ತಪ್ಪು ಮಾಹಿತಿಯಿಂದ ಪೋಲಿಸ್ ಠಾಣೆ ಮುಂದೆ ರಸ್ತೆ ತಡೆ
-------------------------------
ಹುಳಿಯಾರು:ಪಟ್ಟಣದ ಶಂಕರಪುರ ಬಡಾವಣೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು(೧೫) ಅಪಹರಿಸಿ ಶಾಲಾ ಆವರಣದಲ್ಲಿ ಅತ್ಯಾಚಾರ ಎಸಗಿದ ಪ್ರಕರಣ ಶನಿವಾರ ರಾತ್ರಿ ಜರುಗಿದ್ದು ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಬಾಲಕಿಯ ಮೇಲೆ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಖಂಡಿಸಿ ರಸ್ತೆ ತಡೆ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. |
ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಹುಳಿಯಾರು ಠಾಣೆಯ ಮುಂದೆ ಜಮಾಯಿಸಿರುವ ಜನ |
ತೀರಾ ನಿತ್ರಾಣವಾಗಿದ್ದ ಬಾಲಕಿಯನ್ನು ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ತಾಲ್ಲೂಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆರೋಪಿ ಯುವಕನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು ಈತನ ಮೇಲೆ ಪೋಕ್ಸೋ ಕಾಯ್ದೆ( ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ),ಅನುಸೂಚಿತ ಜಾತಿ ಬುಡಕಟ್ಟು ಪ್ರತಿಬಂಧಕ ನಿಬಂಧನೆ ಕಾಯ್ದೆ,ಐಪಿಸಿ ೩೬೬ ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
-----------------
ಅಪ ಪ್ರಚಾರ,ರಸ್ತೆ ತಡೆ : ಇದೆಲ್ಲದರ ನಡುವೆಯೆ ಬಾಲಕಿ ಮೇಲೆ ಗುಂಪು ಅತ್ಯಾಚಾರ ನಡೆದಿದೆ ಎಂಬ ಗಾಳಿಸುದ್ದಿ ಹರಡಿ ಅತ್ಯಾಚಾರಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಠಾಣೆಯ ಮುಂದೆ ಸಾಕಷ್ಟು ಜನ ಜಮಾಯಿಸಿ ರಸ್ತೆ ತಡೆ ನಡೆಸಿದ ಘಟನೆ ಕೂಡ ಜರುಗಿತು.ಹಬ್ಬಕ್ಕೆಂದು ಬಂದ್ದಿದ್ದ ಯವಕರು ಗುಂಪಾಗಿ ಆಗಮಿಸಿ ಪೋಲಿಸರು ಕೇವಲ ಒಬ್ಬನ್ನನ್ನು ಮಾತ್ರ ಬಂಧಿಸಿದ್ದು ಉಳಿದ ನಾಲ್ವರನ್ನು ಕೂಡಲೆ ಬಂಧಿಸಬೇಕು ,ಯಾರದೇ ಒತ್ತಡಕ್ಕೆ ಮಣಿಯಬಾರದು ಎಂದು ಪೋಲಿಸರ ವಿರುದ್ಧ ಹರಿಹಾಯ್ದರು.
ಪ್ರಕರಣ ತೀವ್ರ ಸ್ವರೂಪ ಪಡೆಯುವ ಸೂಚನೆ ದೊರೆಯುತ್ತಿದ್ದಂತೆ ತಿಪಟೂರು ಡಿವೈಎಸ್ಪಿ ರವಿಕುಮಾರ್ ,ವೃತ್ತ ನಿರೀಕ್ಷಕ ಮಾರಪ್ಪ ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.ಗುಂಪು ಅತ್ಯಾಚಾರದ ಗಾಳಿಸುದ್ದಿ ನಂಬದೆ ತನಿಖೆಗೆ ಸಹಕರಿಸುವಂತೆ ಮುಖಂಡರಲ್ಲಿ ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.ಹೆಚ್ಚುವರಿ ಪೋಲಿಸ್ ಆಧೀಕ್ಷಕ ಮಂಜುನಾಥ್ ಕೂಡ ಆಗಮಿಸಿ ಮಾರ್ಗದರ್ಶನ ನೀಡಿದರು.
--------------------
ಮಾಜಿ ಜಿಪಂ ಅಧ್ಯಕ್ಷ ರಘುನಾಥ್, ಗ್ರಾಪಂ ಉಪಾಧ್ಯಕ್ಷ ಗಣೇಶ್,ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಬಡಗಿ ರಾಮಣ್ಣ, ಬಳೆಕಟ್ಟೆ ರಾಮಣ್ಣ,ದುರ್ಗಾ ಪರಮೇಶ್ವರಿ ದೇವಸ್ಥಾನ ಕನ್ವೀನರ್ ಹು.ಕೃ.ವಿಶ್ವನಾಥ್,ಗೋಪ್ಯಾನಾಯ್ಕ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ