ಭಾನುವಾರ ಅಗ್ನಿ ಕೊಂಡೋತ್ಸವ
-----------------------------
ಸೋಮವಾರ ಬ್ರಹ್ಮ ರಥೋತ್ಸವ
-------------------
ಹುಳಿಯಾರು:ಸಮೀಪದ ಹಂದನಕೆರ ಹೋಬಳಿಯ ಹೊಸಕೆರೆಯಲ್ಲಿ ಮಾ.೩೦ ರ ಬುಧವಾರದಿಂದ ಜಾತ್ರಾಮಹೋತ್ಸವ ಆರಂಭವಾಗಿದ್ದು ಏಪ್ರಿಲ್ ೫ ರ ಮಂಗಳವಾರದಂದು ಕೊನೆಗೊಳ್ಳಲಿದೆ.
ಬುಧವಾರದಂದು ಧ್ವಜಾರೋಹಣ ಹಾಗೂ ಮಧುವಣಗಿತ್ತಿ ಸೇವೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು ಶುಕ್ರವಾರ ಆರತಿ ಬಾನ ನಡೆಯಿತು.
ಇಂದು (ಶನಿವಾರದಂದು) ಸಂಜೆ ಬೆಳಗುಲಿ ರಂಗನಾಥ ಸ್ವಾಮಿ,ಕೆಂಚರಾಯಸ್ವಾಮಿ ಹಾಗೂ ಜಾಲಿ ಮರದಮ್ಮನವರ ಆಗಮದೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ಸಿಡಿ ಕಾರ್ಯ ನೆರವೇರಲಿದೆ
ಏ.೩ ರ ಭಾನುವಾರದಂದು ಬೆಳಿಗ್ಗೆ ೧೦ ಗಂಟೆಗೆ ಅಗ್ನಿಕೊಂಡೋತ್ಸವ ಹಾಗೂ ಹೊಸಕೆರೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ನಡೆಯಲಿದೆ.
ಸೋಮವಾರದಂದು ಬ್ರಹ್ಮರಥೋತ್ಸವ ,ಬ್ರಾಹ್ಮಣರ ಸಂತರ್ಪಣೆ ಹಾಗೂ ವಸಂತ ನಡೆಯಲಿದೆ.ಅದೇ ದಿನ ಸಂಜೆ ಗ್ರಾಮಸ್ಥರಿಂದ ಶ್ರೀ ದೇವಿ ಮಹಾತ್ಮೆ ನಾಟಕ ನಡೆಯಲಿದೆ.
ಮಂಗಳವಾರದಂದು ಸಂಜೆ ಅವಭೃಥಸ್ನಾನ ಹಾಗೂ ಧ್ವಜಾ ಅವರೋಹಣದೊಂದಿಗೆ ಜಾತ್ರೆಗೆ ತೆರೆಬೀಳಲಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ