡ ನಿರ್ಮಿಸಿಕೊಂಡಿದ್ದಾರೆ..ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗ

ಬರದಲೇಪಾಳ್ಯದಲ್ಲಿ ಇಂದು ಉತ್ಸವ ಹಾಗೂ ದೇವಿ ಮಹಾತ್ಮೆ ನಾಟಕ

ಹುಳಿಯಾರು ಸಮೀಪದ ಬರದಲೇಪಾಳ್ಯದಲ್ಲಿ ಗುರುವಾರ ಸಂಜೆ ೬ ಗಂಟೆಯಿಂದ ಕಾಳಿಕಾಂಬದೇವಿ ಮತ್ತು ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ,ಅಂಬಿಕಾದೇವಿಯ ಉತ್ಸವ ನಡೆಯಲಿದೆ.          ಬರದಲೇಪಾಳ್ಯದ ಅಂಬಿಕಾ ಕೃಪಾಪೋಷಿತ ನಾಟಕಮಂಡಳಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾತ್ರಿ ೧೦.೩೦ಕ್ಕೆ ದೇವಿ ಮಹಾತ್ಮೆ ಅಥವಾ ರಕ್ತಬೀಜನ ವಧೆ ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸಲಿದ್ದಾರೆ.             ಪಾಳ್ಯ,ಕೆಂಕೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ವ್ಯವಸ್ಥಾಪಕರು ಕೋರಿದ್ದಾರೆ.

ತೆರವಾದ ಗ್ರಾಪಂ ಸ್ಥಾನಕ್ಕೆ ಏ ೧೭ ಚುನಾವಣೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ೩ ಜನ ಗ್ರಾಮ ಪಂಚಾಯಿತಿ ಸದಸ್ಯರು ನಿಧನ ಹೊಂದಿದ್ದು ಆ ಸ್ಥಾನಗಳಿಗೆ ಏಪ್ರಿಲ್ ೧೭ರಂದು ಚುನಾವಣೆಯು ನಡೆಯಲಿದೆ. ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದ್ರೆಹಳ್ಳಿ ಗ್ರಾಮಪಂಚಾಯಿತಿಯಲ್ಲಿನ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಮೀಸಲಿದ್ದು ೪ ಜನ ಅಭ್ಯರ್ಥಿಗಳು (.ಗೀತಾ, ರುಕ್ಮಿಣಿಬಾಯಿ, ಸಿ.ಶೋಭ, ಹಾಗೂ ಸುನೀತಾ)ಕಣದಲ್ಲಿದ್ದಾರೆ. ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಆರ್.ಪಂಕಜ, ಹಾಗೂ ಬಿ.ಎಮ್.ವೀಣಮ್ಮ ಕಣದಲ್ಲಿದ್ದಾರೆ. ತೀರ್ಥಪುರ ಗ್ರಾಮ ಪಂಚಾಯಿತಿಯ ದೊಡ್ಡರಾಂಪುರದಲ್ಲಿನ ಸ್ಥಾನ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿದ್ದು ಅಂತಿಮ ಕಣದಲ್ಲಿ ಕರಿಯಮ್ಮ, ಗೌರಮ್ಮ, ನಾಗಮ್ಮ ಇದ್ದಾರೆ.

ಚಿ.ನಾ.ಹಳ್ಳಿಯಲ್ಲಿ ಇಂದು ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿ ಆಚರಣೆ

(ಸುದ್ದಿ ಮಾಹಿತಿ:http://chikkanayakanahallinews.blogspot.in/ )                             ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಹಾಗೂ ಇತರೆ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿಯನ್ನು ಚಿಕ್ಕನಾಯಕನಹಳ್ಳಿಯಲ್ಲಿ ಇಂದು(೧೪ರಂದು) ಆಚರಿಸಲಾಗುತ್ತದೆ. ಗುರುವಾರ ಬೆಳಗ್ಗೆ ೯-೩೦ಕ್ಕೆ ತಾಲ್ಲೂಕು ಕಚೇರಿಯ ಮುಂಭಾಗದಿಂದ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಭಾವಚಿತ್ರ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಮಧ್ಯಾಹ್ನ ೧೨-೦೦ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿರುವ ಸಮಾರಂಭ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಉದ್ಘಾಟಿಸಲಿದ್ದಾರೆ.             ಜಿ.ಪಂ.ಸದಸ್ಯ ಎಸ್.ಟಿ.ಮಹಲಿಂಗಯ್ಯ ಡಾ||ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರವನ್ನು ಹಾಗೂ ಡಾ|ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಪುರಸಭಾ ಉಪಾದ್ಯಕ್ಷೆ ಬಿ.ಇಂದಿರಾ ಅನಾವರಣಗೊಳಿಸುವರು. ಮೈಸೂರಿನ ಮಹಾರಾಜ ಕಾಲೇಜಿನ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಡಾ|| ಆರ್ ತಿಮ್ಮರಾಯಪ್ಪ ಉಪನ್ಯಾಸ ನೀಡಲಿದ್ದಾರೆ. ವಿದ್ಯಾರ್ಥಿನಿಯರಾದ ಎಂ.ಬಿ.ದಿವ್ಯ, ಎಲ್.ಹೇಮಾ, ದಸೂಡಿಯ ಪ್ರಗತಿಪರ ರೈತ ಮಹಿಳೆ ಅರ್ಚನಾ , ಹನುಮಂತಪುರದ ಅ

ದಸೂಡಿ ಶ್ರೀಆಂಜನೇಯ ಸ್ವಾಮಿಯವರ ಜಾತ್ರಾಮಹೋತ್ಸವಕ್ಕೆ ಚಾಲನೆ

ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಬುಧವಾರದಂದು ಮೂಲದೇವರಿಗೆ ಮತ್ತು ಉತ್ಸವ ಮೂರ್ತಿಗೆ ಕಂಕಣ ಧಾರಣೆ ಮಾಡುವ ಮೂಲಕ ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಇದರ ಅಂಗವಾಗಿ ಮುಂಜಾನೆ ಪೂಜಾವಿಧಿವಿಧಾನಗಳು ನೆರವೇರಿತು.ಶ್ರೀ ಸ್ವಾಮಿಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಸಂಜೆ ಅರ್ಚಕ ಚಿಕ್ಕತಿಮ್ಮಯ್ಯನವರ ಮನೆಯಲ್ಲಿ ಅಖಂಡ ದಾಸೋಹ ನೆರವೇರಿತು.ರಾತ್ರಿ ಅದ್ಧೂರಿ ಚಂದ್ರಮಂಡಲೋತ್ಸವದ ಮೂಲಕ ಶ್ರೀಸ್ವಾಮಿಯವರನ್ನು ದೇವಾಲಯಕ್ಕೆ ಕರೆತರಲಾಯಿತು. ದೇವಾಲಯ ಸಮಿತಿಯವರು,ಶ್ರೀಸೇನೆ ದಸೂಡಿ ಸ್ವಯಂಸೇವಕರು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು. ಗುರುವಾರದಂದು ಸ್ವಾಮಿಯವರ ಧ್ವಜಾರೋಹಣ, ರಾತ್ರಿ ಸರ್ಪವಾಹನೋತ್ಸವ ನಡೆಯಲಿದೆ.

ಹುಳಿಯಾರು ಪಂಚಾಯ್ತಿಯಲ್ಲಿ "ಬಿಲ್ "ವೀರರು.

ಪಂಚಾಯ್ತಿ ಸಭೆಯಲ್ಲಿ ಆಕ್ಷೇಪಣೆ,ಆರೋಪಗಳ ಸುರಿಮಳೆ --------------------------------------- ಹುಳಿಯಾರು:ಗ್ರಾಮ ಪಂಚಾಯ್ತಿಯಲ್ಲಿ ಆಯವ್ಯಯಗಳ ಮಂಡನೆಯಾಗಿಲ್ಲ,ಸ್ಥಾಯಿ ಸಮಿತಿಗಳ ರಚನೆಯಾಗಿಲ್ಲ,ಇಂಡೆಂಟ್ ನೀಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದ್ದು ಯಾವುದಕ್ಕೂ ಲೆಕ್ಕಬುಕ್ಕಿಲ್ಲ,ಸಿಸಿಟಿವಿ ಅಳವಡಿಸಲು ಪಡೆದ ಹಣ ಏನಾಯ್ತೆಂದು ಗೊತಿಲ್ಲ,ಎನ್.ಆರ್.ಇ.ಜೆಯಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿದ್ದು ಕಾಮಗಾರಿ ನಡೆಯದೆ ಬಿಲ್ ಮಾಡಿದೆ ಎಂದು ಹೇಳಿದರೂ ಗಮನ ಮಾಡುತ್ತಿಲ್ಲ,ಹಿಂದಿನ ಪಿಡಿಓ ಅವಧಿಯ ಅವ್ಯವಹಾರಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ ಹೀಗೆ ಹತ್ತು ಹಲವು ಆರೋಪ ಹಾಗೂ ಆಕ್ಷೇಪಣೆಗಳ ನಡುವಯೆ ಹುಳಿಯಾರು ಗ್ರಾಮ ಪಂಚಾಯ್ತಿಯ ವಿಶೇಷ ಸಭೆ ನಡೆಯಿತು. ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ಗೀತಾ ಪ್ರದೀಪ್,ಉಪಾಧ್ಯಕ್ಷ ಗಣೇಶ್,ಪಿಡಿಓ ಸಿದ್ಧರಾಮಣ್ಣ ಇದ್ದಾರೆ.            ಗೀತಾ ಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಹುಳಿಯಾರು ಗ್ರಾಮಪಂಚಾಯ್ತಿಯ ವಿಶೇಷ ಸಭೆಯಲ್ಲಿ ಬಹುಪಾಲು ಸಮಯ ಚರ್ಚೆಯ ವಿಷಯಕ್ಕಿಂತ ಆರೋಪಗಳಿಗೆ ಮೀಸಲಾಗಿ ಸದಸ್ಯರುಗಳು ಸಮಸ್ಯೆಗಳ ಪಟ್ಟಿಯನ್ನೆ ಬಿಚ್ಚಿಟ್ಟರು.                   ಮೊದಲಿಗೆ ಆಯಾವ್ಯಯದ ಬಗ್ಗೆ ಚರ್ಚೆ ಸಾಗಿ ಇದುವರೆಗೂ ಈ ಬಗ್ಗೆ ಸದಸ್ಯರುಗಳೊಂದಿಗೆ ಚರ್ಚೆ ಯಾಕೆ ನಡೆಸಿಲ್ಲ.ಪಂಚಾಯ್ತಿಯಲ್ಲಿ ಕಳೆದ ಸಾಲಿನ ಹಾಗೂ ಈ ಸಾಲಿನ ಲೆಕ್ಕ ಕೊಡಬೇಕೆ