ಹುಳಿಯಾರು: ಹುಳಿಯಾರಿನ ಕಲಾಬಡವಣೆಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಸೂಪರ್ ಮಿನಿಟ್ ಮಾದರಿಯಲ್ಲಿ ಆಟೋಟ ಸ್ಪರ್ದೆ ನಡೆಸಿ ಬಹುಮಾನ ವಿತರಿಸಲಾಯಿತು.
ಹುಳಿಯಾರಿನ ಕಲಾಬಡವಣೆಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಸೂಪರ್ ಮಿನಿಟ್ ಮಾದರಿಯಲ್ಲಿ ನಡೆಸಿದ ಆಟೋಟ ಸ್ಪರ್ದೆಯಲ್ಲಿ ವಿಜೇತರದವರಿಗೆ ಲೋಕೇಶ್ ಬಹುಮಾನ ವಿತರಿಸಿದರು. |
ವಿಕೇಟ್ ಹಿಟ್‌ನಲ್ಲಿ ಗಗನ, ಪವನ್, ಬಕೇಟ್ ಇನ್ ಬಾಲ್‌ನಲ್ಲಿ ಅಭಯ್‌ಕೃಷ್ಣ, ಗಗನ, ಬಲೂನ್ ಹೊಡೆಯುವುದರಲ್ಲಿ ಹರೀಶ, ರಾಧಾ ಬಹುಮಾನ ಪಡೆದರು.
ಸ್ಟಿಕರ್ ಅಂಟಿಸುವುದರಲ್ಲಿ ಅನುಷಾ, ಕಾವ್ಯ, ಕಪ್ಪು ಜೋಡಿಸುವುದರಲ್ಲಿ ಹರೀಶ, ಲಕ್ಷ್ಮೀ, ನಟ್ ಜೋಡಿಸುವುದರಲ್ಲಿ ಅಭಿನಂದನ್, ಲಕ್ಷ್ಮೀ, ಚಮಚ ಗೋಲಿ ಓಟದಲ್ಲಿ ಪವನ್ ಹಾಗೂ ಗಗನ್ ಬಹುಮಾನ ಪಡೆದರು.
ಹಿರಿಯನಾಗರೀಕರಾದ ಹುಳಿಯಾರಮ್ಮ, ಅನಸೂಯಮ್ಮ, ಶಿವಮ್ಮ, ಪೂರ್ಣಮ್ಮ, ಇಲ್ಲಿನ ನಿವಾಸಿಗಳಾದ ಲೋಕೇಶ್, ಕುಸುಮಾ, ಗೀತಾ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ