ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಬುಧವಾರದಂದು ಮೂಲದೇವರಿಗೆ ಮತ್ತು ಉತ್ಸವ ಮೂರ್ತಿಗೆ ಕಂಕಣ ಧಾರಣೆ ಮಾಡುವ ಮೂಲಕ ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದರ ಅಂಗವಾಗಿ ಮುಂಜಾನೆ ಪೂಜಾವಿಧಿವಿಧಾನಗಳು ನೆರವೇರಿತು.ಶ್ರೀ ಸ್ವಾಮಿಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಸಂಜೆ ಅರ್ಚಕ ಚಿಕ್ಕತಿಮ್ಮಯ್ಯನವರ ಮನೆಯಲ್ಲಿ ಅಖಂಡ ದಾಸೋಹ ನೆರವೇರಿತು.ರಾತ್ರಿ ಅದ್ಧೂರಿ ಚಂದ್ರಮಂಡಲೋತ್ಸವದ ಮೂಲಕ ಶ್ರೀಸ್ವಾಮಿಯವರನ್ನು ದೇವಾಲಯಕ್ಕೆ ಕರೆತರಲಾಯಿತು.
ದೇವಾಲಯ ಸಮಿತಿಯವರು,ಶ್ರೀಸೇನೆ ದಸೂಡಿ ಸ್ವಯಂಸೇವಕರು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಗುರುವಾರದಂದು ಸ್ವಾಮಿಯವರ ಧ್ವಜಾರೋಹಣ, ರಾತ್ರಿ ಸರ್ಪವಾಹನೋತ್ಸವ ನಡೆಯಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ